ಯಲ್ಲಾಪುರ : ತಾಲೂಕಿನ ಪ್ರತಿಷ್ಠಿತ ಬಿಕ್ಕು ಗುಡಿಗಾರ್ ಕಲಾ ಕೇಂದ್ರಕ್ಕೆ ಪರಿಸರ ಸಚಿವ ಆನಂದಸಿಂಗ್ ಮಂಗಳವಾರ ಭೇಟಿ ನೀಡಿದ್ದರು.
ಕೆಲ ಹೊತ್ತು ಉಭಯ ಕುಶಲೋಪರಿಯಲ್ಲಿದ್ದ ಸಿಂಗ್ ಕಾರ್ಮಿಕ ಹಾಗೂ ಉ.ಕ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರರನ್ನೂ ಭೇಟಿಯಾಗಿಲ್ಲ. ಜೊತೆಗೆ ಸಚಿವ ಹೆಬ್ಬಾರರೂ ಆನಂದಸಿಂಗ್ ರನ್ನು ಭೇಟಿಯಾಗಲು ಬಾರದೇ ಅಚ್ಚರಿಯನ್ನುಮೂಡಿಸಿದೆ. ಗಳಸ್ಯ ಕಂಠಸ್ಯರಾಗಿದ್ದ ಇಬ್ಬರೂ ಹೀಗೆ ಪರಸ್ಪರ ಭೇಟಿಯಾಗದಿರುವುದು ಹಲವು ಚರ್ಚೆಗೆ ಅವಕಾಶಮಾಡಿದೆ.
ಆನಂದಸಿಂಗ್ ಬರುತ್ತಾರೆಂಬ ಸುದ್ದಿ ಸಚಿವ ಹೆಬ್ಬಾರ್ ಗೆ ತಿಳಿದಿತ್ತಾದರೂ ಈ ವೇಳೆ ಹೆಬ್ಬಾರರು ಮಾತ್ರ ಎಲ್ಲೂ ಕಣ್ಣಿಗೆ ಬೀಳಲಿಲ್ಲ. ತಾನು ಹೆಬ್ಬಾರನ್ನು ಭೇಟಿ ಮಾಡಲ್ಲ, ವೈಯಕ್ಕಿಕವಾಗಿ ರಾಜೇನಳ್ಳಿ ಪೀಠದೊಂದಿಗೆ ಬಂದಿದ್ದು ವಾಪಸ್ ಹೊಸಪೇಟೆಗೆ ಹೋಗುವುದಾಗಿ ತಿಳಿಸಿ ಯಾವುದೇ ರಾಜಕೀಯ ವಿಷಯ ಈ ಮಧ್ಯೆ ಚರ್ಚೆಯಿಲ್ಲ ಎಂದು ಹೇಳಿ ಮಾಧ್ಯಮದವರ ಕಣ್ಣುತಪ್ಪಿಸಿ ಆನಂದಸಿಂಗ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರವಾರ ಕಡೆಗೆ ಪ್ರಯಾಣ ಬೆಳೆಸಿದರು.
ಇದನ್ನೂ ಓದಿ :ವಿಶ್ವಾಸದಿಂದ ಕೆಲಸ ಆರಂಭಿಸಿ : ಅಫ್ಘಾನಿಸ್ತಾನದ ಸರಕಾರಿ ಅಧಿಕಾರಿಗಳಿಗೆ ತಾಲಿಬಾನ್ ಸೂಚನೆ
ಆನಂದಸಿಂಗ್ ಮತ್ತು ಸಚಿವ ಹೆಬ್ಬಾರ್ ಮುಂದೆ ರಹಸ್ಯ ಸ್ಥಳದಲ್ಲಿ ಭೇಟಿಯಾದರೋ ಎಂಬ ಗುಮಾನಿಗೆ ಕಾರಣವಾಗಿದೆ. ಇನ್ನೊಂದು ಮೂಲದ ಪ್ರಕಾರ ಪಟ್ಟಣದಿಂದ ಹೆದ್ದಾರಿಯಲ್ಲಿ ಕಾರವಾರ ಮಾರ್ಗದಲ್ಲಿ ಸಾಗಿ ಮಧ್ಯಂತರದಲ್ಲಿ ವಾಪಸ್ ತಿರುಗಿ ಶಿರಸಿ ಮಾರ್ಗವಾಗಿ ತೆರಳಿರಬಹುದೆನ್ನಲಾಗುತ್ತಿದೆ. ಸಿಂಗ್ ಅವರ ಮಾತಿನ ನೆಡೆ ಹಲವು ಸಂಶಯದ ಹುಟ್ಟಿಗೆ ಕಾರಣವಾಗಿದ್ದಂತೂ ನಿಜ.
ಅರಣ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ ಸಚಿವರ ಜೊತೆಗಿದ್ದರು.