ಸಭೆಯಲ್ಲಿ ಚರ್ಚೆ ನಡೆದಿದೆ. ಅನಂತಕುಮಾರ್ ಹೆಗಡೆ ಕೇಂದ್ರ ಸಚಿವರಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಮೂಲಕ ಅವರಿಗೆ ಕಿವಿಮಾತು ಹೇಳಿಸುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಇದಕ್ಕೆ ಪಕ್ಷದ ಹಿರಿಯ ನಾಯಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
Advertisement
ಅನಂತಕುಮಾರ್ ಹೆಗಡೆ ಅವರ ಕೆಲವು ಹೇಳಿಕೆಗಳು ಹಿಂದೂ ಮತಗಳನ್ನು ಬಿಜೆಪಿ ಪರ ಕ್ರೊಢೀಕರಿಸಲು ನೆರವಾಗುತ್ತಿದೆಯಾದರೂ ಸಂವಿಧಾನ ತಿದ್ದುಪಡಿ ಮಾಡಲು ಬಂದಿದ್ದೇವೆ ಎಂಬಂತಹ ಹೇಳಿಕೆಗಳಿಗೆ ವ್ಯಾಪಕ ಟೀಕೆವ್ಯಕ್ತವಾಗುತ್ತಿದೆ. ಇದು ಪಕ್ಷಕ್ಕೆ ಮುಜುಗರವನ್ನೂ ಉಂಟುಮಾಡುತ್ತಿದೆ ಎಂದು ಕೋರ್ ಕಮಿಟಿಯ ಕೆಲವು ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಅಲ್ಲದೆ, ಇನ್ನು ಮುಂದೆ ಇಂತಹ ಹೇಳಿಕೆಗಳನ್ನು ನೀಡದಂತೆ ಅವರಿಗೆ ಮನವರಿಕೆ ಮಾಡಬೇಕೆಂಬ ಮನವಿಯನ್ನೂ ಮುಂದಿಟ್ಟರು. ಆದರೆ, ಅನಂತ್‌ಕುಮಾರ್ ಹೆಗಡೆ ಕೇಂದ್ರ ಸಚಿವರಾಗಿರುವುದರಿಂದ ಈ ಬಗ್ಗೆ ಹೆಚ್ಚು ಚರ್ಚೆ ನಡೆಸಲು ನಿರಾಕರಿಸಿದ ಪ್ರಮುಖ ನಾಯಕರು, ಪ್ರಧಾನಿಯವರಿಂದ ಅವರಿಗೆ ಸಲಹೆ ಕೊಡಿಸುವುದಾಗಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ.
ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.