ಮುಂಬಯಿ: ವಡಾಲ ಶ್ರೀರಾಮ ಮಂದಿರದಲ್ಲಿ ಅನಂತ ಚತುರ್ದಶಿ ವ್ರತಾಚರಣೆ ರವಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ, ಸಂಭ್ರಮದಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ವೇ| ಮೂ| ಸುಧಾಮ ಭಟ್, ವೇ| ಮೂ| ಗೋವಿಂದ ಆಚಾರ್ಯ, ಅನಂತ ಭಟ್ ಮತ್ತು ಇತರ ಅರ್ಚಕ ವೃಂದದವರಿಂದ ನೈವೇದ್ಯ ಪೂಜೆ, ಆರತಿ ನಡೆಯಿತು. ಹಿರಿಯ ಅರ್ಚಕ ಮೋಹನ್‌ದಾಸ್ ಆಚಾರ್ಯ, ಸದಸ್ಯರಾದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಶ್ರೀರಾಮ ಮಂದಿರ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ರಾಜನ್ ಭಟ್ ಮತ್ತು ಸಮಿತಿ ಸದಸ್ಯರ ಸಮ್ಮುಖದಲ್ಲಿ ಪ್ರಧಾನ ದೇವರಾದ ಭಗವಂತ ಅನಂತ ಪದ್ಮನಾಭ ಮತ್ತು ಶ್ರೀರಾಮ ದೇವರಿಗೆ ಮಹಾಮಂಗಳಾರತಿ ನಡೆಯಿತು.
ಮುಂಬಯಿ ಮತ್ತು ಉಪನಗರಗಳ ಜಿಎಸ್‌ಬಿ ದೇವಸ್ಥಾನಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕಾಮತ್ ಮತ್ತು ಕಾರ್ಯಾಧ್ಯಕ್ಷ ಮುಕುಂದ್ ಕಾಮತ್, ಜಿ. ಎಸ್. ಭಟ್, ಪೂಜಾ ಸಂಯೋಜಕ, ಕೋಶಾಧಿಕಾರಿ ಅನಂತ್ ಪೈ, ಪ್ರವೀಣ್ ಕಾಮತ್, ಮಧುಕರ್ ಪೈ, ಟ್ರಸ್ಟಿ ಪ್ರಮೋದ್ ಪೈ, ಸಚಿನ್ ಕಾಮತ್ ಪಾಲ್ಗೊಂಡಿದ್ದರು. ವಿಜಯ್ ನಾಯಕ್, ನಿಖೀಲ್ ಉಮೇಶ್ ಪೈ, ಪ್ರಕಾಶ್ ಭಟ್, ಹರಿಶ್ಚಂದ್ರ ಶ್ಯಾನ್‌ಭಾಗ್, ಅನಂತರಾಯ ಶ್ಯಾನ್‌ಭಾಗ್, ವೆಂಕಟ್ರಮಣ ಶೆಣೈ, ಸುನಂದಾ ನಾಯಕ್, ಉಷಾ ನಾಯಕ್ ನೇತೃತ್ವದಲ್ಲಿ ಮಹಿಳಾ ಸದಸ್ಯೆಯರು ಪಾಲ್ಗೊಂಡು ಸಹಕರಿಸಿದರು.
ಇದನ್ನೂ ಓದಿ:ಇಂದು ವಿಶ್ವ ಗುಲಾಬಿ ದಿನ; ಕ್ಯಾನ್ಸರ್ ರೋಗಿಗಳಿಗಿರಲಿ ನಮ್ಮೆಲ್ಲರ ಪ್ರೀತಿಯ ಹಾರೈಕೆ
ಕಾಶಿ ಮಠದ ಶ್ರೀನಿವಾಸ ಪ್ರಭು, ಎನ್. ಡಿ. ಶೆಣೈ, ಶಾಂತಿಕುಂಜ್ ಸೇವಾಶ್ರಮ ಟ್ರಸ್ಟ್‌ನ ಸದಸ್ಯರು, ಕಮಲಾಕ್ಷ ಸರಾಫ್, ನಗರ ಮತ್ತು ಉಪನಗರಗಳ ಜಿಎಸ್‌ಬಿ ಸಮಾಜದ ಇತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡರು. ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಧಾರ್ಮಿಕ ಕಾರ್ಯಕ್ರಮವು ನೆರವೇರಿತು.