Advertisement
ಹೌದು.., 2024-25ನೇ ಸಾಲಿನ ನರೇಗಾ ಆಯವ್ಯಯ ಸಿದ್ಧಪಡಿಸಲು ಮುಂದಾಗಿ ರುವ ಜಿಪಂ ಒಂದು ತಿಂಗಳ ಕಾಲ ಜಿಲ್ಲೆಯ 126 ಗ್ರಾಪಂಗಳ ವ್ಯಾಪ್ತಿಯಲ್ಲಿ ಅಭಿಯಾನ ನಡೆಸಿ ಪ್ರತಿಮನೆಗೂ ಯೋಜನೆಯ ಬಗ್ಗೆ ಮಾಹಿತಿ ತಲುಪಿಸುವ ಮೂಲಕ ಯೋಜನೆ ನೂರಕ್ಕೆ ನೂರಷ್ಟು ಫಲಾನುಭವಿಗಳಿಗೆ ಲಾಭವಾಗುವಂತೆ, ಗ್ರಾಮೀಣಾಭಿವೃದ್ಧಿಗೆ ನರೇಗಾ ಯೋಜನೆ ಸಕಹಾರಿಯಾಗುವಂತೆ ಮಾಡುವುದು ಈ ಯೋಜನೆಯ ಗುರಿಯಾಗಿದೆ.
Related Articles
Advertisement
ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಬಿಪಿಎಲ್ ಪಡಿತರ ಚೀಟಿದಾರರನ್ನು ಗುರುತಿಸಿ ಯೋಜನೆ ತಲುಪಿಸಲಾಗುವುದು. ಇನ್ನು ಪ್ರತಿ ಕುಟುಂಬಕ್ಕೆ ಜೀವಿತಾವಧಿಯಲ್ಲಿ 2.50 ಲಕ್ಷರೂ. ಅನುದಾನ ಮಿತಿಗೊಳಿಸಿ, ಯೋಜನೆಯಡಿ ವೈಯಕ್ತಿಕ ಕಾಮಗಾರಿ ನೀಡಲಿದ್ದು, ಈ ಬಗ್ಗೆ ಅಭಿಯಾನದ ಮೂಲಕ ಅರಿವು ಮೂಡಿಸ ಲಾಗುವುದು.
ಮಾಸಾಂತ್ಯಕ್ಕೆ ಗ್ರಾಮ ಸಭೆ: ಅ.30ರಂದು ಗ್ರಾಮ ಸಭೆಯನ್ನು ಆಯೋಜಿಸಲಿದ್ದು, ಗ್ರಾಮಸಭೆಯಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ವಾರ್ಷಿಕ ಕ್ರಿಯಾಯೋಜನೆಗೆ ಅನುಮೋದನೆ ಪಡೆದುಕೊಳ್ಳ ಬೇಕಿದೆ. ಗ್ರಾಮಸಭೆಗೆ ಮುನ್ನಾ ಜಿಲ್ಲೆಯಾದ್ಯಂತ ಅಭಿಯಾನವನ್ನು ನಡೆಸಿ ಸಾರ್ವಜನಿಕರಲ್ಲಿ ಜಾಗƒತಿ ಮೂಡಿಸಲಾಗುವುದು. ಗ್ರಾಮಸಭೆ ಯಲ್ಲಿ ಚುನಾಯಿತ ಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು, ತಾಂತ್ರಿಕ ಸಹಾಯಕರು ಪಾಲ್ಗೊಂಡು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕಾರ್ಯ ಮಾಡಲಿದ್ದಾರೆ.
ಜಿಲ್ಲೆಯ ಪ್ರತಿಯೊಬ್ಬರಿಗೂ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡುವ ಉದ್ದೇಶ ದಿಂದ ಈ ಅಭಿಯಾನವನ್ನು ಜಿಲ್ಲೆಯಲ್ಲಿ ಆರಂಭಿಸಿದ್ದು, ಗ್ರಾಪಂ ಸಿಬ್ಬಂದಿಯ ಜೊತೆಗೆ ಸಾರ್ವ ಜನಿಕರು ಪಾಲ್ಗೊಳ್ಳುವ ಮೂಲಕ ಅಭಿಯಾನ ಯಶಸ್ವಿಗೆ ಸಹಕರಿಸಬೇಕು. ಜಿಲ್ಲೆಯಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಗೊಳಿಸಲು ಈ ಅಭಿಯಾನ ಸಹಕಾರಿ ಯಾಗಿದ್ದು, ಸಾರ್ವಜನಿಕರು, ಚುನಾ ಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ಗಳು ಇದಕ್ಕೆ ಕೈ ಜೋಡಿಸುವ ಮೂಲಕ ಯಶಸ್ವಿಗೆ ಸಹಕರಿಸಿ. –ದಿಗ್ವಿಜಯ್‌ಬೋಡ್ಚೆ, ಸಿಇಓ, ಜಿಪಂ, ರಾಮನಗರ