Advertisement

Indian Businessman: 900 ಕೈದಿಗಳ ಬಿಡುಗಡೆಗಾಗಿ 2.5 ಕೋಟಿ ದಾನ ಮಾಡಿದ ಭಾರತೀಯ ಉದ್ಯಮಿ

09:21 PM Feb 27, 2024 | Team Udayavani |

ದುಬೈ: ರಂಜಾನ್‌ ಹಿನ್ನೆಲೆಯಲ್ಲಿ ಯುಎಇ ಜೈಲುಗಳಲ್ಲಿರುವ 900 ಕೈದಿಗಳ ಬಿಡುಗಡೆಗಾಗಿ ಭಾರತೀಯ ಉದ್ಯಮಿ ಫಿರೋಜ್‌ ಮರ್ಚೆಂಟ್‌ ಅವರು 2.5 ಕೋಟಿ ರೂ.(10 ಲಕ್ಷ ದಿರ್ಹಾಮ್ಸ್‌)ಗಳನ್ನು ದಾನ ಮಾಡಿದ್ದಾರೆ.

Advertisement

ದುಬೈನಲ್ಲಿ ನೆಲೆಸಿರುವ ಪ್ಯೂರ್‌ ಗೋಲ್ಡ್‌ ಜ್ಯುವೆ ಲ್ಲ ರ್ಸ್‌ ಮಾಲೀಕ ಫಿರೋಜ್‌ ಅವರು ದಂಡ ಪಾವತಿಯ ಭಾಗವಾಗಿ ಈ ಹಣವನ್ನು ಯುಎಇ ಅಧಿಕಾರಿಗಳಿಗೆ ನೀಡಿದ್ದಾರೆ.

ಮಾನವೀಯತೆಯ ಆಧಾರದ ಮೇಲೆ ಈ ವರ್ಷ 3,000 ಕೈದಿಗಳನ್ನು ಬಿಡುಗಡೆ ಮಾಡಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಜತೆಗೆ, ಕೈದಿ ಗಳು ತಮ್ಮ ದೇಶಕ್ಕೆ ಮರಳಲು ವಿಮಾನ ಟಿಕೆಟ್‌ ಸಹ ಕೊಡಿಸಿದ್ದಾರೆ. ಅವರು ಈವರೆಗೆ 20,000 ಕೈದಿಗಳನ್ನು ಬಿಡುಗಡೆಯಾಗುವಂತೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next