ಹೈದರಾಬಾದ್ : ಸಾಮಾಜಿಕ ಮಾಧ್ಯಮದ ಋಣಾತ್ಮಕ ಪೋಸ್ಟ್‌ಗಳು, ಟೀಕೆಗಳು ಮತ್ತು ಟ್ರೋಲಿಂಗ್‌ಗಳು ತನ್ನ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿದೆ ಎಂದು ಖ್ಯಾತ ನಟಿ ಹಾಗೂ ಕಿರುತೆರೆ ನಿರೂಪಕಿ ಅನಸೂಯಾ ಭಾರದ್ವಾಜ್ ಅಳಲು ತೋಡಿಕೊಂಡಿದ್ದು, ವಿಡಿಯೋದಲ್ಲಿ,ಅವರು ಜೋರಾಗಿ ಅಳುತ್ತಿರುವುದನ್ನು ಕಾಣಬಹುದಾಗಿದೆ.
ಸುದೀರ್ಘ ಪೋಸ್ಟ್‌ನಲ್ಲಿ, ಸಾಮಾಜಿಕ ಮಾಧ್ಯಮವು ಆರಂಭದಲ್ಲಿ ಜನರು ಪರಸ್ಪರ ಸಂವಹನ ನಡೆಸಲು ವೇದಿಕೆಯಾಗಿತ್ತು, ಆದರೆ ಅದು ಈಗ ವಿಷಕಾರಿ ಮನಸ್ಥಿತಿ ಹೊಂದಿರುವ ಜನರ ಪೂರ್ಣ ಸ್ಥಳವಾಗಿ ವಿಕಸನಗೊಂಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
“ನಾನು ಅದನ್ನು ಕಠಿಣ ಸ್ಥಿತಿಯಲ್ಲಿ ಕಲಿಯುತ್ತಿದ್ದೇನೆ. ನಾನು ಈಗ ಸಂಪೂರ್ಣವಾಗಿ ಚೆನ್ನಾಗಿದ್ದೇನೆ”ಎಂದು ಅವರು ತಮ್ಮ ಪೋಸ್ಟ್‌ನ ಕೊನೆಯಲ್ಲಿ ಹೇಳಿದ್ದಾರೆ.
ಅನಸೂಯಾ ಭಾರದ್ವಾಜ್ ಆನ್‌ಲೈನ್ ಕಿರುಕುಳಕ್ಕೆ ಗುರಿಯಾಗಿದ್ದು, ಆಗಾಗ್ಗೆ ಟ್ರೋಲಿಂಗ್‌ಗೆ ಒಳಗಾಗುತ್ತಿದ್ದು, ತಾನು ಇನ್ನು ಮುಂದೆ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ತನ್ನ ಆನ್‌ಲೈನ್ ಚಟುವಟಿಕೆಯನ್ನು ಕಡಿಮೆ ಮಾಡುತ್ತೇನೆ ಎಂದು ಇತ್ತೀಚೆಗೆ ಹೇಳಿದ್ದರು.
ಹೈದರಾಬಾದ್‌ಗೆ ಹಿಂದಿರುಗುವ ಮೊದಲು ಅವರು ತನ್ನ ಕುಟುಂಬದೊಂದಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದು ತಿಂಗಳು ಕಳೆದಿದ್ದರು.
42 ರ ಹರೆಯದ ಅನಸೂಯಾ ಸೂಪರ್ ಹೀಟ್ ‘ಪುಷ್ಪ’ ಸೇರಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪುಷ್ಪ -2 ನಲ್ಲೂ ನಟಿಸುತ್ತಿದ್ದಾರೆ.