Advertisement

ಅರ್ಕಾವತಿ ಉಳಿವಿಗೆ ಪಾದಯಾತ್ರೆ ನಡೆಸಿದ್ದ ಅನಂತ್‌

12:00 PM Nov 13, 2018 | Team Udayavani |

ಯಲಹಂಕ: ಅರ್ಕಾವತಿ ನದಿ ಉಳಿವಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಲು 2009ರಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯ ನೇತೃತ್ವ ವಹಿಸಿದ್ದ ಅನಂತಕುಮಾರ್‌, ಸಾವಿರಾರು ಯುವಕರಿಗೆ, ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದ್ದರು. ಅರ್ಕಾವತಿ ನದಿ ಉಳಿವು ಹಾಗೂ ಹೂಳು ತುಂಬಿ ಮುಚ್ಚಿಹೋಗಿದ್ದ ಕಾಲುವೆಗಳ ತೆರವಿಗಾಗಿ ಸರ್ಕಾರದ ಗಮನ ಸೆಳೆಯಲು 2009 ಸೆಪ್ಟೆಂಬರ್‌ 3ರಂದು ಹಮ್ಮಿಕೊಂಡಿದ್ದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

Advertisement

ಯಲಹಂಕ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ದಾಸರಹಳ್ಳಿ ಶಾಸಕರಾಗಿದ್ದ ಎಸ್‌.ಮುನಿರಾಜು ಮತ್ತು  ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್‌ ಭಾಗವಹಿಸಿದ್ದ ಪಾದಯಾತ್ರೆಯ ಮುಂಚುಣಿಯಲ್ಲಿ ನಿಂತಿದ್ದವರು ಅನಂತಕುಮಾರ್‌. ದೊಡ್ಡಬಳ್ಳಾಪುರದ ನಂದಿಬೆಟ್ಟದಿಂದ ಹೆಸರಘಟ್ಟ ಕೆರೆ ಮಾರ್ಗವಾಗಿ ತಿಪ್ಪಗೊಂಡನಹಳ್ಳಿವರೆಗೆ ನಡೆದ ಸುಮಾರು 8 ಕೀ.ಮೀ  ಪಾದಯಾತ್ರೆಯಲ್ಲಿ “ಹರಿಯಲಿ ಹರಿಯಲಿ ಅರ್ಕಾವತಿ ಹರಿಯಲಿ’,

“ಅರ್ಕಾವತಿ ನದಿ ಪುನಶ್ಚೇತನ ಶೀಘ್ರವೇ ಆಗಲಿ’, “ಬೇಕೇ ಬೇಕು ಅರ್ಕಾವತಿ ಬೇಕು’ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಅನಂತಕುಮಾರ್‌ ಅವರು ಸಾವಿರಾರು ಪಾದಯಾತ್ರಿಗಳನ್ನು ಉತ್ತೇಜಿಸಿದ್ದರು ಎಂದು ಯಲಹಂಕ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿಬ್ಬೂರು ಜಯಣ್ಣ  ಹಾಗೂ ನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ರಾಜಣ್ಣ ಸ್ಮರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next