Advertisement

ಅನಂತಶಯನಸ್ವಾಮಿ ಬ್ರಹ್ಮ ರಥೋತ್ಸವ

08:51 PM Mar 18, 2020 | Lakshmi GovindaRaj |

ಕುಣಿಗಲ್‌: ತಾಲೂಕಿನ ಹುತ್ರಿದುರ್ಗ ಹೋಬಳಿ ಬುಕ್ಕಸಾಗರ ಗ್ರಾಮದ ಅನಂತಶಯನಸ್ವಾಮಿಯ ಐದು ದಿನಗಳ ಕಾಲ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ 45 ನೇ ವರ್ಷದ ಬ್ರಹ್ಮರಥೋತ್ಸವ ಕಾರ್ಯಕ್ರಮವು ಕೊರೊನಾ ಎಫೆಕ್ಟ್ನಿಂದ ಮಾ.20 ರಂದು ಸರಳವಾಗಿ ಆಚರಿಸಲು ದೇವಸ್ಥಾನದ ಟ್ರಸ್ಟ್‌ ನಿರ್ಧರಿಸಿದೆ.

Advertisement

ಪೂಜಾ ಕಾರ್ಯಕ್ರಮಗಳು: ಬುಧವಾರದಿಂದ ಮಾ.22 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಾಲಯದಲ್ಲಿ ನಡೆಯಲಿವೆ. ಮಾ 18 ಪಂಜಮೃತ ಅಭಿಷೇಕ, ಅನಜ್ಞೆ, ಅನುರ್ವಾಣ ದೀಪ, ಅಂಕುರಾರ್ಪಣೆ, ವಿಶ್ವಕ್ಷೇನ ಪೂಜೆ, ಭಗವತ್‌ ವಾಸುದೇವ ಪುಣ್ಯಾಹ, ರಕ್ಷಾ ಬಂಧನ, ಮಧ್ವಗ್ರಹ, ಧ್ವಜಾರೋಹಣ,

ಯಾಗಶಾಲೆ ಪ್ರವೇಶ, ಕಳಶ ಸ್ಥಾಪನೆ, ಗುರುವಾರ ಬೆಳಗ್ಗೆ 10.30ಕ್ಕೆ ಪಂಚಾಮೃತ ಅಭಿಷೇಕ, ಕಲ್ಯಾಣೋತ್ಸವ, ಸಂಜೆ 6 ಗಂಟೆಗೆ ಗಜೇಂದ್ರಮೋಕ್ಷ, ಸುಪ್ರಭಾತ ಸೇವೆ, ಶಾತ್ತುಮಾರೈ, ಮಾಹಾಮಂಗಳಾರತಿ, ಪುಷ್ಪಾಲಕಾರ, ಉಯ್ನಾಲೋತ್ಸವ, ಶಯನೋತ್ಸವ, ಮಾ.20 ಬ್ರಹ್ಮರಥೋತ್ಸವ, ಮಾಗಡಿ ಕೃಷ್ಣದಾಸ್‌ ಮತ್ತು ಸಂಗಡಿಗರಿಂದ ಭ ಜನೆ, ಮಾ.21ಕ್ಕೆ ಪಲ್ಲಕ್ಕಿ ಉತ್ಸವ, ದೀಪಾಲಂಕಾರ,

ಮಾ.22 ಧ್ವಜರೋಹಣ, ವಸಂತೋತ್ಸವ ಕಾರ್ಯಕ್ರಮಗಳು ಸರಳವಾಗಿ ಆರಚಣೆ ಮಾಡಲಾಗುವುದು ಎಂದು ಟ್ರಸ್ಟ್‌ ಕಾರ್ಯದರ್ಶಿ ಗಂಗಶಾನಯ್ಯ ತಿಳಿಸಿದ್ದಾರೆ. ಬುಕ್ಕಸಾಗರ ಗ್ರಾಮದ ಅನಂತಶಯನಸ್ವಾಮಿ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದ್ದು ಈ ದೇವಾಲಯಕ್ಕೆ 600 ವರ್ಷಗಳ ಇತಿಹಾವಿದೆ.

ಅಭಿವೃದ್ಧಿ ಪತದತ್ತ ದೇವಾಲಯ: ಕುಣಿಗಲ್‌ನಿಂದ ಸುಮಾರು 10 ಕಿ.ಮೀ ದೂರದ ಅಂಚೇಪಾಳ್ಯ ಯಲಗಲವಾಡಿ ಹ್ಯಾಡ್‌ಪೋಸ್ಟ್‌ ರಸ್ತೆ ಮಾರ್ಗದಲ್ಲಿ ಬರುವ ಬುಕ್ಕಸಾಗರ ಗ್ರಾಮವು ತನ್ನದೇಯಾದ ಇತಿಹಾಸ ಪರಂಪರೆ ಹೊಂದಿದೆ ಇಲ್ಲಿ ಯಾವುದೇ ಜಾತಿ, ಮತ, ಪಂತ ಎಂಬುದು ಕಂಡು ಬರುತ್ತಿಲ್ಲ.

Advertisement

ದೇವಾಲಯಕ್ಕೆ ಒಂದುವರೆ ಎಕರೆ ಜಮೀನು ಇದೆ ಆ ಜಾಗದಲ್ಲಿ ದೇವಾಲಯ, ಭಕ್ತರ ತಂಗುವ ಎಂಟು ವಸತಿ ಗೃಹ, ಊಟದ ಹಾಲ್‌, ಅಡುಗೆ ಮನೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಶನಿವಾರ ದಾಸೋಹ ಇಲ್ಲಿ ನಡೆಯುತ್ತಿದೆ. ಹಸಿದು ಬರುವ ಭಕ್ತರ ಹೊಟ್ಟೆ ತುಂಬಿಸುವಂತಹ ಕೆಲಸ ಇಲ್ಲಿ ನಡೆಯುತ್ತಿದೆ.

ಪುರಾತನವಾಗಿರುವ ದೇವಾಲಯ ಮುಜರಾಯಿ ಮೂರನೇ ದರ್ಜೆಗೆ ಸೇರಿದೆ, ಇದರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿ.ಎಂ.ಪುಟ್ಟಸ್ವಾಮಯ್ಯ, ಗೌರವಾಧ್ಯಕ್ಷ ಡಿ.ಎ.ರಾಜಕುಮಾರ್‌, ಉಪಾಧ್ಯಕ್ಷರಾದ ಟಿ.ಜಯಕುಮಾರ್‌, ಜಿ.ಕೆ.ಅನಂತಯ್ಯ, ಸಹ ಕಾರ್ಯದರ್ಶಿ ಜಿ.ಕೆ.ಅನಂತರಾಮು, ಖಜಾಂಚಿ ಕೆ.ಗಂಗಶಾನಯ್ಯ ಸೇರಿದಂತೆ ಗ್ರಾಮಸ್ಥರು ಸೇರಿ ಶ್ರಮಿಸುತ್ತಿದ್ದಾರೆ. ಇದರ ಪ್ರತಿಫಲವಾಗಿ ದಿನ ಕಳೆದಂತೆ ದೇವಾಲಯ ಅಭಿವೃದ್ಧಿಯಾಗುತ್ತಿದೆ. ದೇವಾಲಯ ಮುಂಭಾಗ ರಾಜಗೋಪುರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಗಂಗಶಾನಯ್ಯ, ಟ್ರಸ್ಟ್‌ನ ಕಾರ್ಯದರ್ಶಿ

* ಕೆ.ಎನ್‌.ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next