ಅನಾರ್ಕಲಿ ಅತ್ಯಂತ ಗಮನ ಸೆಳೆಯುವಂತಹ ಉದ್ದನೆಯ ಉಡುಪಾಗಿದ್ದು, ಪ್ರತಿಯೊಬ್ಬರ ಅಚ್ಚುಮೆಚ್ಚಿನ ಉಡುಪು ಕೂಡ ಹೌದು. ಇತ್ತೀಚೆಗೆ ಮತ್ತೆ ಈ ಉಡುಪು ಟ್ರೆಂಡಿಯಾಗಿದೆ. ಮದುವೆ ಸಮಾರಂಭಗಳು ಸಾಲು ಸಾಲಾಗಿ ಆರಂಭಗೊಂಡಿರುವುದರಿಂದ ವಾರ್ಡ್‌ರೋಬ್‌ಗಳಲ್ಲಿ ವಿವಿಧ ರೀತಿಯ ಉಡುಪುಗಳು ಜತೆಗೆ ಅನಾರ್ಕಲಿ ಶೈಲಿಯು ತುಂಬಿಕೊಂಡಿದೆ. ಇದು ಹಳೆ ಶೈಲಿಯಾದರು ಮತ್ತೆ ಮರುಕಳಿಸುತ್ತಿದೆ.
ಏನಿದು ಅನಾರ್ಕಲಿ ಉಡುಪು?
ಅನಾರ್ಕಲಿ ಸಲ್ವಾರ್ ಸೂಟ್ ಸಾಂಪ್ರದಾಯಿಕ ಉಡುಪುಗಳ ಒಂದು ರೂಪವಾಗಿದೆ. ಇದು ಮೊಘಲ್ ಚಕ್ರವರ್ತಿ ಕಾಲದಿಂದ ಪ್ರಸಿದ್ಧಿಯನ್ನು ಪಡೆದಿದೆ. ಇದು ಉದ್ದವಾದ ಫ್ರಾಕ್ ಶೈಲಿಯ ಮೇಲ್ಭಾ ಗವನ್ನು ಹೊಂದಿದೆ. ಇದು ಸಿಲೂಲೇಟ್‌ನ್ನು ಹೊಂದಿದೆ. ಇದನ್ನು ಚೂಡಿದಾರ ಶೈಲಿಯಾಗಿಯೂ ಧರಿಸಬಹುದು.
ಅನಾರ್ಕಲಿ ಸೂಟ್‌ಗಳು ಭಾರತೀಯ ಮದುವೆ ಸಮಾರಂಭಗಳಲ್ಲಿ ಅತ್ಯಂತ ಮೆಚ್ಚಿನ ಉಡುಪಾಗಿದೆ. ಪ್ರತಿಯೊಬ್ಬರೂ ಈ ಉಡುಪನ್ನು ಧರಿಸಲು ಇಷ್ಟಪಡುತ್ತಾರೆ. ಈ ಉಡುಪಿನ ಅಂದವನ್ನು ಹೆಚ್ಚಿಸಲು ಸರಳ ಉಪಾಯಗಳು ಇಲ್ಲಿವೆ.
· ಅನಾರ್ಕಲಿ ಜತೆಗೆ ಸುಂದರವಾದ ಸೂಟ್‌ಗಳನ್ನು ಧರಿಸಬಹುದು. ಇದು ಕುತ್ತಿಗೆಯ ಭಾಗದಲ್ಲಿ ನೀಳವಾದ ಮತ್ತು ಆಕರ್ಷಣೀಯ ವಿನ್ಯಾಸವನ್ನು ಹೊಂದಿರುವುದರಿಂದ ಬೇರೆ ಆಭರಣವನ್ನು ಧರಿಸಬೇಕಾಗಿಲ್ಲ.
· ಅನಾರ್ಕಲಿ ಸೂಟ್‌ಗಳು ಮಹಿಳೆಯರನ್ನು ರೋಯಲ್ ಮತ್ತು ಅತ್ಯಂತ ಸೊಗಸಾಗಿ ಕಾಣುವಂತೆ ಮಾಡುತ್ತದೆ. ಜುಮ್ಕಿ ಶೈಲಿಯ ಕಿವಿಯೋಲೆಗಳನ್ನು ಧರಿಸುವುದರಿಂದ ನಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು. ಜತೆಗೆ ಕುಂದನ್ ಅಥವಾ ಡೈಮಂಡ್ ಸ್ಟಡ್‌ಗಳನ್ನು ಬಳಸಿದರೆ ಉತ್ತಮವಾಗಿರುತ್ತದೆ. ಹಾಗೆಯೇ ಸಾಮಾನ್ಯ ಶುಭ ಸಮಾರಂಭಗಳಿಗೆ ಹೋಗುವುದಾದರೆ ಸಾಮಾನ್ಯ ವರ್ಣರಂಜಿತ ಕಲ್ಲುಗಳಿರುವ ಮತ್ತು ಮುತ್ತಿನ ಜುಮ್ಕಿಯನ್ನು ಧರಿಸುದರಿಂದ ಅಂದ ಇನ್ನಷ್ಟು ಹೆಚ್ಚುತ್ತದೆ.
· ಅನಾರ್ಕಲಿ ಸೂಟ್‌ಗಳು ಸಾಮಾನ್ಯವಾಗಿ ಉದ್ದವಾಗಿರುತ್ತದೆ ಇದನ್ನು ಇನ್ನಷ್ಟು ಆಕರ್ಷಿತಗೊಳಿಸಲು ಹೈ ಹೀಲ್ಸ್, ಶೂ ಧರಿಸಬಹುದು.
· ಅನಾರ್ಕಲಿ ಉಡುಪು ಸಾಮಾನ್ಯವಾಗಿದ್ದರೆ ಇದನ್ನು ಬನಾರಸ್ ದುಪ್ಪಟ್ಟದೊಂದಿಗೆ ಧರಿಸಿದರೆ ಇನ್ನಷ್ಟು ಆಕರ್ಷಕವಾಗಿ ಕಾಣಬಹುದು. ದುಪ್ಪಟ್ಟವನ್ನು ಧರಿಸಲು ಹಲವಾರು ವಿಧಾನಗಳಿವೆ. ಇದನ್ನು ಚೂಡಿದಾರ ಮಾದರಿಯಾಗಿಯೂ ಧರಿಸಬಹುದು. ಒಂದು ಬದಿಗೆ ದುಪ್ಪಟ್ಟವನ್ನು ಬಳಸಬಹುದು, ನಿಮ್ಮ ನಿಮ್ಮ ಅಲಂಕಾರಕ್ಕೆ ತಕ್ಕಂತೆ ಈ ಉಡುಪನ್ನು ಧರಿಸಬಹುದು.
· ಉದ್ದ ಮತ್ತು ನೇರವಾದ ಕೂದಲುಗಳನ್ನು ಹೊಂದಿದ್ದರೆ,ಫ್ರೀಸ್ಟೈಲ್ ಮಾದರಿಯಲ್ಲಿ ಬಳಸಿಕೊಳ್ಳಬಹುದು. ಗುಂಗುರು ಕೂದಲಿನವರು ಬನ್ ಶೈಲಿಯ ಕೇಶ ವಿನ್ಯಾಸದಿಂದ ಇನ್ನಷ್ಟು ಚಂದವನ್ನು ಹೆಚ್ಚಿಬಹುದು.
- ವಿಜಿತಾ, ಬಂಟ್ವಾಳ