ಮುಂಬೈ: ಪ್ರತಿಭೆಗಳನ್ನು ಸದಾ ಪ್ರೋತ್ಸಾಹಿಸುವ ಮಹೀಂದ್ರ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಅವರು ಇದೀಗ ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತೆ ಶೀತಲ್ ದೇವಿ ಅವರ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಶೀತಲ್ ದೇವಿ ಅವರಿಗೆ ಮಹೀಂದ್ರಾ ಕಾರನನ್ನು ನೀಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಹ್ಯಾಂಗ್ ಝೂ ನಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್ ಕೂಟದಲ್ಲಿ 16 ವರ್ಷದ ಶೀತಲ್ ದೇವಿ ಅವರು ಬಿಲ್ಗಾರಿಕೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಕೈಗಳಿರದ ಶೀತಲ್ ಅವರು ತನ್ನ ಕಾಲುಗಳ ಸಹಾಯದಿಂದಲೇ ಬಿಲ್ಗಾರಿಕೆ ಮಾಡುತ್ತಾರೆ. ಏಷ್ಯನ್ ಗೇಮ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು, ಎರಡು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.
ಶೀತಲ್ ಬಗ್ಗೆ ಬರೆದುಕೊಂಡಿರುವ ಆನಂದ್ ಮಹೀಂದ್ರ, “ನನ್ನ ಜೀವನದಲ್ಲಿ ಇನ್ನೆಂದೂ ನನ್ನ ಜೀವನದಲ್ಲಿ ಸಣ್ಣ ಸಣ್ಣ ವಿಷಯಗಳ ಬಗ್ಗೆ ದೂರುವುದಿಲ್ಲ. ನಮ್ಮಿಂದ ಯಾವುದೇ ಕಾರನ್ನು ಬೇಕಾದರೂ ಆಯ್ಕೆ ಮಾಡಿ, ನಾವು ನಿಮಗೆ ನೀಡುತ್ತೇವೆ ಮತ್ತು ನಿಮಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡುತ್ತೇವೆ” ಎಂದಿದ್ದಾರೆ.