Advertisement
ಬಾಲ್ಯದ ನೆನಪು ಬಂದಾಗ ನಮಗೆ ತಕ್ಷಣವೇ ಕಣ್ಮುಂದೆ ಬರುವುದು ನಟರಾಜ ಪೆನ್ಸಿಲ್…ಅದಕ್ಕಾಗಿಯೇ ಈಗಲೂ “ನಟರಾಜ ಫಿರ್ ಸೆ ಚಾಂಪಿಯನ್” ಎಂಬ ಜಾಹೀರಾತು ನೋಡಿದ ನೆನಪಿರಬಹುದು. ದುಂಡು, ದುಂಡು ಆಕ್ಷರ ಬರೆಯುವ ಆಗುವ ಸಂತಸ, ಶಾರ್ಪರ್ ನಲ್ಲಿ ಪೆನ್ಸಿಲ್ ನ ಮೊನೆಯನ್ನು ಹರಿತಗೊಳಿಸಿ ಚೂಪಾಗಿ ಮಾಡುವುದು ಇವೆಲ್ಲವೂ ಇನ್ನೂ ಸ್ಮೃತಿಪಟಲದಿಂದ ಮಾಸದ ನೆನಪುಗಳಾಗಿ ಉಳಿದುಬಿಟ್ಟಿದೆ ಎಂಬುದು ಅತಿಶಯೋಕ್ತಿಯಲ್ಲ.
ಸಾಕ್ಷಿಯಾಗಿದ್ದೇವೆ. ಅಲ್ಲದೇ ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡಿ, ಸ್ವದೇಶಿ ವಸ್ತುವಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಾವಲಂಬಿಯಾಗುವ ಮೂಲಕ ದೇಶಿ ಉತ್ಪನ್ನದತ್ತ ದೃಷ್ಟಿ ಹಾಯಿಸಬೇಕು ಎಂದು ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ವೇಳೆ ಉಲ್ಲೇಖಿಸಿದ್ದರು. ಅರೇ ನಟರಾಜ ಪೆನ್ಸಿಲ್ ಗೂ, ಕೋವಿಡ್ ಗೂ, ಪ್ರಧಾನಿ ಮಾತಿಗೆ ಏನು ಸಂಬಂಧ ಅಂತ ಹುಬ್ಬೇರಿಸಬೇಡಿ. ಯಾಕೆಂದರೆ ವಿದೇಶಿ ಪೆನ್ಸಿಲ್, ವಿದೇಶಿ ವಸ್ತುಗಳ ಅಬ್ಬರದ ನಡುವೆ ನಲುಗುತ್ತಿದ್ದ ವೇಳೆಯೇ ದೇಶಿಯವಾಗಿ ರೂಪುಗೊಂಡಿದ್ದೇ ಹಿಂದೂಸ್ತಾನ್ ಪೆನ್ಸಿಲ್ಸ್ ಪ್ರೈವೇಟ್ ಲಿಮಿಟೆಡ್!
Related Articles
ಸ್ವಾತಂತ್ರ್ಯದ ಮೊದಲು ಭಾರತದಲ್ಲಿ ಪೆನ್ಸಿಲ್ ಉತ್ಪಾದಿಸಲಾಗುತ್ತಿತ್ತು. ಆದರೆ ಈ ಕಂಪನಿಗಳು ಆಮದಾಗುತ್ತಿದ್ದ ಪೆನ್ಸಿಲ್ ನಿಂದಾಗಿ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆಯಿಂದ ಆರ್ಥಿಕವಾಗಿ ನಷ್ಟ ಅನುಭವಿಸಿದ್ದವು. ಎರಡನೇ ಜಾಗತಿಕ (1930-40) ಯುದ್ಧಕ್ಕಿಂತ ಮೊದಲು ಬ್ರಿಟನ್, ಜರ್ಮನಿ ಮತ್ತು ಜಪಾನ್ ನಿಂದ ಭಾರತಕ್ಕೆ ಬರೋಬ್ಬರಿ 6.5ಲಕ್ಷ ಪೆನ್ಸಿಲ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಳಿಕ ಯುದ್ಧದ ಸಂದರ್ಭದಲ್ಲಿ ಈ ಸಂಖ್ಯೆ ಏರುಪೇರಾಗಿತ್ತು. ಕೊನೆಗೆ 1944-45ರ ಹೊತ್ತಿಗೆ ಆಮದಾಗುತ್ತಿದ್ದ ಪೆನ್ಸಿಲ್ 2.3ಲಕ್ಷಕ್ಕೆ ಇಳಿದಿತ್ತು. ಇದು ದೇಶೀಯ ಮಾರುಕಟ್ಟೆ ಬೆಳವಣಿಗೆಗೆ ಸಿಕ್ಕ ಟರ್ನಿಂಗ್ ಪಾಯಿಂಟ್ ಎಂಬುದು ಮನಗಾಣಬೇಕು.
Advertisement
ಅಂದು ವಿದೇಶದಿಂದ ಪೆನ್ಸಿಲ್ ಆಮದು ಭಾರೀ ಪ್ರಮಾಣದಲ್ಲಿ ಇಳಿಕೆಯಾದ ನಂತರ ಕೋಲ್ಕತಾ, ಬಾಂಬೆ ಮತ್ತು ಮದ್ರಾಸ್ ಗಳಲ್ಲಿ ಹಲವಾರು ಪೆನ್ಸಿಲ್ ಉತ್ಪಾದಕರು ಹುಟ್ಟಿಕೊಂಡುಬಿಟ್ಟಿದ್ದರು. ಈ ಸಂದರ್ಭದಲ್ಲಿ ಪೆನ್ಸಿಲ್ ಉತ್ಪಾದಕರು ಭಾರತ ಸರ್ಕಾರ ತಮ್ಮ ದೇಶಿ ಉತ್ಪನ್ನ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರು. ಆಮದು ಕಡಿಮೆಯಾಗಿದ್ದು, ದೇಶಿ ಇಂಡಸ್ಟ್ರಿ ನಿಧಾನಕ್ಕೆ ಆರಂಭಗೊಂಡರೆ ಚೇತರಿಕೆಯಾಗಲಿದೆ ಎಂದು ಮನವರಿಕೆ ಮಾಡಿದ್ದರು. ಆದರೆ ಈ ಕಂಪನಿಗಳು ತಯಾರಿಸಿದ್ದ ಪೆನ್ಸಿಲ್ ಉತ್ಪನ್ನದ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬರಲಾರಂಭಿಸಿದ್ದವು. ಅದೇನೆಂದರೆ ವಿದೇಶಿ ಪೆನ್ಸಿಲ್ ಗುಣಮಟ್ಟಕ್ಕಿಂತ ಕಳಪೆಯಷ್ಟೇ ಅಲ್ಲ, ಬೆಲೆಯೂ ತುಂಬಾ ಹೆಚ್ಚು ಎಂಬುದಾಗಿತ್ತು.