ಮದ್ದೂರು: ತಾಲೂಕಿನ ಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಹೆಚ್ಚಳವಾಗಿದ್ದು ಸಂಬಂಧಿಸಿದ ಇಲಾಖೆಅಧಿಕಾರಿಗಳು ಅಗತ್ಯ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕು ಎಂದು ಶಾಸಕ ಕೆ.ಸುರೇಶ್‌ಗೌಡ ತಿಳಿಸಿದರು.
ಮದ್ದೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಕೊರೊನಾ ವೈರಸ್ ನಿಯಂತ್ರಣಸಂಬಂಧ ನಡೆದ ತಾಲೂಕು ಮಟ್ಟದಅಧಿಕಾರಿಗಳ ಸಭೆ ವೇಳೆ ಮಾತನಾಡಿದರು. ಕೊಪ್ಪ 8ಗ್ರಾಪಂ ವ್ಯಾಪ್ತಿಯಲ್ಲಿ 166ಸೋಂಕಿತರು ಕಂಡುಬಂದಿದ್ದು, ಸೋಂಕಿತರಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕೂಡಲೇತಪಾಸಣೆ ಕೈಗೊಂಡು ರೋಗ ಹರಡದಂತೆಎಚ್ಚರಿಕೆ ವಹಿಸಬೇಕೆಂದರು.
ಒಂದು ವಾರದೊಳಗಾಗಿ ಕೂಡಲೇ ಪ್ರತೀಗ್ರಾಮಗಳಿಗೆ ಅಂಗನವಾಡಿ, ಆಶಾ, ಆರೋಗ್ಯಕಾರ್ಯಕರ್ತೆಯರು ಭೇಟಿ ನೀಡಿಸೋಂಕಿತರ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನುಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗಬೇಕು ಎಂದರು. ಕೆಲ ಗ್ರಾಮಗಳು ಸೀಲ್‌ಡೌನ್‌ಆಗಿದ್ದು ಅಂತಹ ಗ್ರಾಮಗಳಿಗೆ ತರಕಾರಿ, ದಿನನಿತ್ಯದ ಪದಾರ್ಥ, ಫುಡ್‌ಕಿಟ್ ಇನ್ನಿತರೆಸಾಮಾಗ್ರಿಗಳನ್ನು ಸಮರ್ಪಕವಾಗಿ ಪೂರೈಕೆಮಾಡಲು ಸ್ಥಳೀಯ ಪಿಡಿಓಗಳುಕ್ರಮವಹಿಸಬೇಕು ಎಂದು ತಿಳಿಸಿದರು.
ಕೊಪ್ಪ ವ್ಯಾಪ್ತಿಯಲ್ಲಿ 60 ಸಾವಿರಮತದಾರರಿದ್ದು ಜನಸಂಖ್ಯೆಗನುಗುಣವಾಗಿಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಹಾಗೂಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲುಅಧಿಕಾರಿಗಳು ಮುಂದಾಗಬೇಕೆಂದರಲ್ಲದೆಪ್ರತೀ ಗ್ರಾ.ಪಂ ಪಿಡಿಒಗಳು ಗ್ರಾಮಗಳಿಗೆ ತೆರಳಿಲಸಿಕೆ ಪಡೆಯಲು ಜಾಗೃತಿ ಮೂಡಿಸುವಕಾರ್ಯಕ್ರಮಕ್ಕೆ ಮುಂದಾಗಬೇಕೆಂದರು.
ಜಿಲ್ಲೆಯಲ್ಲಿ ಕೊರೊನಾ ವೈರಸ್ ದಿನೇ ದಿನೆಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಉಸ್ತುವಾರಿ ಸಚಿವರಿಗೆ ಸಂಪೂರ್ಣವಾಗಿ ಜಿಲ್ಲೆಲಾಕ್‌ಡೌನ್ ಮಾಡುವಂತೆ ಜಿಲ್ಲೆಯ ಶಾಸಕರುಗಳು ಮನವಿ ಮಾಡಿರುವುದಾಗಿ ಹೇಳಿದರು.ಮಂಡ್ಯ, ನಾಗಮಂಗಲ, ಮದ್ದೂರು,ಕೆ.ಆರ್.ಪೇಟೆ ತಾಲ್ಲೂಕುಗಳಲ್ಲಿವ್ಯಾಪಾಕರವಾಗಿ ಕೊರೊನಾ ಹರಡುತ್ತಿರುವಹಿನ್ನೆಲೆಯಲ್ಲಿ ಸಮರ್ಪಕವಾಗಿ ಬೆಡ್, ಆಕ್ಸಿಜನ್‌ಸಿಗದೆ ಪರದಾಡುವಂತಾಗಿದ್ದು, 3 ನೇ ಅಲೆಮತ್ತಷ್ಟು ವ್ಯಾಪಾಕವಾಗಿ ಹರಡುವುದಾಗಿತಜ್ಞರು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿಸಂಪೂರ್ಣವಾಗಿ ಜಿಲ್ಲೆಯನ್ನು ಲಾಕ್‌ಡೌನ್‌ಮಾಡಿ ರೋಗ ನಿಯಂತ್ರಣಕ್ಕೆ ಕ್ರಮವಹಿಸಲು ತಿಳಿಸಿದರು.
ಆರೋಪ : ಸಂಸದೆ ಸುಮಲತಾ ಅಂಬರೀಶ್‌ಅವರು ಉಚಿತವಾಗಿ ಆಮ್ಲಜನಕ ಸಿಲಿಂಡರ್‌ನೀಡುತ್ತಿರುವುದಾಗಿ ಹೇಳಿಕೆ ನೀಡಿರುವುದುರಾಜಕೀಯ ಪ್ರೇರಿತ ಎಂದು ಶಾಸಕ ಸುರೇಶ್‌ಗೌಡ ಆರೋಪಿಸಿದರು. ಸರ್ಕಾರದಕೋಟದಡಿಯೇ ಆಸ್ಪತ್ರೆಗಳಿಗೆ ಆಮ್ಲಜನಕಸಿಲಿಂಡರ್‌ಗಳನ್ನು ಪೂರೈಕೆ ಮಾಡುತ್ತಿದ್ದು ತಮ್ಮಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಉಚಿತಆಮ್ಮಜನಕ ಸಿಲಿಂಡರ್ ವಿತರಿಸುತ್ತಿರುವುದಾಗಿಹೇಳಿಕೆ ನೀಡುತ್ತಿರುವ ಕ್ರಮ ಸರಿಯಲ್ಲಎಂದರು.
ತಾಪಂ ಇಓ ಮುನಿರಾಜು, ವೃತ್ತನಿರೀಕ್ಷಕ ಬಿ.ಆರ್.ಗೌಡ, ತಾಲೂಕುಆರೋಗ್ಯಾಧಿಕಾರಿ ಡಾ.ಎಂ.ಎನ್.ಆಶಾಲತಾ,ವೈದ್ಯಾಧಿಕಾರಿ ಡಾ.ಬಾಲಕೃಷ್ಣ, ಬಿಇಓಮಹದೇವು ಇತರರಿದ್ದರು.