Advertisement
ಒಂದೂವರೆ ವರ್ಷದ ಹಿಂದೆ ಕರ್ನಾಟಕದ ಕೋಲಾರ, ತುಮಕೂರು, ಬೀದರ್ ಮತ್ತು ಗುಲ್ಬರ್ಗ ಮತ್ತು ಕೇರಳದ ಅಲೆಪ್ಪಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ 4100 ಸಮುದಾಯದ ಸದಸ್ಯರಿಗೆ ಮತ್ತು ಫೈನಾನ್ಷಿಯಲ್ ಕುರಿತಾದ ತರಬೇತಿಯನ್ನು ಹಾಗೂ 410 ಡಿಜಿಟಲ್ ಸಖಿಯರು 4100 ಮಹಿಳಾ ಉದ್ಯಮಿಗಳಿಗೆ ಸಹಾಯ ಹಸ್ತದ ನೆರವಿನೊಂದಿಗೆ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ.
Related Articles
Advertisement
ಡಿಜಿಟಲ್ ಸಖೀಯರ ಕಾರ್ಯಗಳೇನು?: ತಮಗೆ ನಿಗದಿಯಾದ ಗ್ರಾಮಗಳಲ್ಲಿನ ಪ್ರತಿ ಮನೆಯ ಮಹಿಳೆಯರನ್ನು ದಿನದ ಅನುಕೂಲವಾದ ಸಮಯದಲ್ಲಿ ಡಿಜಿಟಲ್ ಸಖಿಯರು ಭೇಟಿ ಮಾಡಿ ಅವರಿಗೆ ಡಿಜಿಟಲ್ ಪಾಟ್‌ಫಾರಂ ವ್ಯವಹಾರಗಳಾದ ಫೋನ್ ಪೇ ಪೇಮೆಂಟ್, ಒಟಿಪಿ, ಎಟಿಎಂ, ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳೆಂದರೇನು ಬ್ಯಾಂಕ್ ವ್ಯವಹಾರ ಹೇಗೆ ಎಂಬಿತ್ಯಾದಿ ಕುರಿತು ತರಬೇತಿ ನೀಡುತ್ತಾರೆ.
ಹೀಗೆ ಮಾಹಿತಿ ನೀಡಿದ ಮಹಿಳೆಯರಿಗೆ ಕುಟುಂಬದ ಆಯ ವ್ಯಯ ದಾಖಲಿಸಲು ವರ್ಕ್ ಬುಕ್ ನೀಡುವುದು ಮೊಬೈಲ್ ಬಳಸುವವರಿಗೆ ಆಯವ್ಯಯ ದಾಖಲಿಸಲು ಕ್ರಿಯೋ ಆಪ್ ಬಳಸುವಂತೆ ಸೂಚಿಸುವುದು. ಇದರಿಂದ ಮಹಿಳೆಯರಿಗೆ ಕುಟುಂಬದ ಆದಾಯವೆಷ್ಟು, ಖರ್ಚು ಎಷ್ಟು, ಉಳಿತಾಯ ಆಗುತ್ತಿದೆಯೇ ಆದಾಯಕ್ಕಿಂತೂ ಹೆಚ್ಚಿನ ಹಣ ವೆತ್ಛವಾಗುತ್ತಿದೆಯೇ ಎಂಬುದರ ಕುರಿತು ನಿಗಾ ಇಡುವುದನ್ನು ಕಲಿಸಲಾಗುವುದು. ನಂತರ ಈ ಮಹಿಳೆಯರಲ್ಲಿ ಉದ್ಯಮಶೀಲತಾ ತರಬೇತಿಯನ್ನು ನೀಡುವ ಮೂಲಕ ಗೃಹೋದ್ಯಮ ಉದ್ದಿಮೆದಾರರನ್ನಾಗಿಸಲು ಪ್ರೋತ್ಸಾಹಿಸುತ್ತಾರೆ. ಈಗಾಗಲೇ ಉದ್ದಿಮೆದಾರರಾಗಿರುವವರನ್ನು ಗುರುತಿಸಿ ಅವರಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದು ಡಿಜಿಟಲ್ ಸಖಿಯರ ಕಾರ್ಯಕ್ರಮವಾಗಿದೆ.
ಶಾಲಾ ಕಾಲೇಜುಗಳಲ್ಲಿ ಮಾಹಿತಿ: ಗ್ರಾಮೀಣ ಮಹಿಳೆಯರನ್ನು ಅವರ ಮನೆಗೆ ಹೋಗಿ ಡಿಜಿಟಲ್ ಸಾಕ್ಷರನ್ನಾಗಿಸುವುದರ ಜೊತೆಗೆ, ಶಾಲಾ ಕಾಲೇಜುಗಳಿಗೆ ತೆರಳು 13 ರಿಂದ 65 ವರ್ಷದ ಗ್ರಾಮೀಣ ಮಹಿಳೆಯರನ್ನು ಸ್ವಸಹಾಯ ಸಂಘಗಳ ಮೂಲಕ ಸಮುದಾಯ ಭೇಟಿಯ ಮೂಲಕ ಸಂಪರ್ಕಿಸಲಾಗುವುದು.
ಡಿಜಿಟಲ್ ಸಖಿ ಕಾರ್ಯಕ್ರಮ ಕುರಿತು ಮೌಖೀಕ ಭೇಟಿಯಲ್ಲಿ ತಿಳಿಸುವುದರ ಜೊತೆಗೆ, ಪಿಪಿಟಿ ಪ್ರದರ್ಶನ, ಗೋಡೆ ಬರಹ, ಶಿಬಿರಗಳ ಮೂಲಕ, ಆರೋಗ್ಯ ಶಿಬಿರ, ವಿವಿಧ ಈವೆಂಟ್ಸ್ ಆಯೋಜನೆ, ಸ್ಪರ್ಧೆ, ಬಹುಮಾನ ವಿತರಣೆಯ ಮೂಲಕವು ಸಾಮುದಾಯಿಕವಾಗಿ ಮಾಹಿತಿ ನೀಡಲಾಗುತ್ತಿದೆ.
ಕೋಲಾರ ಮೊದಲು: ಡಿಜಿಟಲ್ ಸಖಿ ಕಾರ್ಯಕ್ರಮವು ಕರ್ನಾಟಕ, ಕೇರಳ ವಿವಿಧ ಜಿಲ್ಲೆಗಳಲ್ಲಿ ಅನುಷ್ಠಾನವಾಗುತ್ತಿದ್ದರೂ ಕೋಲಾರ ಜಿಲ್ಲೆಯ ಅನುಷ್ಠಾನ ಮೊದಲ ಸ್ಥಾನದಲ್ಲಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಡಿಜಿಟಲ್ ಸಖಿ ಮೂಲಕ ನೀಡಿರುವ ಎಲ್ಲಾ ರೀತಿಯ ಗುರಿಯನ್ನು ಕೋಲಾರ ಜಿಲ್ಲೆಯಲ್ಲಿ ತಲುಪಿರವುದಕ್ಕೆ ಈ ಬಹುಮಾನ ದೊರೆತಿದೆ. ಡಿಜಿಟಲ್ ಸಖಿಯರ ಕಾರ್ಯಕ್ಷಮತೆ ಜೊತೆಗೆ ಕೋಲಾರ ಜಿಲ್ಲೆಯ ಗ್ರಾಮೀಣ ಮಹಿಳೆಯರು ಡಿಜಿಟಲ್ ವ್ಯವಹಾರ ಕಲಿತುಕೊಳ್ಳಲು ತೋರುತ್ತಿರುವ ಆಸಕ್ತಿಯೂ ಇದಕ್ಕೆ ಕಾರಣವಾಗಿದೆ. ಇದರಿಂದ ಉತ್ತೇಜಿತವಾಗಿರುವ ಕಾರ್ಯಕ್ರಮ ಆಯೋಜಕರು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುವ ಮೂಲಕ ತ್ವರಿತಗತಿಯಲ್ಲಿ ಕೋಲಾರ ಮಹಿಳೆಯರನ್ನು ಡಿಜಿಟಲ್ ಸಾಕ್ಷರರನ್ನಾಗಿಸುತ್ತಿದ್ದಾರೆ.
ಡಿಜಿಟಲ್ ಸಖಿಯರನ್ನಾಗಿ ಕೋಲಾರ ಜಿಲ್ಲೆಯಲ್ಲಿ 60 ಮಂದಿಯನ್ನು ನೇಮಕ ಮಾಡಿಕೊಂಡು ಗೌರವ ಧನ ನೀಡಿ ಅವರಿಗೆ ತರಬೇತಿ ನೀಡಿ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಮುಳಬಾಗಿಲು ತಾಲೂಕಿನಲ್ಲಿ ನಡೆಸಲಾಗುತ್ತಿದೆ. ನಂತರ ಇಡೀ ಜಿಲ್ಲೆಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.– ಮಂಜುಳಾ, ಕ್ಲಸ್ಟರ್ ವ್ಯವಸ್ಥಾಪಕರು.
ಡಿಜಿಟಲ್ ಸಖಿ ಐದು ವರ್ಷಗಳ ಕಾಲ ನಡೆಯಲಿದ್ದು, ಈ ಅವಧಿಯಲ್ಲಿ ಉದ್ದೇಶಿದ ತಾಲೂಕುಗಳ ಎಲ್ಲಾ ಗ್ರಾಮ ಗಳ ಎಲ್ಲಾ ಮನೆಗಳನ್ನು ತಲುಪಿ ಪ್ರತಿ ಮಹಿಳೆಯರನ್ನು ಡಿಜಿಟಲ್ ಸಾಕ್ಷರರನ್ನಾಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಡಿಜಿಟಲ್ ಸಖೀಯರು ಆಸಕ್ತಿಯಿಂದ ಶ್ರಮಿಸುತ್ತಿದ್ದಾರೆ. ಮಂಗಳವಾರ ಡಿಜಿಟಲ್ ಸಖಿಯರ ಜಿಲ್ಲಾ ಮಟ್ಟದ ಕಾರ್ಯಾಗಾರವು ಕೋಲಾರದಲ್ಲಿ ನಡೆಯುತ್ತಿದೆ.-ರುಕ್ಸರ್, ಕ್ಲಸ್ಟರ್ ವ್ಯವಸ್ಥಾಪಕರು.
-ಕೆ.ಎಸ್.ಗಣೇಶ್