Advertisement

Palestine ದಾಳಿಗೆ ಭಾರತ ಮೂಲದ ಇಸ್ರೇಲಿ ಯೋಧ ಸಾ*ವು

01:14 AM Sep 13, 2024 | Team Udayavani |

ಜೆರುಸಲೇಮ್‌: ವೆಸ್ಟ್‌ ಬ್ಯಾಂಕ್‌ನಲ್ಲಿ ಪ್ಯಾಲೆಸ್ತೀನ್‌ ನಡೆಸಿದ ದಾಳಿಯಲ್ಲಿ ಬನೈ ಮನಾಶೆ ಸಮುದಾಯಕ್ಕೆ ಸೇರಿದ ಭಾರತೀಯ ಮೂಲದ ಇಸ್ರೇಲಿ ಸೈನಿಕ ಮೃತಪಟ್ಟಿದ್ದಾರೆ. ಮೃತರನ್ನು 24 ವರ್ಷದ ಗೆರಿ ಗಿಡಿಯಾನ್‌ ಹಂಘಲ್‌ ಎನ್ನಲಾಗಿದ್ದು, ಈತ ಕೆಫಿರ್‌ ಬ್ರಿಗೇಡ್‌ ನಹ್‌ಶೋನ್‌ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಸಾಫ್ ಜಂಕ್ಷನ್‌ ಬಳಿ ನಿಂತಿದ್ದಾಗ ಟ್ರಕ್‌ ಹರಿಸಿ ಇವರನ್ನು ಹತ್ಯೆಗೈಯ್ಯಲಾಗಿದೆ. ಹಂಘಲ್‌ 2020ರಲ್ಲಿ ಈಶಾನ್ಯ ಭಾರತದಿಂದ ಇಸ್ರೇಲ್‌ಗೆ ವಲಸೆ ಹೋಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next