ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನೆಯ ಎದುರು ಕಲಾವಿದೆಯೊಬ್ಬರು ಶಾಸ್ತ್ರೀಯ ನೃತ್ಯ ಮಾಡುತ್ತಿದ್ದು, ಆನೆ ಆಶೀರ್ವದಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
Advertisement
ಈ ಕುರಿತು ಮಹೀಂದ್ರ ಗ್ರೂಪ್‌ನ ಚೇರ್ಮನ್ ಆನಂದ ಮಹೀಂದ್ರ ಅವರು ಟ್ವೀಟ್ ಮಾಡಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅದ್ಬುತವಾಗಿದೆ. ದೇವಸ್ಥಾನದ ಆನೆ ನಮಗೆಲ್ಲರಿಗೂ ಹೊಸ ವರ್ಷಕ್ಕೆ ಸಂತೋಷದಿಂದ ಆಶೀರ್ವದಿಸುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.