Advertisement

ಆನಡ್ಕ ಶಾಲೆಗೆ ಬಣ್ಣ ತುಂಬಿದ ಕ್ಯಾಂಪಸ್‌ ಟು ಕಮ್ಯುನಿಟಿ

10:16 PM Mar 17, 2021 | Team Udayavani |

ನರಿಮೊಗರು: ಆನಡ್ಕ ಗ್ರಾಮದಲ್ಲಿನ ಸರಕಾರಿ ಶಾಲೆಯ ಗೋಡೆಗಳಿಗೆ ಬಣ್ಣ ತುಂಬುವ (ಚಿತ್ರ ಬರೆಯುವ) ಕಾರ್ಯಕ್ರಮವನ್ನು ಬೆಂಗಳೂರಿನ ಕ್ಯಾಂಪಸ್‌ ಟು ಕಮ್ಯುನಿಟಿ ಸಂಸ್ಥೆ ಆಯೋಜಿಸಿತು.

Advertisement

ಸರಕಾರಿ ಶಾಲೆಗಳ ಗೋಡೆಗಳಲ್ಲಿ ಚಿತ್ರ ಬರೆಯುವ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳತ್ತ ಸೆಳೆಯುವ ಸರಕಾರದ ಪ್ರಯತ್ನಕ್ಕೆ “ಸ್ಕೂಲ್‌ ಬೆಲ್‌’ ಮೂಲಕ ಕ್ಯಾಂಪಸ್‌ ಟು ಕಮ್ಯುನಿಟಿ ಸಂಸ್ಥೆ ಕೈಜೋಡಿಸುತ್ತಿದೆ. ಈ ನಿಟ್ಟಿನಲ್ಲಿ ಮಾ.13ರಿಂದ ಮಾ.15ರ ವರೆಗೆ 3 ದಿನಗಳ ನಡೆದ ಆನಡ್ಕ ಶಾಲೆಗೆ ಬಣ್ಣ ತುಂಬುವ ಮೂಲಕ ಸರಕಾರಿ ಶಾಲೆಗಳಿಗೆ ಮತ್ತಷ್ಟು ಚೆ„ತನ್ಯ ತುಂಬುವ ಕೆಲಸವನ್ನು ಈ ಸಂಸ್ಥೆ ನಡೆಸಿದೆ.

ಮೂರು ದಿನಗಳವರೆಗೆ “ಕ್ಯಾಂಪಸ್‌ ಟು ಕಮ್ಯೂನಿಟಿ’ ಹಾಗೂ “ಸ್ಕೂಲ್‌ ಬೆಲ್‌’ ಕಾರ್ಯಕ್ರಮದಡಿಯಲ್ಲಿ ಅ.ಭಾ.ವಿ.ಪರಿಷತ್‌ ಇವರ ಸಹಕಾರದೊಂದಿಗೆ ಶಾಲಾ ಸೌಂದರೀಕರಣದ ಕಾರ್ಯ ನಡೆಯಿತು.

ಮಾ.15ರಂದು ಅನಾವರಣ ಹಾಗೂ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯಿಂದ ಆಗಮಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಸ್ಟೀಫನ್‌ ನವೀನ್‌ ವೇಗಸ್‌ ಅವರು ಸೇವೆ ಸಲ್ಲಿಸಿದ ಎಲ್ಲರನ್ನು ಇಲಾಖೆಯ ವತಿಯಿಂದ ಅಭಿನಂದಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್‌ ಮುದಾರ್‌ ಅ.ಭಾ.ವಿ.ಪ . ನ ಸಮುದಾಯ ಸೇವೆಯ ಬಗ್ಗೆ ಪರಿಚಯಿಸಿ ಶಾಲಾ ಸಹಕಾರ ವನ್ನು ಶ್ಲಾಘಿಸಿದರು. “ಸಿ 2 ಸಿ’ ಯ ಬೆಂಗಳೂರು ಪ್ರಾಂತ ಸಂಚಾಲಕ ರಘು ಪೂಜಾರ್‌ ‘ ಸ್ಕೂಲ್‌ ಬೆಲ್‌ ‘ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ದರು. ದ. ಕ. ಜಿ. ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಿ, ಸರಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವ ಸಂಸ್ಥೆಯ ಯೋಜನೆಗೆ ಮೆಚ್ಚುಗೆ ಸೂಚಿಸಿದರು.

Advertisement

ಎಬಿವಿಪಿ ಮಂಗಳೂರು ವಿಭಾಗ ಸಂಘಟನ ಕಾರ್ಯದರ್ಶಿ ಬಸವೇಶ್‌ , ಮಹೇಶ್‌ ಬೆಂಗಳೂರು, ಎಸ್‌. ಡಿ. ಎಂ. ಸಿ. ಉಪಾಧ್ಯಕ್ಷೆ ರೂಪಲತಾ , ಬಾಲಕೃಷ್ಣ ಮಜಲು , ನರಿಮೊಗರು ಸಿ. ಆರ್‌. ಪಿ. ಅನಂತ .ಕೆ., ಯೋಜನೆಯ ಸಂಘಟಕ ಭರತ್‌ ಮತ್ತಿತರರು ಉಪಸ್ಥಿತರಿದ್ದರು.

ಯೋಜನೆಯನ್ನು ಪರಿಚಯಿಸಿದ ನರಿ ಮೊಗರು ಗ್ರಾಮ ಪಂಚಾಯತ್‌ ನ ಉಪಾಧ್ಯಕ್ಷ ಸುಧಾಕರ ಕುಲಾಲ್‌ ಹಾಗೂ ಗ್ರಾಮ ಪಂಚಾಯತ್‌ ಸದಸ್ಯದಿನೇಶ್‌ ಮಜಲು ಶುಭ ಹಾರೈಸಿದರು.

ವಿವೇಕಾನಂದ ಕಾಲೇಜಿನ ಎನ್‌.ಎಸ್‌.ಎಸ್‌. ಘಟಕದ ಸಂಚಾಲಕ ಶ್ರೀನಾಥ್‌ ಭೇಟಿ ನೀಡಿದರು.

ಬೆಂಗಳೂರು , ಮೈಸೂರು , ಮಂಗಳೂರು, ಬಂಟ್ವಾಳ ಹಾಗೂ ಪುತ್ತೂರಿನಿಂದ ಆಗಮಿಸಿದ ಸುಮಾರು 50 ರಷ್ಟು ಕಲಾ ವಿದ್ಯಾರ್ಥಿಗಳು, ವೃತ್ತಿ ನಿರತರು ಶಾಲೆಯನ್ನು ಚಿತ್ರದಿಂದ ಅಲಂಕರಿಸಿದರು. ಊರಿನ ಜನರೂ ಸಹಕಾರ ನೀಡಿದರು. ಶಾಲಾ ಮುಖ್ಯ ಗುರು ಶುಭಲತಾ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹಶಿಕ್ಷಕಿ ಮಾಲತಿ ನಿರೂಪಿಸಿದರು. ಹಿರಿಯ ಶಿಕ್ಷಕಿ ಫೆಲ್ಸಿಟಾ ಡಿ’ಕುನ್ಹ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next