Advertisement

Anartha Movie Review; ‘ಅನರ್ಥ’ದಿಂದ ಅರ್ಥದೆಡೆಗೆ ಸಸ್ಪೆನ್ಸ್‌ ಯಾನ

11:07 AM Jun 08, 2024 | Team Udayavani |

ಹೊಸದೇನನ್ನೋ ಹೇಳಬೇಕೆಂಬ ತುಡಿತ ಚಿತ್ರರಂಗಕ್ಕೆ ಬರುವವರಲ್ಲಿ ಹೆಚ್ಚಿರುತ್ತದೆ. ಅದೇ ಕಾರಣದಿಂದ ಸಸ್ಪೆನ್ಸ್‌ ಅಂಶಗಳನ್ನು ಮುಖ್ಯವಾಗಿಟ್ಟುಕೊಂಡು ಹಲವು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ “ಅನರ್ಥ’.

Advertisement

ಆರಂಭದಲ್ಲಿ ಒಂದು ಲವ್‌ಸ್ಟೋರಿಯಂತೆ ಕಾಣುವ ಈ ಸಿನಿಮಾ ಮುಂದೆ ಸಾಗುತ್ತಾ ತನ್ನ ಮಗ್ಗುಲು ಬದಲಿಸುತ್ತದೆ. ನಾಯಕ ಹಾಗೂ ನಾಯಕಿಯ ಲಾಂಗ್‌ ಜರ್ನಿ ಹಲವು ತಿರುವುಗಳನ್ನು ಪಡೆಯುತ್ತದೆ. ಈ ತಿರುವುನಲ್ಲಿ ತೆರೆದುಕೊಳ್ಳುವ ಕೆಲವು ಅಚ್ಚರಿಯ ಅಂಶಗಳೇ ಈ ಸಿನಿಮಾದ ಜೀವಾಳ.

ಕಥೆಯ ಬಗ್ಗೆ ಹೇಳುವುದಾದರೆ, ಅವಕಾಶ್‌ ಹಾಗೂ ಆಕೃತಿ ಎಂಬ ಎರಡು ಪಾತ್ರಗಳ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಇವರಿಬ್ಬರಲ್ಲಿ ಪ್ರೀತಿ ಹುಟ್ಟಿರುತ್ತದೆ. ಬ್ರೇಕಪ್‌ ಎನ್ನುವ ಪದವನ್ನು ನಮ್ಮ ಮನಸ್ಸಿನಿಂದ ಅಳಿಸಿ ಹಾಕಿದ ನಂತರ, ಅಮಾವ್ಯಾಸೆಯ ದಿನ ಯಮಗಂಡ ಕಾಲದಲ್ಲಿ ಮದುವೆಯಾಗಲು ನಿರ್ಧರಿಸಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಒಂದು ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದಾಗ ಏನಾಗುತ್ತದೆ ಎಂಬುದು ಕಥಾಹಂದರ. ಮೊದಲೇ ಹೇಳಿದಂತೆ ಈ ಹಂತದಲ್ಲಿ ಬರುವ ಹಲವು ಘಟನೆಗಳು ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ಮಾಡಿದೆ.

ಮುಖ್ಯವಾಗಿ ಈ ಸಿನಿಮಾದ ಹೈಲೈಟ್‌ಗಳಲ್ಲಿ ಚಿತ್ರದ ಕ್ಲೈಮ್ಯಾಕ್ಸ್‌. ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ನಿರ್ದೇಶಕರು ಯೋಚಿಸುವ ಮೂಲಕ ಹೊಸದನ್ನು ಹೇಳಲು ಪ್ರಯತ್ನಿಸಿದ್ದಾರೆ. ಸಿನಿಮಾದ ನಿರೂಪಣೆ ಇನ್ನಷ್ಟು ಬಿಗಿಯಾಗಿದ್ದರೆ ಕಥೆಗೆ ಹೆಚ್ಚಿನ ಓಘ ಸಿಗುತ್ತಿತ್ತು. ನಾಯಕ ವಿಶಾಲ್‌ ಹಾಗೂ ನಾಯಕಿ ವಿಹಾನಿ ಈ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.

ಆರ್‌.ಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next