Advertisement

ನೂತನ ಶೈಲಿಯ ಜೀಪ್ ತಯಾರಿಸಿದ ವ್ಯಕ್ತಿಗೆ ಹೊಸ ವಾಹನ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

01:20 PM Jan 26, 2022 | Team Udayavani |

ಮುಂಬೈ: ಹಲವು ವಾಹನಗಳ ಬಿಡಿಭಾಗಗಳನ್ನು ಉಪಯೋಗಿಸಿ ಹೊಸ ಮಾದರಿಯ ಕಿಕ್ ಸ್ಟಾರ್ಟ್ ಮಾಡುವ ಜೀಪ್ ತಯಾರಿಸಿದ್ದ ವ್ಯಕ್ತಿಗೆ ಮಹೀಂದ್ರಾ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ನೂತನ ವಾಹನವನ್ನು ಉಡುಗೊರೆಯಾಗಿ ನೀಡಿದ್ದಾರೆ.

Advertisement

ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ತಯಾರಿಸಿದ ಕಿಕ್-ಸ್ಟಾರ್ಟಿಂಗ್ ಜೀಪ್‍ನ ವೀಡಿಯೋ ಹಂಚಿಕೊಂಡಿದ್ದ ಆನಂದ್ ಮಹೀಂದ್ರಾ, ಅವರಿಗೆ ಬೊಲೆರೋ ಕಾರು ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ಮಹಾರಾಷ್ಟ್ರದ ದತ್ತಾತ್ರೇಯ ಲೋಹರ್ ಹಳೆಯ ವಾಹನದ ಬಿಡಿ ಭಾಗಗಳನ್ನು ಬಳಸಿ ಈ ವಾಹನ ಸಿದ್ಧಪಡಿಸಿದ್ದರು. ಇದಕ್ಕಾಗಿ 60 ಸಾವಿರ ರೂ. ಖರ್ಚು ಮಾಡಿದ್ದರು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ:ತೋತಾಪುರಿ ಆಡಿಯೋ ಟೀಸರ್‌ ಬಂತು: ‌ಕನ್ನಡವಿಲ್ಲ, ಉರ್ದು ಹಿಂದಿಯೇ ಎಲ್ಲಾ…

ಈ ವಿಡಿಯೋವನ್ನು ಟ್ವೀಟ್ ಮಾಡಿದ್ದ ಆನಂದ್ ಮಹೀಂದ್ರಾ, “ಇದು ಸ್ಪಷ್ಟವಾಗಿ ಯಾವುದೇ ನಿಯಮಗಳನ್ನು ಪೂರೈಸುವುದಿಲ್ಲ. ಆದರೆ ನಮ್ಮ ಜನರ ಜಾಣ್ಮೆ ಮತ್ತು ಸಾಮರ್ಥ್ಯಗಳನ್ನು ಮೆಚ್ಚುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ. ನಿಯಮಗಳನ್ನು ಉಲ್ಲಂಘಿಸಿ ಈ ವಾಹನ ನಿರ್ಮಾಣ ಮಾಡಿರುವ ಕಾರಣ ಸ್ಥಳೀಯ ಅಧಿಕಾರಿಗಳು ಈತನ ವಾಹನವನ್ನು ಓಡಿಸದಂತೆ ತಡೆಯುತ್ತಾರೆ. ನಾನು ವೈಯಕ್ತಿಕವಾಗಿ ಅವನಿಗೆ ಬೊಲೆರೊವನ್ನು ನೀಡ ಬಯಸುತ್ತೇನೆ. ಅವರ ವಾಹನವನ್ನು ‘ಮಹೀಂದ್ರಾ ರಿಸರ್ಚ್ ವ್ಯಾಲಿ’ ಯಲ್ಲಿ ಪ್ರದರ್ಶಿಸಬಹುದು” ಎಂದು ಬರೆದುಕೊಂಡಿದ್ದರು.

Advertisement

ಇದೀಗ ಆನಂದ್ ಮಹೀಂದ್ರಾ ಅವರು ದತ್ತಾತ್ರೇಯ ಲೋಹರ್ ಗೆ ಹೊಸ ಬೊಲೆರೋ ವಾಹನವನ್ನು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ತನ್ನ ವಾಹನವನ್ನು ಹೊಸ ಬೊಲೆರೊಗೆ ಬದಲಾಯಿಸುವ ಪ್ರಸ್ತಾಪವನ್ನು ಅವರು ಒಪ್ಪಿಕೊಂಡಿದ್ದಾರೆ. ನಿನ್ನೆ ಅವರ ಕುಟುಂಬವು ಬೊಲೆರೊವನ್ನು ಸ್ವೀಕರಿಸಿದೆ ಮತ್ತು ನಾವು ಅವರ ರಚನೆಯ ವಾಹನದ ಜವಾಬ್ದಾರಿಯನ್ನು ಹೆಮ್ಮೆಯಿಂದ ವಹಿಸಿಕೊಂಡಿದ್ದೇವೆ. ಇದು ನಮ್ಮ ರಿಸರ್ಚ್ ವ್ಯಾಲಿಯಲ್ಲಿನ ಎಲ್ಲಾ ಪ್ರಕಾರದ ಕಾರುಗಳ ಸಂಗ್ರಹದ ಭಾಗವಾಗಿರುತ್ತದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next