Advertisement

Anandapura: ಮಳೆಯಿಂದ ಹಾನಿ: ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ ಭೇಟಿ

08:17 PM Aug 20, 2024 | Poornashri K |

ಆನಂದಪುರ: ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದ ನೂರಾರು ಎಕರೆ ಭತ್ತ ನಾಟಿ ಮಾಡಿದಾಗ ಗದ್ದೆಗಳು ಹಾಗೂ ರಸ್ತೆ, ಸೇತುವೆ ಕೊಚ್ಚಿ ಕೊಚ್ಚಿ ಹೋದ   ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ಮೇರೆಗೆ ಆಪ್ತ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಭೇಟಿ ನೀಡಿ ನಂತರ ಮಾತನಾಡಿದ ಅವರು ಸೋಮವಾರ ಸುರಿದ ಅಕಾಲಿಕ ಮಳೆಯಿಂದ ಮುಂಬಾಳು, ಸುಳೂಗೋಡು,  ಜೆಡಿಸರ , ತಾವರೆಹಳ್ಳಿ, ಅಡೂರು ಈ ಭಾಗದಲ್ಲಿ ನೂರಾರು ಎಕರೆ ಭತ್ತ  ನಾಟಿ ಮಾಡಿದ ಗದ್ದೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು ಭಾರಿ ನಷ್ಟ ಸಂಭವಿಸಿದೆ.

Advertisement

ರೈತರಿಗೆ ಹಾನಿಯಾದ ಬಗ್ಗೆ ತಕ್ಷಣವೇ ಸರ್ಕಾರಕ್ಕೆ ವರದಿ ಸಲ್ಲಿಸಿ ಹಾನಿಗೊಂಡ ಬೆಳೆಗೆ ಪರಿಹಾರ ಕೊಡಿಸುವುದಾಗಿ ತಿಳಿಸಿದರು. ಸಾಗರ ಕ್ಷೇತ್ರದಲ್ಲಿ ಈ ಹಿಂದೆ ಸುರಿದ ಬಾರಿ ಮಳೆಯಿಂದ ನೂರಾರು ಮನೆಗಳು ಕುಸಿದು ಹಾನಿ ಸಂಭವಿಸಿತ್ತು. ಈಗ ಸುರಿದ ಮಳೆಯಿಂದ ರೈತರ ಗದ್ದೆಗಳು ಕೊಚ್ಚಿ ಹೋಗಿ  ತುಂಬಾ ನಷ್ಟ ಸಂಭವಿಸಿದೆ. ತಕ್ಷಣವೇ ರೈತರು  ದಾಖಲೆಯೊಂದಿಗೆ ಕಂದಾಯ ಇಲಾಖೆಗೆ ಅರ್ಜಿ ನೀಡುವಂತೆ ತಿಳಿಸಿದರು.

ಕೊಚ್ಚಿ ಹೋದ ಸೇತುವೆ ಮತ್ತು ರಸ್ತೆ.
ಆನಂದಪುರ ಸಮೀಪದ  ಮುಂಬಾಳು ಹಾಗೂ  ಸೂಳಗೊಡು ಭಾಗದಲ್ಲಿನ ಕಿರು ಸೇತುವೆ, ರಸ್ತೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.  ಇದಕ್ಕೆ ತಕ್ಷಣವೇ  ತುರ್ತು ವ್ಯವಸ್ಥೆ ಕಲ್ಪಿಸಿ ಕೊಡುವಲ್ಲಿ ಗ್ರಾಮ ಆಡಳಿತ ಮುಂದಾಗಬೇಕು ಎಂದು  ತಿಳಿಸಿದರು.

ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಕೃಷಿ ಅಧಿಕಾರಿ ಚಂದ್ರ ಕುಮಾರ್, ತೋಟಗಾರಿಕಾ ಇಲಾಖೆ ಅಧಿಕಾರಿ ಉಲ್ಲಾಸ್, ಜಿಲ್ಲಾ ಪಂಚಾಯತ್ ಅಧಿಕಾರಿಗಳಾದ ಶಿವಣ್ಣ ,ಬೆನಕೇಶ್, ಕಂದಾಯ ಅಧಿಕಾರಿಗಳಾದ ಕವಿರಾಜ್, ಕೀರ್ತಿ, ಗೋವಿಂದ್ ಮೂರ್ತಿ,  ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಕುಮಾರ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಜೇಂದ್ರ ಯಾದವ್, ಪಿಡಿಒ ಮಂಜ ನಾಯಕ್ , ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ಕಳಸೆ  ಚಂದ್ರಪ್ಪ, ಬಗರ್ ಹುಕ್ಕ್ಂ ಸಮಿತಿ ಸದಸ್ಯ  ರವಿಕುಮಾರ್ ದಾಸ್ ಕೊಪ್ಪ,  ಪಕ್ಷದ ಮುಖಂಡರಾದ ಎನ್, ಉಮೇಶ್, ರಮಾನಂದ್ ಸಾಗರ್, ರೆಹಮತುಲ್ಲಾ, ಸೇರಿದಂತೆ  ಪಕ್ಷದ ಅನೇಕ ಮಂದಿ ಸೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next