Advertisement
ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಬ್ಯಾಂಕ್‌ಗಳ ವಿಲೀನ ಮಾಡಿದ ಪರಿಣಾಮ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪ್ರಶ್ನೆಪತ್ರಿಕೆ ಇರುತ್ತಿತ್ತು. ಇದರಿಂದ ಕನ್ನಡಿಗರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನಾವು ಐದಾರು ಜನ ಸಾಹಿತಿಗಳು ದೆಹಲಿಗೆ ಹೋಗಿ ಕೇಂದ್ರ ವಿತ್ತಮಂತ್ರಿ ಅರುಣ್‌ಜೇಟ್ಲಿ ಅವರಿಗೆ ಮನವಿ ಮಾಡಲು ನಿರ್ಧರಿಸಿದೆವು.
Related Articles
Advertisement
ರಾಜ್ ಬಿಡುಗಡೆಗೆ ನೆರವು: ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಮನುಷ್ಯನಿಗೆ ಅಧಿಕಾರ, ಅಂತಸ್ತು ಬರಬಹುದು. ಆದರೆ, ಸಾವು ಬೆನ್ನ ಹಿಂದೆಯೇ ಇರುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಅನಂತಕುಮಾರ್ ವಿಮಾನಯಾನ ಖಾತೆ ಸಚಿವರಾಗಿದ್ದರು, ನಾನು ರಾಜ್ಯ ಸಚಿವನಾಗಿದ್ದೆ. ಡಾ.ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಆ ಬಗ್ಗೆ ಚರ್ಚೆ ನಡೆದು, ಅಂದಿನ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರೊಂದಿಗೆ ಮಾತನಾಡಲು ಅನಂತಕುಮಾರ್‌ಗೆ ಜವಾಬ್ದಾರಿ ನೀಡಲಾಯಿತು.
ನಾನು ಕೂಡ ಅವರೊಂದಿಗೆ ತೆರಳಿದ್ದೆ. ಅನಂತಕುಮಾರ್, ಡಾ.ರಾಜ್ ಬಿಡುಗಡೆಗೆ ಅನುಸರಿಸಬೇಕಾದ ಕ್ರಮಗಳ ಕರುಣಾನಿಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಪಕ್ಷದ ಸಂಘಟನೆ ಹಾಗೂ ಜನಪ್ರತಿನಿಧಿಯಾಗಿ ಅತ್ಯಂತ ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸಿ, ಕರ್ನಾಟಕ ರಾಜ್ಯ ಹೆಮ್ಮೆಪಡುವಂತ ಸಾಧನೆ ಮಾಡಿ ಹೋಗಿದ್ದಾರೆ ಎಂದು ನೆನೆದರು. ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಮಾತನಾಡಿ, ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗೆ ಅನಂತಕುಮಾರ್,ಯಡಿಯೂರಪ್ಪ, ಈಶ್ವರಪ್ಪ ತ್ರಿಮೂರ್ತಿಗಳಂತೆ ದುಡಿದರು ಎಂದು ಸ್ಮರಿಸಿದರು.