ಕನ್ನಡದಲ್ಲಿ ಈ ವರ್ಷವೂ ಹಾರರ್ ಚಿತ್ರಗಳ ಟ್ರೆಂಡ್ ಮುಂದುವರೆದಿದೆ. ಹಾರರ್ ಚಿತ್ರಗಳ ಸಾಲಿಗೆ ಈ ವರ್ಷ “ಅನಘ’ ಎನ್ನುವ ಮತ್ತೂಂದು ಹಾರರ್ ಚಿತ್ರ ಸೇರ್ಪಡೆಯಾಗುತ್ತಿದೆ.
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಅನಘ’ ಚಿತ್ರದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಈಗಾಗಲೇ ಪೂರ್ಣಗೊಳಿಸಿರುವ ಚಿತ್ರತಂಡ, ಶೀಘ್ರದಲ್ಲಿಯೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.
ಇದನ್ನೂ ಓದಿ : ಚೇತನ್ ಡಿಟಿಎಸ್ ಎಫೆಕ್ಟ್!
“ಅನಘ’ಚಿತ್ರದಲ್ಲಿ ರಂಗಭೂಮಿ ಪ್ರತಿಭೆಗಳಾದ ನಳೀನ್ ಕುಮಾರ್, ಪವನ್ ಪುತ್ರ, ಶ್ರೀನಿವಾಸ್ ಗೌಡ, ಕಿರಣತೇಜ, ಕಿರಣ್ ರಾಜ್, ಕರಣ್ ಆರ್ಯನ್,ದೀಪಾ, ಖುಷಿ, ರಶ್ಮಿ, ನಂಜಪ್ಪ ಬೆನಕ, ಮೋಟುರವಿ, ಅಭಿ ಮೊದಲಾದವರು ಪ್ರಮುಖಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರಾಜು ಎನ್.ಆರ್‌ನಿರ್ದೇ ಶನ, ಡಿ.ಪಿ ಮಂಜುಳನಿರ್ಮಾಣ ವಿದೆ. ಹಾರರ್‌ಜೊತೆಗೆ ಸಸ್ಪೆನ್ಸ್-ಕಾಮಿಡಿ ಕಥಾಹಂದರ ವನ್ನುಒಳಗೊಂಡಿರುವ “ಅನಘ’ ಚಿತ್ರವನ್ನು ಬೆಂಗಳೂರು, ದೇವರಾಯನ ದುರ್ಗ ಸುತ್ತ ಮುತ್ತ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಶಂಕರ್ ಛಾಯಾಗ್ರಹಣ, ವೆಂಕಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅವಿನಾಶ್ ಸಂಗೀತಸಂಯೋಜನೆಯಿದೆ. ಸದ್ಯ “ಅನಘ’ ಚಿತ್ರದಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವಚಿತ್ರತಂಡ, ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಪ್ಲಾನ್ ಹಾಕಿಕೊಂಡಿದೆ.