Advertisement
ಟಿಒಎಸ್-1: ಬೆಂಕಿಯುಗುಳುವ ರಾಕೆಟ್‌ಗಳನ್ನು ಉಡಾವಣೆ ಮಾಡಬಲ್ಲ ವ್ಯವಸ್ಥೆಯಿದು. ಇದರಿಂದ ಹೊಮ್ಮುವ ರಾಕೆಟ್‌ಗಳು ನೆಲಕ್ಕಪ್ಪಳಿಸಿದ ತಕ್ಷಣ ಆ ಜಾಗದಲ್ಲಿರುವ ವಸ್ತುಗಳು ಸುಟ್ಟು ಬೂದಿಯಾಗುತ್ತವೆ. ಇದನ್ನು ಈ ಹಿಂದೆ ಅಫ್ಘಾನಿಸ್ತಾನ, ಇತ್ತೀಚೆಗೆ ಸಿರಿಯಾದ ಮೇಲೆ ರಷ್ಯಾ ಬಳಸಿತ್ತು.ಟಿ-72: ರಾಕೆಟ್‌ಗಳನ್ನು ಉಡಾಯಿಸುವ ವ್ಯವಸ್ಥೆಯನ್ನು ಹೊತ್ತೂಯ್ಯುವ ವಾಹನವಿದು. ಇದನ್ನು ಟಿ-27 ಟ್ಯಾಂಕ್ ಎನ್ನುತ್ತಾರೆ. ಇದೇ ಟ್ಯಾಂಕ್‌ನಲ್ಲಿ ಟಿಒಎಸ್-1 ಅನ್ನೂ ಇಟ್ಟುಕೊಳ್ಳಲಾಗಿದೆ.
ಬಿಎಂ-21: ಇದೂ ಕೂಡ ಹಲವು ರಾಕೆಟ್‌ಗಳನ್ನು ಉಡಾಯಿಸಬಲ್ಲ ವಾಹನ. ಇದನ್ನು ಉಕ್ರೇನಿನ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ದಾಳಿ ಮಾಡಲು ರಷ್ಯಾ ಬಳಸಿದೆ.
ಉರಗನ್: ಇವೆರಡೂ ಕೂಡ ಬಹು ಮಾದರಿಯ ರಾಕೆಟ್‌ಗಳನ್ನು ಉಡಾಯಿಸಬಲ್ಲ ವಾಹನಗಳು. ಉಕ್ರೇನಿನ ಕೆಲಭಾಗಗಳ ಮೇಲೆ ರಾಕೆಟ್ ದಾಳಿಗೆ ಇದನ್ನು ಬಳಸಲಾಗಿದೆ ಎಂಬ ಅಂದಾಜಿದೆ.
ಬಿಎಂಪಿ3: ಶಸ್ತ್ರಾಸ್ತ್ರಸಜ್ಜಿತ ವಾಹನವಿದು. ಇದು ಸಾಂಪ್ರದಾಯಿಕವಾಗಿ ರಷ್ಯಾ ಭೂಸೇನೆ ಬಳಸುವ ವಾಹನ. ಇದು ಬಹುತೇಕ ಕಡೆ ಪತ್ತೆಯಾಗಿದೆ.
ಎಂಐ8, ಕೆಎ-52: ಇನ್ನೊಂದು ದೇಶದ ಮೇಲೆ ದಾಳಿ ಮಾಡುವಾಗ ವಾಯುಸೇನೆ ಸಕ್ರಿಯವಾಗಿರುತ್ತದೆ. ಸದ್ಯ ರಷ್ಯಾ ಸೇನೆ ಎಂಐ8, ಕೆಎ-52 ಹೆಲಿಕಾಪ್ಟರ್‌ಗಳನ್ನು ದಾಳಿಗೆ ಬಳಸಿದೆ. ಇವೂ ಸಾಂಪ್ರದಾಯಿಕ ಮಾದರಿಯವೇ ಆಗಿವೆ.
ಕ್ಯಾಲಿಬರ್: ಇದು ನಿರ್ದಿಷ್ಟ ಗುರಿಯೆಡೆಗೆ ವೇಗವಾಗಿ ಹೋಗಿ ಅಪ್ಪಳಿಸುವ ಕ್ಷಿಪಣಿ. ಇದನ್ನು ವಿಮಾನಗಳಿಂದ, ಹಡಗುಗಳಿಂದ, ಸಬ್‌ಮರಿನ್‌ಗಳಿಂದಲೂ ಉಡಾಯಿಸಬಹುದು. ಈ ಕ್ಷಿಪಣಿಗಳನ್ನು ಕೀವ್ ಮತ್ತು ಒಡೆಸ್ಸಾ ನಗರದ ಮೇಲೆ ರಷ್ಯಾ ಹಾರಿಸಿದೆ.