Advertisement
ಗಂಟೆಗಟ್ಟಲೆ ಕಾಯಬೇಕು ಮುಂಬಯಿನಿಂದ ಆಗಮಿಸುವ ಪ್ರತಿಯೊಬ್ಬರಿಗೂ ಶಿರೂರು ಟೋಲ್ ಗೇಟ್ ಬಳಿ ಕಡ್ಡಾಯ ತಪಾಸಣೆ ನಡೆಯುತ್ತದೆ. ಪ್ರತಿದಿನ ನೂರಾರು ಜನರು ಆಗಮಿಸುತಿದ್ದು ಸಮರ್ಪಕ ಮಾಹಿತಿ ಕೊರತೆಯಿಂದ ಗಂಟೆಗಟ್ಟಲೆ ಕಾಯಬೇಕಿದೆ. ಮಾತ್ರವಲ್ಲದೆ ಸ್ವಯಂಘೋಷಣೆ ಅರ್ಜಿ ತುಂಬಬೇಕಾಗಿರುವ ಜತೆಗೆ ಆರೋಗ್ಯ ತಪಾಸಣೆ ಕೂಡ ನಡೆಯುತ್ತದೆ. ಇದಕ್ಕೆ ತುಂಬಾ ಸಮಯ ಬೇಕಾಗುತ್ತಿದೆ.ಇದರ ಜತೆಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡರೂ ಸಹ ಪ್ರತಿ ಎರಡು ಗಂಟೆಗೊಮ್ಮೆ ಪೊಲೀಸ್ ಬೆಂಗಾವಲಲ್ಲಿ ಹದಿನೈದು ವಾಹನಗಳನ್ನು ಆಯಾಯ ತಾಲೂಕು ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ಕೆಲವೊಮ್ಮೆ ನಾಲ್ಕೆ çದು ಗಂಟೆ ಕಾಯಬೇಕಾಗುತ್ತಿದೆ. ಮಹಿಳೆಯರು, ಹಿರಿಯರು ಕೂಡ ಸಾಲಿನಲ್ಲಿ ಕಾಯಬೇಕಿದೆ. ಟೋಲ್ ಗೇಟ್ ಬಳಿ ಪ್ರಯಾಣಿಕರಿಗೆ ಕೆಲವು ದಾನಿಗಳು ನೀರಿನ ಬಾಟಲಿ, ಬಿಸ್ಕೆಟ್ ನೀಡಿದ್ದು ಹೊರತು ಪಡಿಸಿದರೆ ಇತರ ಯಾವುದೇ ವ್ಯವಸ್ಥೆಗಳಿಲ್ಲ. ಸಿಬಂದಿಗೂ ಕೂಡ ಊಟದ ವ್ಯವಸ್ಥೆಗಳಿಲ್ಲ.
ಹೊರರಾಜ್ಯದಿಂದ ಬರುವ ಪ್ರತಿ ಯೊಬ್ಬರಿಗೂ ಕಡ್ಡಾಯ ಕ್ವಾರಂಟೈನ್‌ಗೆ ತೆರಳಬೇಕು. ಖಾಸಗಿ ಹೋಟೆಲ್‌ಗಳು ಏಕರೂಪದ ದರಗಳಿಲ್ಲ. ಮಾತ್ರವಲ್ಲದೆ ಅತ್ಯಧಿಕ ದರ ನಿಗದಿ ಪಡಿಸಿದೆ. ಸರಕಾರಿ ಕ್ವಾರಂಟೈನ್‌ಗಳಲ್ಲಿ ಸರಿಯಾದ ಸಮಯಕ್ಕೆ ಊಟ ಉಪಹಾರ ಸಿಗುತ್ತಿಲ್ಲ. ಸರಿಯಾದ ವ್ಯವಸ್ಥೆಗಳಿಲ್ಲ ಎಂದು ಮುಂಬಯಿಗರು ದೂರುತಿ¨ªಾರೆ. ಮುಂಬಯಿಯಿಂದ ಕಾರ್ಕಳಕ್ಕೆ ಆಗಮಿಸಿದ ವ್ಯಕ್ತಿಯೋರ್ವರು ಶಿರೂರಿನಿಂದ ಕಾರ್ಕಳ ತಾಣ ಬರಲು 4 ಗಂಟೆ ತಗುಲಿರುವುದಾಗಿ ದೂರಿದ್ದಾರೆ. ತತ್‌ಕ್ಷಣ ವ್ಯವಸ್ಥೆ
ಈಗಾಗಲೇ ಮುಂಬಯಿ ಕನ್ನಡಿಗರಿಗೆ ಸರಿಯಾದ ವ್ಯವಸ್ಥೆ ಇಲ್ಲದಿರುವ ಕುರಿತು ಜಿಲ್ಲಾಧಿಕಾರಿ ಜತೆಗೆ ಮಾತನಾಡಿದ್ದೇನೆ ಹಾಗೂ ಅಸಂತ್ರಪ್ತಿ ವ್ಯಕ್ತಪಡಿಸಿದ್ದೇನೆ. ಇಲಾಖೆ ಕ್ರಮಗಳು ಸಮಾಧಾನ ತಂದಿಲ್ಲ. ಮುಂಬಯಿನವರಿಗೆ ಏನು ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಇದಕ್ಕಾಗಿ ಸ್ವತಃ ನಾನೇ ಟೋಲ್ ಗೇಟ್ ಬಳಿ ತೆರಳಿ ತತ್‌ಕ್ಷಣದಿಂದ ಸಮರ್ಪಕ ವ್ಯವಸ್ಥೆ ಕಲ್ಪಿಸುವ ಕ್ರಮ ತೆಗೆದುಕೊಳ್ಳುತ್ತೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ವ್ಯವಸ್ಥೆ ಮಾಡುತ್ತೇನೆ ಎಂದರು.
-ಬಿ.ಎಂ. ಸುಕುಮಾರ ಶೆಟ್ಟಿ , ಶಾಸಕ