Advertisement

Anandapura ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ

05:07 PM Jul 09, 2024 | Shreeram Nayak |

ಆನಂದಪುರ: ಮಳೆಯಿಂದ ಮನೆಗಳಿಗೆ ಹಾನಿಯಾದರೆ ತಕ್ಷಣವೇ ಗ್ರಾಮಾಡಳಿತ  ಸ್ಪಂದಿಸಬೇಕು ಎಂದು ಶಾಸಕ ಕೈಗಾರಿಕಾ ಹಾಗೂ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ  ಗೋಪಾಲಕೃಷ್ಣ ಬೇಳೂರು ತಿಳಿಸಿದರು.

Advertisement

ಮಲೆನಾಡಿನ ಬಹುತೇಕ ಭಾಗದಲ್ಲಿ ಮಳೆಯಾಗುತ್ತಿದ್ದು, ಅದರಲ್ಲೂ ಸಾಗರ ಕ್ಷೇತ್ರದ ಬ್ಯಾಕೋಡು ಹಾಗೂ ತುಮರಿ ಭಾಗದಲ್ಲಿ ಭಾರಿ ಮಳೆಯಾಗಿದ್ದು ಇದುವರೆಗೂ ಯಾವುದೇ  ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ ಎಂದರು.

ಅವರು ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಲಿತಮ್ಮ ಎಂಬುವರ ವಾಸದ ಮನೆ ಮಳೆಯಿಂದ ಗೋಡೆ ಕುಸಿದು ಬಿದ್ದಿದ್ದು  ಭೇಟಿ ನೀಡಿ  ಮನೆ ಕಳೆದುಕೊಂಡವರಿಗೆ  ಸಹಾಯಧನ ನೀಡಿ ಮಾತನಾಡಿದ  ಅವರು ರಾಜ್ಯದ ಬಹುತೇಕ ಕಡೆ ಬಾರಿ ಪ್ರಮಾಣದ ಮಳೆಯಾಗುತ್ತಿದ್ದು ಅನಾಹುತಗಳು ಸಂಭವಿಸಿದೆ. ಆದ್ದರಿಂದ ಮಳೆ ಯಾವ ಭಾಗದಲಾಗುತ್ತದೆ ಎಂಬುದು ತಿಳಿಯಲು ಸಾಧ್ಯವಿಲ್ಲ.  ಆದ್ದರಿಂದ  ಸಾಗರ ವಿಧಾನಸಭಾ ಕ್ಷೇತ್ರದ  ಅಧಿಕಾರಿಗಳು  ರಜೆ ಹಾಕದೆ ಕರ್ತವ್ಯ ನಿರ್ವಹಿಸಬೇಕು. ಮಳೆ ವಿಪರೀತವಾಗಿ  ಮನೆಗಳಿಗೆ ಅನಾಹುತ ಉಂಟಾದರೆ, ಗ್ರಾಮಡಳಿತ ತಕ್ಷಣ 10 ಸಾವಿರ ರೂಪಾಯಿಗಳ ಸಹಾಯಧನವನ್ನು ನೀಡಬೇಕು.

ರಾಜ್ಯ ಸರ್ಕಾರ ಈ ಬಾರಿ ಹೊಸ ಮನೆಗಳನ್ನು ನೀಡದೆ, ಸುಮಾರು ವರ್ಷಗಳ ಹಿಂದೆ ಸ್ಲಂ ಬೋರ್ಡ್ ನಲ್ಲಿ  ಆರಂಭಗೊಂಡ ಮನೆಗಳು ಇದುವರೆಗೂ ಪೂರ್ಣಗೊಂಡಿಲ್ಲ ಅಂತಹ ಮನೆಗಳನ್ನು ಈ ಬಾರಿ ಸಂಪೂರ್ಣಗೊಳಿಸುವ  ದೃಷ್ಟಿಯಿಂದ  ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವರೊಂದಿಗೆ ಮಾತನಾಡಿದ್ದು ಉಳಿದಂತಾ ಎಲ್ಲಾ ಮನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ವಾರಕ್ಕೆ ಎರಡು ಬಾರಿ ಔಷಧಿ ಸಿಂಪಡಣೆ ಮಾಡಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

Advertisement

ಗ್ರಾಮ ಪಂಚಾಯತ್ ಅಧ್ಯಕ್ಷ ರೇವತಿ ಕೋವಿ, ಉಪಾಧ್ಯಕ್ಷ ಚೌಡಪ್ಪ ವರದ ಮೂಲ, ಮಾಜಿ ಅಧ್ಯಕ್ಷರ ಶರತ್ ನಾಗಪ್ಪ, ಆನಂದ ಹರಟೆ, ಲೋಕೇಶ್, ಪದ್ಮಣ್ಣ, ಚೇತನ್ ರಾಜ್ ಕಣ್ಣೂರ್, ಸೋಮಶೇಖರ್ ಲೌಗೆರೆ, ಚಂದ್ರಪ್ಪ, ರೆಹಮತ್ತುಲ್ಲಾ,  ಉಮೇಶ್, ಕಂದಾಯ ಅಧಿಕಾರಿಗಳಾದ ಕವಿರಾಜ್, ರಘು, ಹಾಗೂ ಪಕ್ಕದ ಗ್ರಾಮದ ಅನೇಕ ಮುಖಂಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next