ನವದೆಹಲಿ: ಎನ್‌ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ, ಅವರ ಮಾಜಿ ಸಲಹೆಗಾರ ಆನಂದ್ ಸುಬ್ರಹ್ಮಣಿಯನ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಕೋ-ಲೊಕೇಶನ್ ಹಗರಣದ ಹಿನ್ನೆಲೆಯಲ್ಲಿ ದೆಹಲಿ ಸಿಬಿಐ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಈ ಹಗರಣವನ್ನು ತನಿಖೆ ಮಾಡಲು ಸಿಬಿಐನಿಂದ ವಿಶೇಷ ತನಿಖಾ ಪಡೆ ನೇಮಿಸಲಾಗಿದೆ. ಇದರಲ್ಲಿ 30 ಮಂದಿ ಅಧಿಕಾರಿಗಳಿದ್ದಾರೆ.
ಈ ಬಗ್ಗೆ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ ಸಿಬಿಐ, ಮಾ.6ರಂದು ಚಿತ್ರಾ ಮತ್ತು ಆನಂದ್ ನಡುವೆ ಜಟಾಪಟಿ ನಡೆದಿದೆ. ಇಬ್ಬರ ನಡುವೆ 2,500ಕ್ಕೂ ಅಧಿಕ ಇ-ಮೇಲ್ ವಿನಿಮಯವಾಗಿದೆ. ಆದರೂ ಆನಂದ್ ಬಗ್ಗೆ ತನಗೇನೂ ಗೊತ್ತಿಲ್ಲ ಎಂದೇ ಚಿತ್ರಾ ಹೇಳುತ್ತಿದ್ದಾರೆ ಎಂದಿದೆ.
ಇದೇ ವೇಳೆ ಚಿತ್ರಾ ಹೇಳಿರುವ ಹಿಮಾಲಯದ ಯೋಗಿಯ ಕುರಿತೂ ಕುತೂಹಲ ಮುಂದುವರಿದಿದೆ.