Advertisement

3,400 ವರ್ಷ ಹಿಂದಿನ ಪ್ರಾಚೀನ ನಗರ ಪತ್ತೆ

10:32 AM Jun 07, 2022 | Team Udayavani |

ಬಾಗ್ಧಾದ್‌: ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ನೀರು ಬರಿದಾದಾಗ ಅದರೊಳಗೆ ಮುಳುಗಿದ್ದ ಹಳೆಯ ಶ್ರೀ ವೇಣುಗೋಪಾಲ ದೇವಸ್ಥಾನ ಕಂಡುಬರುವಂತೆ, ಇರಾಕ್‌ನ ಕುರ್ದಿಶ್‌ ಪ್ರಾಂತ್ಯದಲ್ಲಿ, ವಿಶಾಲವಾದ ಜಲಾಶಯವೊಂದರಲ್ಲಿ ಮುಳುಗಿಹೋಗಿದ್ದ 3,400 ವರ್ಷಗಳ ಹಿಂದಿನ ನಗರವೊಂದು ಪುನಃ ಕಾಣಿಸಿಕೊಂಡಿದೆ. ಆದರೆ, ಈ ನಗರ ಕಾಣಿಸಿಕೊಂಡಿರುವುದು ಇದೇ ಮೊದಲು.

Advertisement

ಕುರ್ದಿಷ್‌ ಪ್ರಾಂತ್ಯದ ಕೆಮುನ್‌ ಎಂಬಲ್ಲಿ ಟಿಗ್ರಿಸ್‌ ಎಂಬ ನದಿಗೆ ಜಲಾಶಯವೊಂದನ್ನು ದಶಕಗಳ ಹಿಂದೆಯೇ ಕಟ್ಟಲಾಗಿದೆ. ಆಗಿನಿಂದ ಇಲ್ಲಿಯವರೆಗೆ ನದಿಯಲ್ಲಿ ನೀರು ಯಥೇತ್ಛವಾಗಿ ಹರಿಯುತ್ತಿತ್ತು. ಈಗ ಈ ಪ್ರಾಂತ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಮಳೆಯಿಲ್ಲದ ಕಾರಣ ಟ್ರಿಗ್ರಿಸ್‌ ನದಿಯಲ್ಲಿ ನೀರು ಬತ್ತಿ ಹೋಗಿದೆ. ಅದರ ಪರಿಣಾಮದಿಂದಾಗಿ ಜಲಾಶಯವೂ ಬರಿದಾಗಿದ್ದು ಅದರ ಹಿನ್ನೀರಿನಲ್ಲಿ ಮುಳುಗಿ ಹೋಗಿದ್ದ ಪುರಾತನ ನಗರ ಗೋಚರಿಸಿದೆ.

ವಿಷಯ ತಿಳಿದ ಕೂಡಲೇ, ಜರ್ಮನಿ ಹಾಗೂ ಕುರ್ದಿಶ್‌ ಪ್ರಾಂತ್ಯದ ಪ್ರಾಚ್ಯವಸ್ತು ತಜ್ಞರು ಆಗಮಿಸಿ ಸ್ಥಳದಲ್ಲಿ ಸಂಶೋಧನೆ ನಡೆಸಿದ್ದು, ಇದು ಕ್ರಿಸ್ತ ಪೂರ್ವ 1350ರಿಂದ 1550ರವರೆಗೆ ಅಸ್ತಿತ್ವದಲ್ಲಿದ್ದ ಮಿತ್ತಾನಿ ಸಾಮ್ರಾಜ್ಯದಲ್ಲಿ ಇದ್ದ ನಗರ ಇದಾಗಿತ್ತೆಂದು ತಿಳಿಸಿದ್ದಾರೆ.

ವ್ಯಾವಹಾರಿಕವಾಗಿ, ಸಾಂಸ್ಕೃತಿಕವಾಗಿ ಇದೊಂದು ಪ್ರಮುಖ ನಗರವಾಗಿತ್ತೆಂದೂ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next