Advertisement
ಶಂಕರ್ ನಾಗ್ ಹುಟ್ಟಿದ್ದು ಉಡುಪಿಯಲ್ಲೇ
Related Articles
Advertisement
ಎಂದಿನಂತೆ ಪ್ರೀತಿಯ ತಮ್ಮ ಬಗ್ಗೆಯೂ ಒಂದೆರಡು ಮಾತನಾಡಿದ ನಟ ಅನಂತ್ ನಾಗ್, ಶಂಕರ್ ಗೆ ಮೊದಲು ನಟನೆಗಿಂತ ನಿರ್ದೇಶನದ ಮೇಲೆ ತುಂಬಾ ಆಸಕ್ತಿ ಇತ್ತು. ನಟನೆಯನ್ನೂ ಮಾಡು ಅಂತ ನಾನು ಅವನಿಗೆ ಸಲಹೆಯೊಂದನ್ನು ಕೊಟ್ಟಿದ್ದೆ. ಆ ಮೇಲೆ ಮಾಡಿದ ಸಿನಿಮಾವೇ ‘ಒಂದಾನೊಂದು ಕಾಲದಲ್ಲಿ’. ಆ ಕಾಲಘಟ್ಟದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಶಂಕರನಿಗೆ ಯಶಸ್ಸು ತಂದುಕೊಟ್ಟವು.
ಅದ್ರಲ್ಲೂ ಶಂಕರನ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿ ಸೂಪರ್ ಹಿಟ್ ಆಯ್ತು. ಈ ಧಾರಾವಾಹಿಯಲ್ಲಿ ನಾನು ಕೂಡ ನಟಿಸಿದ್ದೆ. ವಿಚಿತ್ರ ಏನಂದ್ರೆ ಶಂಕ್ರ ನೀನೆ ಇದ್ರಲ್ಲಿ ನಟನೆ ಮಾಡೋ ಅಂಥ ನಾನು ಹೇಳುವಾಗ ಅಣ್ಣ ನೀನು ನನ್ನ ಜೊತೆ ಇದ್ರೆ ಮಾತ್ರ ನಾನು ನಟನೆ ಮಾಡ್ತೀನಿ ಅಂದಿದ್ದ. ಆ ನಂತರ ನಾವಿಬ್ಬರೂ ಆ ಧಾರಾವಾಹಿಯಲ್ಲಿ ನಟಿಸಿದೆವು ಅಂತ ಅನಂತ್ ನಾಗ್ ಹೇಳಿಕೊಂಡ್ರು.
ಇವಳನ್ನು ಹೊಂಚು ಹಾಕಿ ಮದುವೆಯಾದೆ
ಚಾಮುಂಡೇಶ‍್ವರಿ ಸ್ಟುಡಿಯೋದಲ್ಲಿ ಶಂಕರ್ ‘ಆಟೋರಾಜ’ ಸಿನಿಮಾದಲ್ಲಿ ಕೆಲಸ ಮಾಡ್ತಿದ್ದ. ಅದೇ ವೇಳೆ ನಾನು ‘ನಾರದ ವಿಜಯ’ ಸಿನಿಮಾದಲ್ಲಿ ನಟಿಸುತ್ತಿದ್ದೆ. ಈ ವೇಳೆ ಗಾಯತ್ರಿ ಶಂಕರ ಜೊತೆ ಆಟೋ ರಾಜ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಳು. ಆಗ ನನ್ನ ಬಳಿ ಗಾಯತ್ರಿಯನ್ನು ಕರೆತಂದ ಶಂಕರ ಇವಳನ್ನು ಪರಿಚಯ ಮಾಡಿಸಿದ. ಆ ಮೇಲೆ ‘ಸುಖ ಸಂಸಾರಕ್ಕೆ 12 ಸೂತ್ರಗಳು’ ಸಿನಿಮಾ ವೇಳೆ ಹೊಂಚು ಹಾಕಿ ಇವಳನ್ನು ಮದುವೆಯಾದೆ ಎಂದು ಅನಂತ್ ನಾಗ್ ನಗುತ್ತಲೇ ಹೇಳಿಕೊಂಡರು.