ಸೊಲ್ಲಾಪುರ: ಸ್ವಾಮಿ ಸಮರ್ಥರಷ್ಟೇ ಅನ್ನಛತ್ರ ಮಂಡಳವೂ ಮಹತ್ವದ್ದಾಗಿದ್ದು, ಅನ್ನಛತ್ರ ಮಂಡಳ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಪ್ರಾರಂಭಿಸಿದ ಮಹಾಪ್ರಸಾದ ಸೇವೆ ಶ್ಲಾಘನೀಯವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ಅಕ್ಕಲಕೋಟ ತೀರ್ಥಕ್ಷೇತ್ರದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಪ್ರಮುಖ ವಿಶ್ವಸ್ತ ಅಮೋಲರಾಜೆ ಭೋಸಲೆ ಅವರಿಂದ ಸನ್ಮಾನ ಸ್ವೀಕರಿಸಿ, ಸಮರ್ಥರ ಪ್ರತಿಮೆಯನ್ನು ಕಾಣಿಕೆ ಪಡೆದು ಅವರು ಮಾತನಾಡಿದರು.
ಮಂಡಳಿಯ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಪರಿಶ್ರಮದಿಂದ ಅನ್ನಛತ್ರ ಮಂಡಳ ದೇಶಾದ್ಯಂತ ಹೆಸರುವಾಸಿಯಾಗಿದೆ. ವಿಶೇಷವಾಗಿ ಅನ್ನದಾಸೋಹ ಜತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಅನ್ನಛತ್ರ ಮಂಡಳ ಮಾಡುತ್ತ ಬಂದಿದೆ. ಪರಿಸರ ಕಾಳಜಿ ವಹಿಸಿದೆ ಎಂದರಲ್ಲದೇ ಮುಂದಿನ ಕಾರ್ಯಗಳು ಸುಗಮವಾಗಿ ನಡೆಯಲಿ ಎಂದು ಹಾರೈಸಿದರು.
ದಕ್ಷಿಣ ಸೊಲ್ಲಾಪುರದ ಶಾಸಕ ಸುಭಾಷ ದೇಶಮುಖ, ಪತ್ನಿ ಸ್ಮಿತಾ ಸುಭಾಷ ದೇಶಮುಖ, ಶಾಸಕ ಸಚಿನ್ ಕಲ್ಯಾಣಶೆಟ್ಟಿ, ಪತ್ನಿ ಶಾಂಭವಿ ಕಲ್ಯಾಣಶೆಟ್ಟಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಹಾಜಿ ಪವಾರ, ಅನ್ನಛತ್ರ ಮಂಡಳಿ ಉಪಾಧ್ಯಕ್ಷ ಅಭಯ ಖೋಬರೆ, ಕಾರ್ಯದರ್ಶಿ ಶಾಮರಾವ್ ಮೋರೆ, ಸಂತೋಷ ಖೋಬರೆ, ಲೆಕ್ಕ ಪರಿಶೋಧಕ ಓಂಕಾರೇಶ್ವರ ಉಟಗೆ, ಅಭಿನಂದನ್ ಗಾಂಧಿ , ಎಂಜಿನಿಯರ್ ಕಿರಣ ಪಾಟೀಲ, ಅಮಿತ್ ಥೋರಟ್, ಮನೋಜ ನಿಕಮ್, ಪ್ರವೀಣ ದೇಶಮುಖ, ಅರವಿಂದ ಶಿಂಧೆ, ಮಹೇಶ ಹಿಂಡೋಳೆ, ಕಾಂತು ಧನಶೆಟ್ಟಿ, ದಯಾನಂದ ಬಿಡವೆ, ಅವಿನಾಶ ಮಡಿಕಾಂಬೆ, ರಾಜಕುಮಾರ ಝೀಂಗಾಡೆ, ನಂದಕುಮಾರ ಜಗದಾಳೆ, ಅರವಿಂದ ಪಾಟೀಲ, ಅಪ್ಪು ಪೂಜಾರಿ, ಸಂಜಯ ಕುಲಕರ್ಣಿ, ಸಂತೋಷ ಭೋಸಲೆ, ಬಾಳಾಸಾಹೇಬ ಪೋಳ್, ಎಸ್.ಕೆ.ಸ್ವಾಮಿ, ಸಿದ್ಧರಾಮ ಕಲ್ಯಾಣಿ, ಅಪ್ಪಾ ಹಂಚಾಟೆ, ಮಹಾಂತೇಶ ಸ್ವಾಮಿ, ಶ್ರೀಕಾಂತ ಜಿಪರೆ, ಮಹಾರಾಷ್ಟ್ರ ಕಸಾಪ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಕಾರ್ಯದರ್ಶಿ ಶರಣಪ್ಪ ಫುಲಾರಿ, ಪ್ರಕಾಶ ಪಾಟೀಲ, ನಿಖೀಲ ಪಾಟೀಲ, ರುದ್ರಯ್ಯ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.