Advertisement
ನಗರದಲ್ಲಿ ಸೋಮವಾರ ತೇಜಸ್ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಂಸ್ಕೃತಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬೇಧ-ಭಾವ ಇರಬಾರದು. ಪುರುಷ-ಮಹಿಳೆ, ಬಡವ-ಶ್ರೀಮಂತ ಎಂಬ ತಾರತಮ್ಯದಿಂದ ಈ ಮೂರು ಕ್ಷೇತ್ರಗಳು ಶ್ರೀಮಂತಗೊಳ್ಳುತ್ತಿಲ್ಲ. ಬಡ ಮಕ್ಕಳೇ ಮೊಟ್ಟ ಮೊದಲು ಶಿಕ್ಷಣ ಪಡೆಯುವ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಖಾಸಗಿ ಸಂಘ-ಸಂಸ್ಥೆಗಳು, ದಾನಿಗಳು ಕೈಜೋಡಿಸಬೇಕು ಎಂದು ತಿಳಿಸಿದರು.
Related Articles
Advertisement
ನಿರಾಣಿ ಗ್ರೂಪ್ ಆಫ್ ಇಂಡಸ್ಟ್ರೀಸ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಸಕ್ಕರೆ ಕಾರ್ಖಾನೆಗಳು ಇಡೀ ರಾಷ್ಟ್ರದಲ್ಲಿಯೇ ಹೆಚ್ಚಿನ ಖ್ಯಾತಿ ಪಡೆದಿವೆ. ಸಕ್ಕರೆ ಕಾರ್ಖಾನೆಗಳ ಇತರೆ ಉತ್ಪನ್ನಗಳು ಸಹ ಹೊಸ ಹೊಸ ಪದ್ದತಿ ಅಳವಡಿಸಿರುವುದು ಶ್ಲಾಘನೀಯ ವಿಷಯವಾಗಿದೆ. ಸಕ್ಕರೆಯ ಜತೆಗೆ ಎಥೆನಾಲ್, ಸಿಎನ್‌ಜಿ ಸೇರಿದಂತೆ 12 ಸಹ ಉತ್ಪಾದನೆಗಳನ್ನು ತಯಾರಿಸುತ್ತಿದ್ದಾರೆ. ಇಂಥ ಉತ್ಪಾದನೆಗಳ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗಳು ಆಗಬೇಕು. ಸಗಣಿಯ ಉಪಯೋಗ ಹೆಚ್ಚಾಗಬೇಕಿದೆ.
ಸಗಣಿಯಿಂದ ಅನೇಕ ಉತ್ಪನ್ನಗಳನ್ನು ತಯಾರಿಕೆಯಿಂದ ಆರ್ಥಿಕ ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಶಿಕ್ಷಕಿಯಾಗಿ ಶಿಕ್ಷಣದ ಗುಣಮಟ್ಟ, ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ಈಗ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಮಾತೃ ಸ್ವರೂಪಿಣಿ ಆನಂದಿಬೆನ್ ಪಟೇಲ್ ಓರ್ವ ಪರಿಪೂರ್ಣ ಮಹಿಳೆಯಾಗಿದ್ದು ಮಾದರಿಯಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅನುಭವ ಹೊಂದಿರುವ ಆನಂದಿಬೆನ್ ಅವರು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಕನಸು ಹೊತ್ತಿದವರಾಗಿದ್ದಾರೆ ಎಂದು ಹೇಳಿದರು. ಅವರ ಆಗಮದಿಂದ ಜಿಲ್ಲೆಯ ಮಹಿಳೆಯರ, ಮಕ್ಕಳ ಸ್ಫೂರ್ತಿ ತುಂಬಲೆಂಬ ದೃಷ್ಟಿಯಿಂದ ಜಿಲ್ಲೆಗೆ ಕರೆತರಲಾಗಿದ್ದು, ಅವರ ಪ್ರೇರಣೆಯಿಂದ ಮುಂದಿನ ದಿನಗಳಲ್ಲಿ ನಿರಾಣಿ ಉದ್ಯಮ ಸಮೂಹದಿಂದ ಒಂದು ಕಾರ್ಖಾನೆಯಿಂದ ಪ್ರಾರಂಭಗೊಂಡ ಉದ್ಯಮ 100 ಕಾರ್ಖಾನೆ ಸ್ಥಾಪಿಸುವತ್ತ ಮುನ್ನಡೆಸಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯನ್ನು ಮೈಸೂರು ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ದಾವಣಗೆರೆ ಸಂಸದ ಸಿದ್ದೇಶ್ವರ ಮಾತನಾಡಿ, ಕೇವಲ ಒಂದು ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಮೂಲಕ ಪ್ರಾರಂಭದಲ್ಲಿ 500ರಿಂದ ಇಂದು ಲಕ್ಷಾಂತರ ಟನ್ಕಬ್ಬು ನುರಿಸುತ್ತಿದ್ದಾರೆ. ಅಲ್ಲದೇ ಸಾಕಷ್ಟು ಪ್ರಮಾಣದಲ್ಲಿ ಎಥನಾಲ್ ಉತ್ಪಾ ಸುವ ಮೂಲಕ ಏಶಿಯಾ ಖಂಡದಲ್ಲಿಯೇ ಹೆಗ್ಗಳಿಕೆಗೆ ಪಾತ್ರವಾಗಿದೆ. ಆತ್ಮ ನಿರ್ಭರ ಭಾರತ ಯೋಜನೆಗೆ ಅಪಾರ ಕೊಡುವ ನೀಡಿದ್ದಾರೆ. ಅನೇಕ ಅಭಿವೃದ್ಧಿ ಕೆಲಸಗಳನ್ನು ಸಹ ಮಾಡಿದ್ದಾರೆ. ಇದಕ್ಕೆ ಅವರ ಕುಟುಂಬದ ಎಲ್ಲ ಸದಸ್ಯರು ಸಾಥ್ ನೀಡುತ್ತಿದ್ದಾರೆ ಎಂದು ತಿಳಿಸಿದರು. ಸಾನಿಧ್ಯ ವಹಿಸಿದ್ದ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ತೇಜಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರಕಾಶ ತಪಶೆಟ್ಟಿ, ವಿಧಾನಪರಿಷತ್ ಸದಸ್ಯರಾದ ಹನಮಂತ ನಿರಾಣಿ, ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ನಾರಾಯಣಸಾ ಭಾಂಡಗೆ, ಮುಖಂಡ ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ವಿಜಯ ನಿರಾಣಿ, ತೇಜಸ್ ಅಂತಾರಾಷ್ಟ್ರೀಯ ಶಾಲೆಯ ಅಧ್ಯಕ್ಷೆ ಮಾಧುರಿ ಮುಧೋಳ, ತೇಜಸ್ ಪಿಯು ಕಾಲೇಜು ಪ್ರಾಂಶುಪಾಲೆ ಮೃಣಾಲಿ ಚೌಧರಿ, ಅನಾರಿಬೇನ್, ಶಹ, ಭಗವಾನದಾಸ್ ಜಾಜು, ಶ್ರೀರಂಗ ಖಾಸನಿಸ್ ಉಪಸ್ಥಿತರಿದ್ದರು. ಜಿಲ್ಲೆಯ ಮಹಿಳೆಯರು, ಹೆಣ್ಣು ಮಕ್ಕಳಿಗೆ ಶಿಕ್ಷಣದ ಜತೆಗೆ ಸರ್ವ ರಂಗದಲ್ಲೂ ಸಾಧಿಸುವ ಛಲ ಮೂಡಬೇಕು. ಆ ಪ್ರೇರಣೆ ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರಿಂದ ದೊರೆಯಲಿದೆ ಎಂಬ ವಿಶ್ವಾಸದಿಂದಲೇ ಇಂದಿನ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಗಿದೆ. ಮುಧೋಳದಲ್ಲಿ ಸಣ್ಣ ಒಂದು ಕಾರ್ಖಾನೆಯಿಂದ ಆರಂಭಗೊಂಡ ಉದ್ಯಮ ಸಮೂಹ ಇಂದು ಏಳಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ನಡೆಸುತ್ತಿದೆ. ರಾಜ್ಯಾದ್ಯಂತ 100 ಕಾರ್ಖಾನೆ ಆರಂಭಿಸುವ ಆಶಯವಿದೆ.
ಮುರುಗೇಶ ನಿರಾಣಿ, ಬೃಹತ್ ಮತ್ತು
ಮಧ್ಯಮ ಕೈಗಾರಿಕೆ ಸಚಿವ