Advertisement
ಜೀವನದಲ್ಲಿ ಅನುಭವ ಮುಖ್ಯ. ಒಂದೊಂದು ಅನುಭವ ಒಂದೊಂದು ಪಾಠವನ್ನು ಕಲಿಸುತ್ತದೆ. ದೇಶವನ್ನು ಸುತ್ತಿ ನೋಡಿದಷ್ಟು ಅನುಭವವಾಗುತ್ತದೆ.
Related Articles
Advertisement
ಮೊದಲು ವಾಘಾ ಬಾರ್ಡರ್ ಗೆ ಕರೆದುಕೊಂಡು ಹೋದರು. ಅನಂತರ ಪಂಜಾಬಿನ ಪ್ರಸಿದ್ಧ ದೇವಾಲಯವಾದ ಸ್ವರ್ಣಮಂದಿರ. ಈ ಸ್ಥಳ ಖಂಡಿತವಾಗಿಯೂ ಪುಣ್ಯಕ್ಷೇತ್ರವೇ ಹೌದು. ಅಲ್ಲಿನ ಜನರ ನಂಬಿಕೆ ರೀತಿನೀತಿಗಳು ಅಪಾರ. ದೇಶ ಪ್ರೇಮಕ್ಕೆ ಮತ್ತೂಂದು ಹೆಸರೆ ಪಂಜಾಬಿಗರು. ಮುಂದೆ ನಮ್ಮ ಪಯಣ ಜಲಿಯನ್ ವಾಲಾಬಾಗ್ ಕಡೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮೂಖವಾಗಿ ಗುತಿಸಲ್ಪಟ್ಟ ಪ್ರದೇಶ. ದೇಶಕ್ಕಾಗಿ ಹಲವು ಮಂದಿ ಹೋರಾಟಗಾರರು ಜೀವತೆತ್ತ ಪುಣ್ಯ ಸ್ಥಳ.
ಮರು ದಿನ ನಮ್ಮನ್ನು ಪಂಜಾಬಿನ ಯುದ್ಧ ಶಸ್ತ್ರಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ನಮ್ಮ ದೇಶದ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳನ್ನು ನೋಡಲು ಅವಕಾಶ ದೊರೆಯಿತು. ಮುಂದೆ ಕ್ಯಾಂಪ್ ಮುಗಿದು ಬೆಂಗಳೂರಿಗೆ ಹೊರಟೆವು. ಪಂಜಾಬಿನಿಂದ ಹೊರಟು ದೆಹಲಿಗೆ ಬಂದು ಅಲ್ಲಿ ಕೆಂಪುಕೋಟೆ, ಸರ್ವೋಚ್ಚ ನ್ಯಾಯಾಲಯವನ್ನು ನೋಡಿದೆವು. ಅನಂತರ ನನ್ನ ನೆಚ್ಚಿನ ಸ್ಥಳ ಉತ್ತರಪ್ರದೇಶದ ತಾಜ್‌ಮಹಲನ್ನು ನೋಡಲು ಸಹ ಅನುಮತಿ ದೊರೆಯಿತು. ಈ ಪ್ರಸಿದ್ಧ ಸ್ಥಳಗಳನ್ನು ನೋಡಿದ ಕ್ಷಣಗಳನ್ನು ,ಅನುಭವಗಳನ್ನು ಖಂಡಿತವಾಗಿಯೂ ಮರೆಯಲು ಅಸಾಧ್ಯ .
ಪ್ರವಾಸ ಎಂಬುದು ಮೈಮನಗಳನ್ನು ಪುಳಕಿತಗೊಳಿಸುವ, ಉತ್ಸಾಹ, ಹುಮ್ಮಸ್ಸನ್ನು ಇಮ್ಮಡಿಗೊಳಿಸುವ ಮಾರ್ಗ. ಆಯಾ ಸ್ಥಳಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ಅನುಕೂಲಮಾಡಿಕೊಡುತ್ತದೆ.
ಸುಪ್ರಿತಾ ಎಸ್.ಕೆ. ತುಮಕೂರು ವಿವಿ