Advertisement

ಆನಂದ ಮಹಲ್‌ ಪಾರಂಪರಿಕ ಕಟ್ಟಡ ಸಂರಕ್ಷಣೆ ಕಾಮಗಾರಿ ವೀಕ್ಷಣೆ

04:44 PM Jan 29, 2022 | Shwetha M |

ವಿಜಯಪುರ: ನಗರದ ಐತಿಹಾಸಿಕ ಆನಂದ ಮಹಲ್‌ ಪಾರಂಪರಿಕ ಕಟ್ಟಡದಲ್ಲಿ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ ಸ್ಥಾಪಿಸಲು ಕಟ್ಟಡದ ಸಂರಕ್ಷಣೆ ಹಾಗೂ ಇತರೆ ಕಾಮಗಾರಿ ನಡೆದಿದ್ದು ಜಿಲ್ಲಾಧಿಕಾರಿ ಸುನೀಲಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಆನಂದ ಮಹಲ್‌ ಸಂರಕ್ಷಣೆಗಾಗಿ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ 5 ಕೋಟಿ ರೂ. ಮೊತ್ತದಲ್ಲಿ ರಾಜ್ಯ ಪುರಾತತ್ವ ಇಲಾಖೆ ಮೂಲಕ ಅನುಷ್ಠಾನಕ್ಕೆ ಮುಂದಾಗಿದೆ. ಸಂರಕ್ಷಣೆ ಕಾಮಗಾರಿ ಪ್ರಗತಿ ವೀಕ್ಷಣೆಗೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಸಂರಕ್ಷಣಾ ಕಮೀಟಿ ಸದಸ್ಯರಾದ ರಾಕೇಶ, ಸಹಾಯಕ ಪುರಾತತ್ವ ಸಂರಕ್ಷಣಾ ಅಧಿಕಾರಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಪೀಟರ್‌ ಅಲೇಕ್ಸಾಂಡರ್‌, ಅಮೀನ್‌ ಹುಲ್ಲೂರ, ಕಾಮಗಾರಿ ನಿರ್ವಹಣಾ ಎಂಜಿನಿಯರ್‌, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಅನಿಲಕುಮಾರ ಬಣಜಿಗೇರ, ಜಗದೇವ ಗುಣಕಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next