ಬಳ್ಳಾರಿ: ಸಮ್ಮಿಶ್ರ ಸರಕಾರದಲ್ಲಿದ್ದಾಗ ಮೊದಲು ರಾಜೀನಾಮೆ ಕೊಟ್ಟಿದ್ದು ಆನಂದ್ ಸಿಂಗ್. ಎಲ್ಲರೂ ಕೊಡ್ತಿವಿ, ಕೊಡ್ತಿವಿ ಅಂತ ಹೇಳಿದರೂ, ಆದರೆ ಯಾರೂ ಕೊಡಲಿಲ್ಲ. ಆನಂದ್ ಸಿಂಗ್ ಮೊದಲು ರಾಜೀನಾಮೆ ನೀಡಿದ್ದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದ ಪತನದ ಬಗ್ಗೆ ಹೇಳಿಕೊಂಡರು.
ಆನಂದ್ ಸಿಂಗ್ ಮೊದಲು ರಾಜೀನಾಮೆ ನೀಡಿದ್ದರು. ನಂತರ ನಾವು ರಾಜೀನಾಮೆ ನೀಡಿದೆವು. ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಬರಲು ಕಾರಣವಾದೆವು. ಸಮ್ಮಿಶ್ರ ಸರಕಾರ ಪತನಕ್ಕೆ ಮುನ್ನುಡಿ ಬರೆದವರೆ ಆನಂದ್ ಸಿಂಗ್, ನಾಂದಿ ಹಾಡಿದ್ದು ಅವರೇ ಎಂದ ಸೋಮಶೇಖರ್ ಹೇಳಿದರು.
ಬಿಜೆಪಿಗೆ ಸೇರ್ಪಡೆಯಾದ ಎಂಟಿಬಿ ನಾಗರಾಜ್, ಶಂಕರ್ ಅವರಿಗೆ ಈಗ ಅವಕಾಶ ಸಿಕ್ಕಿದೆ. ಪ್ರತಾಪ್ ಗೌಡ ಪಾಟೀಲ್, ಮುನಿರತ್ನ ಚುನಾವಣೆಗೆ ಹೋಗುತ್ತಾರೆ. ಎಚ್ ವಿಶ್ವನಾಥ್ ಅವರಿಗೂ ಪಕ್ಷ ಸೂಕ್ತ ಸ್ಥಾನ ಮಾನ ಕೊಡುತ್ತದೆ ಎಂದರು.
ಈ ಬಗ್ಗೆ ಮುಖ್ಯಮಂತ್ರಿಗಳ ನಾನು ಖುದ್ಧಾಗಿ ಎರಡು ಗಂಟೆ ಮಾತನಾಡಿದ್ದೇವೆ. ಅವರೂ ಒಪ್ಪಿಕೊಂಡಿದ್ದಾರೆ. ಕೋರ್ ಕಮಿಟಿಯಿಂದ ಯಾವುದೇ ರೀತಿಯ ಕಿರಿಕ್ ಇಲ್ಲಾ. ಹೈಕಮಾಂಡ್ ತಿರ್ಮಾನ ಆಗಿದೆ. ವಿಶ್ವನಾಥ್ ಅವರು ಖುಷಿಯಾಗಿದ್ದಾರೆ ಎಂದರು.
ವಿಧಾನ ಪರಿಷತ್ ಟಿಕೆಟ್ ತಪ್ಪಲು ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ ಕಾರಣ ಎಂಬ ವಿಶ್ವನಾಥ್ ಅವರ ಹೇಳಿಕೆ ಸುಳ್ಳು, ಅವರಿಗೂ ಬಿಜೆಪಿಗೂ ಸಂಬಂಧವಿಲ್ಲಾ ಎಂದರು.
ಸಚಿವ ಆನಂದ್ ಸಿಂಗ್ ಮಾತನಾಡಿ, ಜಿಂದಾಲ್ ನಲ್ಲಿ ಕೊವಿಡ್-19 ಪಾಸಿಟಿವ್ ಕೇಸ್ ವಿಚಾರವಾಗಿ ನಾವು ಸಭೆ ಮಾಡಿದ್ದೇವೆ. ಕೋರ್ ಕಮಿಟಿಯಲ್ಲಿ ಮಾತನಾಡಿದ್ದೇವೆ. ಲಾಕ್ ಡೌನ್ ಮಾಡಬೇಕೆಂದರೆ ಲಾಕ್ ಡೌನ್ ಮಾಡುತ್ತೇವೆ ಎಂದರು.
ಈ ಬಗ್ಗೆ ಸೋಮವಾರ ಈ ಬಗ್ಗೆ ಸಭೆ ಮಾಡಿ ತಿರ್ಮಾನ ಮಾಡುತ್ತೇವೆ. ಜಿಂದಾಲ್ ಸಂಬಂಧ ತುರ್ತು ಸಭೆ ಮಾಡುತ್ತೇವೆ. ಜ್ಯುಬಿಲಿಯಂಟ್ ಕಾರ್ಖಾನೆಯನ್ನು ಮಾಡಿದ ಹಾಗೆ ಮಾಡಲಾಗುತ್ತದೆ ಎಂದರು.