ನವದೆಹಲಿ: ಯುವ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಅವರನ್ನು ಪ್ರೋತ್ಸಾಹಿಸುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಯುವ ಚೆಸ್ ಆಟಗಾರ ಆರ್.ಪ್ರಜ್ಞಾನಂದ ಪೋಷಕರಿಗೆ ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Kasaragod ವಿಷ ಸೇವನೆ : ತಾಯಿ ಮತ್ತು ಇಬ್ಬರು ಮಕ್ಕಳ ಸ್ಥಿತಿ ಗಂಭೀರ
ಇತ್ತೀಚೆಗೆ ಮುಕ್ತಾಯಗೊಂಡಿದ್ದ ವಿಶ್ವ ಚೆಸ್ ಪಂದ್ಯಾವಳಿಯ ಫೈನಲ್ ಟೈ ಬೇಕರ್ ಸ್ಪರ್ಧೆಯಲ್ಲಿ ಭಾರತದ ಆರ್. ಪ್ರಜ್ಞಾನಂದ ರನ್ನರ್ ಅಪ್ ಆಗಿ ಪಂದ್ಯವನ್ನು ಮುಕ್ತಾಯಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಜ್ಞಾನಂದ ಅವರಿಗೆ ಥಾರ್ ಕಾರನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ಉಡುಗೊರೆಯಾಗಿ ನೀಡಬೇಕೆಂದು ಹಲವರು ಟ್ವೀಟರ್ ನಲ್ಲಿ ಒತ್ತಾಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಆನಂದ್ ಮಹೀಂದ್ರಾ ಅವರು, ನಿಮ್ಮ ಭಾವನೆಯನ್ನು ನಾನು ಗೌರವಿಸುತ್ತೇನೆ. ನಿಮ್ಮಂತೆ ಹಲವಾರು ಮಂದಿ ಪ್ರಜ್ಞಾನಂದ್ ಅವರಿಗೆ ಕಾರನ್ನು ಉಡುಗೊರೆಯಾಗಿ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ನನ್ನಲ್ಲಿ ಮತ್ತೊಂದು ಐಡಿಯಾ ಇದೆ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಜ್ಞಾನಂದ ಪೋಷಕರನ್ನು ಪ್ರೋತ್ಸಾಹಿಸಲು ಬಯಸುತ್ತೇನೆ. ಈ ನಿಟ್ಟಿನಲ್ಲಿ ನಾನು ಪ್ರಜ್ಞಾನಂದ ಪೋಷಕರಿಗೆ XUV400 ಎಲೆಕ್ಟ್ರಿಕ್ ವಾಹನ ಉಡುಗೊರೆಯಾಗಿ ಕೊಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
“ನಿಮ್ಮ ಕ್ರಿಯಾಶೀಲಾ ಮನೋಭಾವ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಪ್ರಜ್ಞಾನಂದ ಅವರಿಗೆ ಥಾರ್ ಉಡುಗೊರೆಯನ್ನಾಗಿ ನೀಡಬೇಕೆಂಬ ಹಲವರ ಸಲಹೆಗೆ, ನಿಮ್ಮ ಪರ್ಯಾಯ ಐಡಿಯಾ ಶ್ಲಾಘನೀಯವಾದದ್ದು” ಎಂದು ಟ್ವೀಟ್ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.