Advertisement

ಇಟಲಿಯಲ್ಲಿ ಲಾಕ್‌ ಆದ ಆನಂದ್‌ ಪುತ್ರಿ

11:31 PM Mar 17, 2020 | Lakshmi GovindaRaj |

ಬಳ್ಳಾರಿ: ಇಟಲಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರಣ್ಯ ಸಚಿವ ಆನಂದ್‌ಸಿಂಗ್‌ ಅವರ ಪುತ್ರಿಗೂ ಕೊರೊನಾ ಕಂಟಕವಾಗಿ ಪರಿಣಮಿಸಿದೆ. ಇಟಲಿಯಲ್ಲಿ ಕೊರೊನಾ ಗಂಭೀರ ಸ್ವರೂಪ ಪಡೆದಿರುವುದರಿಂದ ಪುತ್ರಿಯನ್ನು ಅಲ್ಲಿಂದ ಭಾರತಕ್ಕೆ ಕರೆ ತರುವುದು ಸಚಿವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಸಚಿವ ಆನಂದ್‌ಸಿಂಗ್‌ ಅವರ ಹಿರಿಯ ಪುತ್ರಿ ವೈಷ್ಣವಿ ಸೇರಿ ಭಾರತ ಮೂಲದ ಸುಮಾರು 90 ಮಂದಿ ಇಟಲಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಇಟಲಿಯಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳೆಲ್ಲ ಭಾರತಕ್ಕೆ ಬರಲಾಗದ ಸ್ಥಿತಿ ಉಂಟಾಗಿದೆ. ಮಾ.11ರಂದು ವೈಷ್ಣವಿ ಸೇರಿ ಭಾರತ ಮೂಲದ ವಿದ್ಯಾರ್ಥಿಗಳೆಲ್ಲರೂ ಭಾರತಕ್ಕೆ ವಾಪಸ್ಸಾಗಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಆದರೆ, ಅಲ್ಲಿನ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಎಲ್ಲೂ ಹೋಗದಂತೆ ವಿಮಾನ ನಿಲ್ದಾಣದಲ್ಲೇ ಇವರನ್ನೆಲ್ಲ ಕೂಡಿ ಹಾಕಲಾಗಿದೆ. ಸದ್ಯ ಅವರಿಗೆ ಊಟ, ಉಪಾಹಾರದ ಕೊರತೆ ಎದುರಾಗಿದೆ. ಇಟಲಿ ಸರ್ಕಾರ ನಿರ್ಣಯ ಕೈಗೊಂಡಲ್ಲಿ ಎರಡೂ¾ರು ದಿನಗಳಲ್ಲಿ ವೈಷ್ಣವಿ ಭಾರತಕ್ಕೆ ಬರಲಿದ್ದಾರೆ ಎಂದು ಸಚಿವರ ಆಪ್ತ ಧರ್ಮೇಂದ್ರಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.