Advertisement

ತೆಲುಗು ಚಿತ್ರದಲ್ಲಿ ಅನಂತ್‌ನಾಗ್‌ ನಟನೆ

10:05 AM Nov 04, 2019 | Lakshmi GovindaRaju |

ಹಿರಿಯ ನಟ ಅನಂತ್‌ ನಾಗ್‌ ಸದಾ ಸಿನಿಮಾ ನಟನೆಯಲ್ಲಿ ಬಿಝಿಯಾಗಿರುತ್ತಾರೆ. ಹೊಸಬರಿಂದ ಹಿಡಿದು, ಸ್ಟಾರ್‌ ನಟರ ಚಿತ್ರಗಳಲ್ಲೂ ಅನಂತ್‌ನಾಗ್‌ ಅವರಿಗೆ ಪ್ರಮುಖ ಪಾತ್ರವಿರುತ್ತದೆ. ಸಿನಿಮಾಕ್ಕೆ ದೊಡ್ಡ ತಿರುವು ಕೊಡುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅನಂತ್‌ ನಾಗ್‌ ಅವರನ್ನು ತಮ್ಮ ಚಿತ್ರಕ್ಕೆ ಕರೆತರಬೇಕೆಂದು ಕನಸು ಕಾಣುವ ಸಿನಿಮಾ ಮಂದಿ ಸಾಕಷ್ಟಿದ್ದಾರೆ.

Advertisement

ಇದೇ ರೀತಿ ಕನಸು ಕಂಡ ತೆಲುಗು ನಿರ್ದೇಶಕ ಈಗ ತಮ್ಮ ನಿರ್ದೇಶನದ ಹೊಸ ಚಿತ್ರದಲ್ಲಿ ಅನಂತ್‌ನಾಗ್‌ ನಟಿಸುವಂತೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಅನಂತ್‌ ನಾಗ್‌ ಅವರು ತೆಲುಗು ಚಿತ್ರವೊಂದರಲ್ಲಿ ನಟಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎಂಬ ಸುದ್ದಿ ಜೋರಾಗಿ ಓಡುತ್ತಿದೆ. ತೆಲುಗಿನಲ್ಲಿ ತಯಾರಾಗುತ್ತಿರುವ “ಭೀಷ್ಮ’ ಚಿತ್ರದಲ್ಲಿ ಅನಂತ್‌ ನಾಗ್‌ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರಂತೆ.

ಈ ಮೂಲಕ 42 ವರ್ಷಗಳ ನಂತರ ಅನಂತ್‌ ನಾಗ್‌ ತೆಲುಗು ಚಿತ್ರದಲ್ಲಿ ನಟಿಸಿದಂತಾಗುತ್ತದೆ. 1977 ತೆರೆಕಂಡ “ಪ್ರೇಮಲೋಕಲು’ ಚಿತ್ರದಲ್ಲಿ ನಟಿಸಿದ್ದರು. ಆ ನಂತರ ತೆಲುಗಿನಿಂದ ಸಾಕಷ್ಟು ಅವಕಾಶಗಳು ಬಂದರೂ ಅನಂತ್‌ ನಾಗ್‌ ಅವರು ತೆಲುಗು ಚಿತ್ರಗಳಲ್ಲಿ ನಟಿಸಿರಲಿಲ್ಲ. ಈಗ “ಭೀಷ್ಮ’ ಚಿತ್ರದ ಮೂಲಕ ಮತ್ತೆ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಿತಿನ್‌, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ಅನಂತ್‌ ನಾಗ್‌ ಸಾವಯವ ಕೃಷಿಯಲ್ಲಿ ತೊಡಗಿರುವ ಬ್ರಹ್ಮಚಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಅನಂತ್‌ ನಾಗ್‌ ನಟಿಸಿರುವ “ಆಯುಷ್ಮಾನ್‌ ಭವ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೇ, “ರುದ್ರ ಪ್ರಯಾಗ’ ಸೇರಿದಂತೆ ಇನ್ನೊಂದಿಷ್ಟು ಚಿತ್ರಗಳಲ್ಲಿ ಅನಂತ್‌ ನಾಗ್‌ ಬಿಝಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next