ಸೂರ್ಯಕಾಂತ್ ಶೇಟ್ ಅವರು ದೀಪ ಬೆಳಗಿಸಿ ಮಳಿಗೆಯನ್ನು ಉದ್ಘಾಟಿಸಿದರು.
Advertisement
ಸ್ವರ್ಣ ವ್ಯವಹಾರದಲ್ಲಿ ಸುದೀರ್ಘ ಅನುಭವ ಹೊಂದಿರುವ ಯುವ ಉದ್ಯಮಿ ಮಳಿಗೆಯ ಮಾಲಕ ಎಸ್. ಹರ್ಷ ಶೇಟ್ ಮಾತನಾಡಿ, ಸ್ವರ್ಣಾಭರಣದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಆರಂಭಿಸಿರುವ ಈ ಮಳಿಗೆಯಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕವಾದ ಕಲಾತ್ಮಕ ಚಿನ್ನಾಭರಣಗಳು, ವಜ್ರದ ಆಭರಣಗಳು ಹಾಗೂ ಬೆಲೆ ಬಾಳುವ ಹರಳು ಗಳ ಸಂಗ್ರಹವಿದೆ.
ಸ್ವರ್ಣ ಫ್ರೇಮ್‌ಗಳನ್ನು ಒಳಗೊಂಡ ದೇವರ ಫೋಟೋಗಳು ಕೂಡ ಗ್ರಾಹಕರ ಆಯ್ಕೆಗೆ ಸಿಗಲಿದೆ ಎಂದರು.
Related Articles
Advertisement
ನೂತನ ಮಳಿಗೆಯಲ್ಲಿ ಮದುವೆ ಇನ್ನಿತರ ಸಮಾರಂಭಕ್ಕೆ ಧರಿಸುವ ಆಭರಣಗಳು, ನೆಕ್ಲೇಸ್, ವಿವಿಧ ವಿನ್ಯಾಸದ ಸರಗಳು, ಬಳೆಗಳು, ಉಂಗುರಗಳು, ವಿನೂತನ ಕಿವಿಯೋಲೆಗಳ ಸಂಗ್ರಹವಿದೆ. ದಿವ್ಯ ಹರ್ಷ ಶೇಟ್, ವಸಂತ್ ಶ್ರೀನಿವಾಸ್ ಶೇಟ್ ಜನ್ನು, ರಮೇಶ್ ಜನ್ನು, ಅಶೋಕ್ ಕುಮಾರ್, ಕುಮಾರ್ ಶೇಟ್, ರಮಣ್ ನಾಯ್ದು , ಕಾರ್ತಿಕ್ ಉಪಸ್ಥಿತರಿದ್ದರು.