ತಮಿಳುನಾಡು : ತಮಿಳುನಾಡಿನ ಪೆರು ಸನಿಹದ ವಡಿವೇಲಪಾಳ್ಯಂನಲ್ಲಿ 1 ರೂ.ಗೆ ಒಂದು ಇಡ್ಲಿ ಕೊಟ್ಟು “ಇಡ್ಲಿ ಅಮ್ಮ’ ಎಂದೇ ಪ್ರಸಿದ್ಧವಾಗಿರುವ ಎಂ.ಕಮಲಾಥಲ್ ಅವರಿಗೆ ತಾಯಂದಿರ ದಿನಕ್ಕೆ ವಿಶೇಷ ಉಡುಗೊರೆ ಸಿಕ್ಕಿದೆ.
ಉದ್ಯಮಿ ಆನಂದ್ ಮಹೀಂದ್ರಾ ಇಡ್ಲಿ ಅಮ್ಮನಿಗಾಗಿ ಮನೆಯೊಂದನ್ನು ಕಟ್ಟಿಸಿದ್ದು, ಅದನ್ನು ಈ ವಿಶೇಷ ದಿನದಂದು ಅವರಿಗೆ ಹಸ್ತಾಂತರಿಸಿದ್ದಾರೆ. ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಮಾಡಿಕೊಂಡಿದ್ದ ಇಡ್ಲಿ ಅಮ್ಮನ ಬಗ್ಗೆ ಆನಂದ್ ಅವರು 2019ರಲ್ಲಿ ಟ್ವೀಟ್ ಮಾಡಿದ್ದು, ಅವರಿಗೆ ಮನೆ ಕೊಡುವುದಾಗಿ ಹೇಳಿದ್ದರು. ಇದೀಗ ತಮ್ಮ ಮಾತನ್ನು ಸತ್ಯ ಮಾಡಿದ್ದಾರೆ.
ಇದನ್ನೂ ಓದಿ : 2 ಬಾಟಲಿ ಕುಡಿದರೂ… ಎಣ್ಣೆಯಲ್ಲಿ ಕಿಕ್ ಇಲ್ಲ ಎಂದು ಗೃಹ ಸಚಿವರಿಗೆ ದೂರು ನೀಡಿದ ಆಸಾಮಿ !