ಹೆಬ್ರಿ: ಉಡುಪಿ ತಾಲೂಕಿನ ಪೆರ್ಡೂರು ಕದಳೀಪ್ರಿಯ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಕೆ.ಜಿ. ರಾಘವೇಂದ್ರ ತಂತ್ರಿಗಳ ಧಾರ್ಮಿಕ ನೇತೃತ್ವದಲ್ಲಿ ಗುರುವಾರ ಶ್ರೀಮನ್ಮಹಾರಥೋತ್ಸವ ಸಂಪನ್ನಗೊಂಡಿತು.
ಬೆಳಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ, ರಥಹೋಮ, ರಥಸಂಪ್ರೋಕ್ಷಣೆ, ಕೊಡಿಪೂಜೆ, ಮಹಾಪೂಜೆ, ಮಧ್ಯಾಹ್ನ ರಥಾರೋಹಣ ನಡೆದು ಸಂಜೆ 6ಕ್ಕೆ ಶ್ರೀ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ರಾತ್ರಿ ದೀವಟಿಕೆ ಸಲಾಮ್, ಹಚ್ಚಡ ಸೇವೆ, ರಥಾವ ರೋಹಣ, ಪಲ್ಲಕ್ಕಿ ಸುತ್ತು, ತೆಪ್ಪೋತ್ಸವ, ವಾಲಗಮಂಟಪ ಪೂಜೆ, ವೇದಪಾರಾಯಣ, ಮಹಾಪೂಜೆ, ಶ್ರೀ ಭೂತಬಲಿ, ಕವಾಟಬಂಧನ, ಶಯನೋಲಗ ನಡೆದವು.
ಹಿರಿಯಡ್ಕ ಠಾಣಾಧಿಕಾರಿ ವಿನಾಯಕ ಬಿಲ್ಲವ ಮತ್ತು ಸಿಬಂದಿ ಸೂಕ್ತ ಬಂದೋಬಸ್ತು ಕಲ್ಪಿಸಿದ್ದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಅರ್ಚಕ ಕೇಶವ ಅಡಿಗ, ಆಡಳಿತಾಧಿಕಾರಿ ಎಚ್.ಆರ್.ಪೂರ್ಣಿಮಾ, ವ್ಯವಸ್ಥಾಪನ ಸಮಿತಿ ಸದಸ್ಯರಾದ ರಾಜ್ ಕುಮಾರ್ ಶೆಟ್ಟಿ ದೊಡ್ಡಮನೆ, ಬುಕ್ಕಿಗುಡ್ಡೆ ಶಿವರಾಮ ಶೆಟ್ಟಿ, ಶುಭಲಕ್ಷ್ಮೀ ಭಂಡಾರ್‌ಕರ್, ರಾಮಯ್ಯ ನಾಯ್ಕ, ಆಶಾ ಗಣೇಶ್ ಭಂಡಿ, ರಾಜು ಮೂಲ್ಯ, ದಿನೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ: ಪ್ರಸನ್ನ ಪೆರ್ಡೂರು