ಚುನಾವಣಾ ಪ್ರಚಾರ ಆರಂಭಗೊಂಡ ದಿನದಿಂದಲೂ ಸಿಂಗ್ ಅವರು ತಿಳಿ ಕೇಸರಿ ಬಣ್ಣದ ಅಂಗಿ ಧರಿಸಿ ಮತದಾರರನ್ನು ಭೇಟಿ ಮಾಡುತ್ತಿದ್ದು, ಇದರ ಹಿಂದೆ ಬಲವಾದ ಕಾರಣವಿದೆ ಎಂದು ಹೇಳಲಾಗುತ್ತಿದೆ. ಜ್ಯೋತಿಷಿಗಳ ಸೂಚನೆ ಮೇರೆಗೆ ಆನಂದ್ ಸಿಂಗ್ ತಿಳಿ ಕೇಸರಿ ಬಣ್ಣದ ಅಂಗಿ ಹಾಗೂ ಬಿಳಿಪ್ಯಾಂಟ್ ಧರಿಸುತ್ತಿದ್ದಾರೆ.
Advertisement
ಯಾವುದೇ ಕ್ಷುದ್ರ ಶಕ್ತಿಗಳ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ಈ ದಿರಿಸು ಧರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಆನಂದ್ ಸಿಂಗ್ ಮಾತ್ರ ಇದನ್ನು ಅಲ್ಲಗಳೆದಿದ್ದಾರೆ. ಗುರುವಾರ ಪ್ರಚಾರದ ವೇಳೆ ದಿರಿಸಿನ ಬಗ್ಗೆ ಪ್ರಶ್ನೆ ಮಾಡಿದಾಗ ನನಗೆ ಡ್ರೆಸ್ ಸೆನ್ಸ್ ಜಾಸ್ತಿಯಿದೆ, ಇಷ್ಟವಾಯಿತು. ಅದಕ್ಕೆ ಈ ಶರ್ಟ್ ಧರಿಸಿದ್ದೇನೆ. ಅಂಗಿಯ ಬಣ್ಣ ಇಷ್ಟವಾಗಿದ್ದರಿಂದ ಇಂತಹ 20 ಅಂಗಿ ಖರಿದಿಸಿದ್ದು, ಇದರ ಹಿಂದೆ ಇನ್ಯಾವ ಕಾರಣವೂ ಇಲ್ಲ ಎಂದು ಹೇಳಿದ್ದಾರೆ.