Advertisement

Anandapura: ತಾವರೆ ಹಳ್ಳಿ ಗ್ರಾಮದಲ್ಲಿ ಭೂ ಕುಸಿತ, ಆತಂಕದಲ್ಲಿ ಗ್ರಾಮಸ್ಥರು

05:19 PM Jul 20, 2024 | sudhir |

ಆನಂದಪುರ: ಕಳೆದ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗೌರಿಕೆರೆ ಕೋಡಿಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿ ಭೂಕುಸಿತ ಉಂಟಾಗುತ್ತಿದೆ.  ಗೌರಿ ಕೆರೆಯ ಕೋಡಿ ನೀರು ತಾವರೆಹಳ್ಳಿ ಗ್ರಾಮದ ಮೂಲಕ ಶರಾವತಿ ಸೇರಲಿದೆ.

Advertisement

ಕೊಡಿಯಲ್ಲಿ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ಭೂಕುಸಿತ ಉಂಟಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಕೊಡಿಯ ಪಕ್ಕದಲ್ಲಿ ಗ್ರಾಮದ ರಸ್ತೆಯಿದ್ದು ಭೂ ಕುಸಿತ ಮುಂದುವರೆದರೆ. ರಸ್ತೆ ಕೂಡ ಕುಸಿದು ಹೋಗುವುದಲ್ಲದೆ, ಅಂಗನವಾಡಿ ಸೇರಿದಂತೆ 10 ಕುಟುಂಬಗಳು ಸಂಪರ್ಕ ಕಳೆದುಕೊಳ್ಳುವುದಲ್ಲದೆ ಅನಾಹುತ ಸಂಭವಸುವ ಆದ್ಯತೆ ಇದೆ. ವಿಷಯ ತಿಳಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ  ಭೇಟಿ ನೀಡಿದರು. ಭೂಕುಸಿತವಾಗುತ್ತಿರುವ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪತಸಿಲ್ದಾರ್ ಅವರಿಗೆ ಗ್ರಾಮಸ್ಥರು ತ್ವರಿತವಾಗಿ  ಶಾಶ್ವತ ಪರಿಹಾರ ನೀಡುವಂತೆ ಮನವಿ ನೀಡಿದರು.  ಮನವಿಯನ್ನು ಸ್ವೀಕರಿಸಿ. ಈ  ಭೂಕುಸಿತದ  ವಿಚಾರವಾಗಿ    ತಕ್ಷಣವೇ ಸರ್ಕಾರದ ಗಮನಕ್ಕೆ ತರುವುದಾಗಿ ಪ್ರಭಾರಿ ಉಪ ತಹಸಿಲ್ದಾರ್ ಕವಿರಾಜ  ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದರು. ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ. ಪಂಚಾಯತ್ ಉಪಾಧ್ಯಕ್ಷ ರೂಪಕಲ, ಮಾಜಿ ಅಧ್ಯಕ್ಷ ನೇತ್ರಾವತಿ ಮಂಜುನಾಥ್, ಸದಸ್ಯ ಮೋಹನ್ ಕುಮಾರ್ ಕಾಲೋನಿ, ಕಂದಾಯ ಇಲಾಖೆಯ ಗೋವಿಂದ್ ಮೂರ್ತಿ, ರವೀಂದ್ರ, ರಿತೀಶ್, ತುಕ್ಕೋಜಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next