Advertisement

ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಯುಪಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಕರೆ

11:44 AM Mar 01, 2022 | Team Udayavani |

ಬಾಗಲಕೋಟೆ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಒಡೆತನದ ತೇಜಸ್ ಅಂತಾರಾಷ್ಟ್ರೀಯ ವಸತಿ ಶಿಕ್ಷಣ ಸಂಸ್ಥೆಯು ಸೋಮವಾರ ಲೋಕಾರ್ಪಣೆಗೊಂಡಿತು.

Advertisement

ಬಾಗಲಕೋಟೆಯ ನವನಗರದಲ್ಲಿರುವ ತೇಜಸ್ ಇಂಟರ್ನ್ಯಾಷನಲ್ ಶಿಕ್ಷಣ ಅಂಗ ಸಂಸ್ಥೆಗಳ ಉದ್ಘಾಟನೆ ಕಾರ್ಯಕ್ರಮವನ್ನು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು, ಮಕ್ಕಳ ಶಿಕ್ಷಣಕ್ಕೆ ಹೆಚ್ಚು ನೀಡಬೇಕು. ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಅತ್ಯವಶ್ಯಕ. ನಿರಾಣಿ ಅವರು ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ನಿರಾಣಿ ಅವರ ಕುಟುಂಬದ ಸಾಧನೆ ಅಭಿನಂದನೀಯವಾಗಿದೆ. ಸಕ್ಕರೆ ಜೊತೆಗೆ ವಿವಿಧ ಪ್ರೊಡೆಕ್ಟ್ ಉತ್ಪಾದಿಸಿ ನಿರಾಣಿ ಗಮನ ಸೆಳೆದಿದ್ದಾರೆ ಎಂದರು.

ಶ್ರೀಮಂತ ಮಕ್ಕಳಂತೆ ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಸ್ಕೂಲ್ ಮಕ್ಕಳನ್ನ ಗುಜರಾತಿಗೆ ಕರೆ ತನ್ನಿ. ಸರ್ದಾರ್ ವಲ್ಲಭಾಯ್ ಪಟೇಲ್ ರ ಮೂರ್ತಿ ಸೇರಿದಂತೆ ಎಲ್ಲವನ್ನು ನೋಡಿ ಬರಲಿ. ನಾನು ಗುಜರಾತಿಗೆ ಬರಲು ಆಹ್ವಾನ ನೀಡುತ್ತೇನೆ. ಮಕ್ಕಳು ದೇಶದ ವಿವಿಧ ಪ್ರದೇಶದಲ್ಲಿ ಸಂಚಾರ ಮಾಡಿ, ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುವುದು ಅಗತ್ಯವಿದೆ ಆನಂದಿಬೆನ್ ಪಟೇಲ್ ಹೇಳಿದರು.

ಸಚಿವ ಮುರುಗೇಶ ನಿರಾಣಿ ಕಾರ್ಯಕ್ರಮದಲ್ಲಿ ಮಾತನಾಡಿ, ತಾವು ಬೆಳೆದು ಬಂದ ದಾರಿಯನ್ನು ವಿವರಿಸಿದರು. ನಿರಾಣಿ ಸಂಸ್ಥೆ 72 ಸಾವಿರ ಜನರಿಗೆ ಕೆಲಸ ಕೊಟ್ಟಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿಯನ್ನಾಗಿಸಿಕೊಂಡು ಬಾಗಲಕೋಟೆಯಲ್ಲಿ ಶಿಕ್ಷಣ, ನೀರಾವರಿ ಹಾಗೂ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ನೂರು ಕಾರ್ಖಾನೆಗಳನ್ನು ನಿರ್ಮಿಸಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿದ್ದೇವೆ ಎಂದರು.

Advertisement

ಈ ಸಂದರ್ಭದಲ್ಲಿ ದಾವಣಗೆರೆ ಸಂಸದ ಜಿ.ಎಂ. ಸಿದ್ದಶ್ವರ್ಹ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ  ಸೇರಿ ಹಲವರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next