Advertisement

New York ವಲಸಿಗರ ಹೊರಕಳಿಸಲು ನ್ಯೂಯಾರ್ಕ್‌ ನಗರದಿಂದ ವಿನೂತನ ಉಪಾಯ!

11:05 PM Oct 30, 2023 | Team Udayavani |

ನ್ಯೂಯಾರ್ಕ್‌: ಭಾರತ ಅಕ್ರಮ ವಲಸಿಗರಿಂದ ತತ್ತರಿಸಿದೆ. ಬಾಂಗ್ಲಾ, ಪಾಕ್‌, ಇತರ ದೇಶಗಳಿಂದ ದೇಶ ದೊಳಕ್ಕೆ ನುಗ್ಗುವುದು ಇತ್ತೀಚೆಗೆ ತುಸು ಕಡಿಮೆಯಾಗಿದೆ. ಇಂತಹದ್ದೇ ಸಮಸ್ಯೆ ಅಮೆರಿಕದ ನ್ಯೂಯಾರ್ಕ್‌ ನಗರಕ್ಕೂ ಇದೆ. ಆ ನಗರದಲ್ಲಿ ದಕ್ಷಿಣ ಗಡಿಭಾಗದಿಂದ ವಲಸೆ ಬರುವವರಿಗಾಗಿಯೇ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಇದರ ನಿರ್ವಹಣೆ ದುಬಾರಿಯಾಗಿರುವುದರಿಂದ ನ್ಯೂಯಾರ್ಕ್‌ ಮಹಾನಗರ ಪಾಲಿಕೆ, ಒಂದು ಉಪಾಯ ಮಾಡಿದೆ.

Advertisement

ಆಶ್ರಯಗೃಹಗಳಿಂದ ಯಾರಾದರೂ ಹೊರ ಹೋಗಲು ಬಯಸಿದರೆ, ವಿಶ್ವದ ಯಾವುದೇ ನಗರಕ್ಕೂ ಅದು ಒಂದು ಕಡೆಯ ವಿಮಾನವೆಚ್ಚವನ್ನು ಭರಿಸಲಿದೆ. ಹೀಗೆಂದು ಮೇಯರ್‌ ಎರಿಕ್‌ ಆ್ಯಡಮ್ಸ್‌ ಘೋಷಣೆ ಮಾಡಿದ್ದಾರೆ.

ಈಗಾಗಲೇ ಒಬ್ಬ ವಲಸಿಗರಿಗಾಗಿ ದಿನಕ್ಕೆ 394 ಡಾಲರ್‌ಗಳನ್ನು (32,000 ರೂ.) ನ್ಯೂಯಾರ್ಕ್‌ ವೆಚ್ಚ ಮಾಡುತ್ತಿದೆ. ಈ ಖರ್ಚನ್ನು ತಾಳಲಾಗದೇ, ಇದಕ್ಕಿಂತ ಒಂದು ಬದಿಯ ಟಿಕೆಟ್‌ ವೆಚ್ಚವೆ ಕಡಿಮೆ ಎನಿಸಿ ಆ ನಗರ ಈ ತೀರ್ಮಾನ ಮಾಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಸತಿಗೃಹಗಳಲ್ಲಿ ಜಾಗವಿಲ್ಲವಾಗಿದೆ. ಅದಕ್ಕಾಗಿ ವಲಸಿಗರು ಒಂದು ತಿಂಗಳು ಮಾತ್ರ ಇರಬೇಕು, ಅವಧಿ ಮುಗಿದ ಕೂಡಲೇ ವಸತಿಗಾಗಿ ಮತ್ತೆ ಅರ್ಜಿ ಸಲ್ಲಿಸಬೇಕು ಎಂದು ನಿಯಮ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next