Advertisement

ಅನಂತ್‌ನಾಗ್‌ “ಮಿಲಿಟರಿ’ಕನಸು

10:05 AM Mar 06, 2020 | Lakshmi GovindaRaj |

ಪ್ರತಿಯೊಬ್ಬರಿಗೂ ಒಂದೊಂದು ಆಸೆ ಇರುತ್ತದೆ. ಅದರಲ್ಲೂ ಅನೇಕರಿಗೆ ಮಿಲಿಟರಿ ಸೇರಬೇಕು, ದೇಶಸೇವೆ ಮಾಡಬೇಕೆಂಬ ಕನಸಿನೊಂದಿಗೆ ಸೇನೆ ಸೇರಲು ಪ್ರಯತ್ನಿಸಿರು ತ್ತಾರೆ. ಅದು ಸಾಧ್ಯವಾಗದೇ ಇದ್ದಾಗ ಮತ್ತೂಂದು ಕ್ಷೇತ್ರದತ್ತ ವಾಲುತ್ತಾರೆ. ಆದರೆ, ಆ ಕನಸು ಮಾತ್ರ ಯಾವತ್ತಿಗೂ ಜೀವಂತ. ಈಗ ಈ ಮಾತು ಯಾಕೆ ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ಹಿರಿಯ ನಟ ಅನಂತ್‌ನಾಗ್‌.

Advertisement

ಅನಂತ್‌ ನಾಗ್‌ ಬಹುಭಾಷೆಯಲ್ಲಿ ಬೇಡಿಕೆಯ ನಟರಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಯಾವುದೇ ಪಾತ್ರವಿರಲಿ ಲೀಲಾಜಾಲವಾಗಿ ಅಭಿನಯಿಸುವ ಮೂಲಕ ಸಿನಿಪ್ರೇಮಿಗಳ ನೆಚ್ಚಿನ ನಟರಾಗಿದ್ದಾರೆ. ಆದರೆ, ಅನಂತ್‌ ನಾಗ್‌ ಅವರಿಗೆ ಸೇನೆ ಸೇರಿ ದೇಶ ಸೇವೆ ಮಾಡುವ ಆಸೆ ಇತ್ತಂತೆ. ಈ ನಿಟ್ಟಿನಲ್ಲಿ ಎರಡು ಬಾರಿ ಪ್ರಯತ್ನಿಸಿದ್ದರು. ಸೇನೆ ಸೇರಬೇಕಿದ್ದ ತಮ್ಮ ಕನಸಿನ ಬಗ್ಗೆ ಅನಂತ್‌ ನಾಗ್‌ ಇತ್ತೀಚೆಗೆ ನಡೆದ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದ ಸಂವಾದದಲ್ಲಿ ತಮ್ಮ ಕನಸಿನ ಬಗ್ಗೆ ಮಾತನಾಡಿದ್ದಾರೆ.

ಅನಂತ್‌ ನಾಗ್‌ ಅವರಲ್ಲಿ ಸೇನೆ ಸೇರುವ ಕನಸು ಹುಟ್ಟಲು ಕಾರಣವಾಗಿದ್ದು ಎರಡು ಯುದ್ಧಗಳಂತೆ. 1962ರ ಚೀನಾ-ಭಾರತ ಹಾಗೂ 1965ರ ಪಾಕಿಸ್ತಾನ-ಭಾರತ ನಡುವಿನ ಯುದ್ಧ ಅನಂತ್‌ ನಾಗ್‌ ಅವರಲ್ಲಿ ಮಿಲಿಟರಿ ಕನಸು ಬಿತ್ತಿದವಂತೆ. ಈ ನಿಟ್ಟಿನಲ್ಲಿ ಅನಂತ್‌ನಾಗ್‌ ಅವರು ಒಂದು ಬಾರಿ ವಾಯುಸೇನೆಗೆ ಹಾಗೂ ಮತ್ತೂಮ್ಮೆ ಭೂ ಸೇನೆ ಸೇರಲು ಪ್ರಯತ್ನಿಸಿದ್ದರಂತೆ. ಆದರೆ, ಕಾರಣಾಂತರಗಳಿಂದ ಅದು ಆಗಲಿಲ್ಲ. ಹಾಗಾಗಿ, ನಟರಾಗಿ ಖ್ಯಾತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next