Advertisement
ಇನ್ನೇನು ಹೊಸ ವರ್ಷ ಬಂದೇಬಿಟ್ಟಿತು, ಅನೇಕರು ಮನೆಯ ಅಂದ ಹೆಚ್ಚಿಸಲು ಮತ್ತು ಒಂದು ಹೊಸತನದ ಮೆರುಗು ನೀಡ ಬಯಸುವವರು ಅನೇಕ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಗೆಳೆಯರಿಗೆ, ಆತ್ಮಿಯರಿಗೆ ಕೊಡುಗೆಯನ್ನು ನೀಡುವುದು ಹೇಗೆ ಏನೇ ಇರಲಿ ಆದರೆ ಅದರಲ್ಲೊಂದಿಷ್ಟು ನೈಸರ್ಗಿಕತೆಯ ಸುವಾಸನೆ ಬಿರಿರಲಿ.
ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವಾಗ ಅದಕ್ಕೆ ಹೆಚ್ಚು ಹಣ ವ್ಯಯ ಮಾಡುವುದರಲ್ಲಿ ಅರ್ಥವಿಲ್ಲ. ನೀವೇ ನಿಮ್ಮ ಮನೆಯಲ್ಲಿ ಸಿಗುವಂತ ವಸ್ತುಗಳಿಂದ ಮತ್ತು ಉಪಯೋಗವಿಲ್ಲ ಎಂದು ಬಿಸಾಕಿದ ವಸ್ತುಗಳಿಂದ ಒಂದೊಳ್ಳೆ ಉಡುಗೊರೆ ತಯಾರಿಸಿ. ಬಳಸಿ ಬಿಸಾಕಿದ ಗಾಜಿನ ಬಾಟಲಿಗಳು ಇಂಥ ಅನೇಕ ವಸ್ತುಗಳನ್ನು ಬಳಸಿ. ಇದಕ್ಕೆ ನಿಮಗೆ ಒಂದಷ್ಟು ಆಸಕ್ತಿ ಮತ್ತು ಸೃಜನಶೀಲತೆ ಇದ್ದರೆ ಸಾಕು. ಈ ರೀತಿ ನೀವು ತಯಾರಿಸುವ ವಸ್ತುಗಳನ್ನು ಕೊಡುಗೆ ನೀಡಿದಾಗ ಅವರಿಗೆ ಇನ್ನೂ ಹೆಚ್ಚು ಖುಷಿಯೊಂದಿಗೆ, ನೀಮಗೆ ಅವರ ಮೇಲಿರುವ ಕಾಳಜಿಯನ್ನು ತೋರ್ಪಡಿಸಲು ಸಾಧ್ಯವಾಗುತ್ತದೆ. ನಿಮ್ಮಿಂದ ಸುಲಭವಾಗಿ ಸಾಧ್ಯವಾಗುವಂತ ಮೊಂಬತ್ತಿ, ರೂಮ್ ಫ್ರೆಶ್‌ನರ್, ಪರಿಮಳಯುಕ್ತ ತೈಲಗಳು, ಸ್ವತ್ಛತೆಗೆ ಬಳಸುವಂಥ ವಸ್ತುಗಳನ್ನು ತಯಾರಿಸಬಹುದು.
Related Articles
ನೀವು ನೀಡುವ ಉಡುಗೊರೆ ಆ ಕ್ಷಣಕ್ಕೆ ಖುಷಿ ನೀಡಿ ಮತ್ತೆ ಅದು ಶೋ ಕೇಸಿನಲ್ಲಿ ಧೂಳು ಅಡರುವಂತೆ ಆಗಬಾರದು. ನೀಡಿದ ಉಡಗೊರೆಗಳು ಅವರಿಗೆ ಹೆಚ್ಚು ಉಪಯುಕ್ತವಾಗುವುದಾರೆ ಅದು ನಿಜವಾಗಿಯೂ ಒಂದು ಅರ್ಥಪೂರ್ಣವಾದ ಉಡುಗೊರೆಯಾಗುತ್ತದೆ. ಹಾಗಾಗಿ ಉಡುಗೊರೆ ನೀಡುವಾಗ ಒಮ್ಮೆ ಪ್ರಾಯೋಗಿಕವಾಗಿ ಯೋಚಿಸಿ. ಉದಾಹರಣೆಗೆ ಸ್ಟೀಲ್‌ನಿಂದ ತಯಾರಿಸಿದ ನೀರಿನ ಸೀಸೆಗಳು, ಲೋಹದ ವಸ್ತುಗಳು, ಗೃಹಬಳಕೆ ವಸ್ತು, ಹೀಗೆ ಸುದೀರ್ಘ ಬಾಳಿಕೆ ಬರುವಂತ ವಸ್ತು ಗಳನ್ನು ಉಡುಗೊರೆ ನೀಡಿ.
Advertisement
ಕಟ್ಟಿಗೆಯ ಆಟಿಕೆಗಳುಪರಿಸರ ಮಾಲಿನ್ಯಕ್ಕೆ ಎಡೆ ಮಾಡಿಕೊಡುವ ಆಟಿಕೆಗಳ ಬದಲಾಗಿ ಕಟ್ಟಿಗೆಯಿಂದ ತಯಾರಿಸಿದ ಆಟಿಕೆ, ಕರಕುಶಲ ವಸ್ತುಗಳನ್ನು ನೀಡಬಹುದು. ಇವುಗಳು ಮರುಬಳಕೆ ಜತೆಗೆ ಮಕ್ಕಳಿಗೆ ಇದರಿಂದ ಯಾವುದೇ ಹಾನಿ ಆಗುವುದಿಲ್ಲ. ಸಸ್ಯಗಳನ್ನು ಉಡುಗೊರೆಯಾಗಿ ನೀಡಿ
ಮನೆಯಲ್ಲಿ ತಾಜ್ಯವನ್ನು ಸೃಷ್ಟಿ ಮಾಡದಂಥ, ಮನೆಯ ಚಂದವನ್ನು ಹೆಚ್ಚಿಸುವಂತ ಸಸ್ಯಗಳು ಒಳ್ಳೆಯದು. ದೀರ್ಘಕಾಲಿಕ ಪೊದೆಗಳು, ರಸಭರಿತ ಸಸ್ಯಗಳು, ಹೊವಿನ ಗಿಡಗಳು, ಚಿಕ್ಕ ಬಿದಿರಿನ ಸಸ್ಯ ನೀಡಿ. ಇದು ಮನೆಯಲ್ಲಿ ಹೆಚ್ಚು ಜಾಗವನ್ನು ಬಯಸುವುದಿಲ್ಲ ಜತೆಗೆ, ಪಡೆದುಕೊಳ್ಳುವವರಿಗೂ ಇದು ಸಂತೋಷ ನೀಡುತ್ತದೆ. ಇದು ಇನ್ನೊಬ್ಬರಿಗೂ ಇದೇ ರೀತಿಯಲ್ಲಿ ಉಡುಗೊರೆ ನೀಡುವಂತೆ ಪ್ರೇರೇಪಿಸುತ್ತದೆ. ಒಳ್ಳೆಯ ಉಡುಗೊರೆ
ನಿಮ್ಮ ಕುಟುಂಬದವರಿಗೆ ನೈಸರ್ಗಿಕ ಮತ್ತು ಆರೋಗ್ಯ ಪೂರ್ಣವಾದಂತ ಉಡುಗೊರೆ ನೀಡಿ. ಸುವಾಸನೆ ಲವಣಗಳು, ಗಾರ್ಡನಿಂಗ್ ಕಿಟ್ ಹೀಗೆ ಕೆಲವೊಂದು ಐಡಿಯಾಗಳು ಇಲ್ಲಿವೆ. ಉತ್ತಮ ಲಗೇಜ್ ಬ್ಯಾಗ್ ನೀಡಿ
ಮನೆಯ ಸದಸ್ಯರಿಗೆ ಉತ್ತಮ ಗುಣಮಟ್ಟ, ಬಾಳಿಕೆ ಬರುವ ಲಗೇಜ್ ಬ್ಯಾಗ್ ನೀಡಿ. ಇದು ಅವರಿಗೆ ಪ್ರಯಾಣ, ಬೇರೆ ಊರಿಗೆ ತೆರಳುವಾಗ ಉಪಯುಕ್ತವಾಗುತ್ತದೆ. ಸಿಲಿಕಾನ್ ಆಹಾರ ಚೀಲಗಳು
ಸಿಲಿಕಾನ್ ಆಹಾರ ಚೀಲಗಳು ರಾಸಾಯನಿಕಗಳನ್ನು ಹೊರಹಾಕುವುದಿಲ್ಲ ಇವುಗಳು ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಸೂಕ್ತ ಮತ್ತು ವಿಷಕಾರಿ ಅಂಶಗಳು ಆಹಾರದಲ್ಲಿ ಸೇರದಂತೆ ತಡೆಯಬಹುದು. - ಶಿವಾನಂದ ಎಚ್.