Advertisement

ವೈಭವದ ಚೌಡೇಶರಿ ದೇವಿ ದಸರಾ ಉತ್ಸವ

11:43 AM Oct 16, 2021 | Team Udayavani |

ಆನೇಕಲ್‌: ಮೈಸೂರಿನ ದಸರಾ ಉತ್ಸವದ ಮಾದರಿಯಲ್ಲಿ ಆಚರಣೆ ಮಾಡಲಾಗುವ ಆನೇಕಲ್‌ ಪಟ್ಟಣದ ತೊಗಟವೀರ ಜನಾಂಗದವರು ಆಚರಣೆ ಮಾಡಿಕೊಂಡು ಬರುತ್ತಿರುವ ಶ್ರೀ ಚೌಡೇಶ್ವರಿ ಅಮ್ಮನವರ ದಸರಾ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಶ್ರೀ ಚೌಡೇಶ್ವರಿ ಅಮ್ಮನವರ ಅಂಬಾರಿ ಹೊತ್ತ ಆನೆ ದ್ರುವ ಆನೇಕಲ್‌ ಪಟ್ಟಣದ ಚೌಡೇಶ್ವರಿ ದೇವಾಲಯದ ಮುಂಭಾಗದಲ್ಲಿ ಹಾಕಿದ್ದ ವೇದಿಕೆ ಬಳಿ ಬಂದಾಗ ಗಣ್ಯರು ಆನೆ ಹೊತ್ತ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ದೇವಿಯ ಆಶೀರ್ವಾದ ಪಡೆದರು, ಕಲಾತಂಡಗಳು ವೇದಿಕೆಯ ಬಳಿ ಪ್ರದರ್ಶನವನ್ನು ನೀಡಿ ಬಳಿಕ ಆನೇಕಲ್‌ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಬಾರಿಯ ಜೊತೆಗೆ ಮೆರವಣಿಗೆ ನಡೆಸಿದರು.ಅಂಬಾರಿ ಉತ್ಸವಕ್ಕೆ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

Advertisement

ಆದರೆ ಹೆಲಿಕಾಪ್ಟರ್‌ ಬಂದರೂ ಸಹ ಪುಷ್ಪಾರ್ಚನೆ ಮಾಡದೆ ವಾಪಸ್‌ ತೆರಳಿತು. ಚಿಕ್ಕಬಳ್ಳಾಪುರದ ಪುಷ್ಪಾಂಡಜ ಗಿರಿ ಸ್ವಾಮೀಜಿ ಮಾತನಾಡಿ, ವಿಜಯದ ಸಂಕೇತವಾಗಿ ವಿಜಯ ದಶಮಿಯನ್ನು ನಾವು ಆಚರಣೆ ಮಾಡುತ್ತಿದ್ದೇವೆ. ನನ್ನ ಒಳಗಿನ ಮೋಸ ವಂಚನೆ ಅಸೂಯೆ ದೂರ ಆಗಬೇಕು. ಹಬ್ಬಗಳ ಸಂದರ್ಭದಲ್ಲಿ ನಾವು ಚಿಕ್ಕ ವಿಷಯಗಳಿಗೂ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿ ಗಮನಹರಿಸಬೇಕು.

ನಾವು ಈ ಸಮಾಜದ ಜವಾಬ್ದಾರಿಯುತ ವ್ಯಕ್ತಿಗಳಾಗಬೇಕು ಎಂದರು. ಶಾಸಕ ಬಿ ಶಿವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಆನೇಕಲ್‌ ದಸರಾ ಉತ್ಸವ ಮೈಸೂರಿನ ರೀತಿಯಲ್ಲಿ ನಡೆದು ಬರುತ್ತಿದೆ ವರ್ಷದಿಂದ ವರ್ಷಕ್ಕೆ ಭಕ್ತಸಾಗರವೇ ಉತ್ಸವಕ್ಕೆ ಹರಿದುಬರುತ್ತಿದ್ದು, 2 ವರ್ಷದಿಂದ ಕೊರೊನಾ ಕಾರಣದಿಂದ ಉತ್ಸವ ನಡೆದಿರಲಿಲ್ಲ.

ಆದರೂ ಈ ಬಾರಿ ಅತೀ ಹೆಚ್ಚಿನ ಆಸಕ್ತಿಯಿಂದ ಭಕ್ತರು ಆಗಮಿಸಿ ದೇವಿಯ ದರ್ಶನವನ್ನು ಪಡೆಯುತ್ತಿದ್ದಾರೆ ಎಂದರು. ರಾಜಾಪುರ ಸಂಸ್ಥಾನಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಜಿ,ಆನೇಕಲ್‌ ಪುರಸಭಾ ಅಧ್ಯಕ್ಷ ಎನ್‌.ಎಸ್‌ ಪದ್ಮನಾಭ, ಯೋಜನಾ ಪ್ರಾದಿಕಾರದ ಅಧ್ಯಕ್ಷ ಜಯಣ್ಣ, ಶ್ರೀ ಚೌಡೇಶ್ವರಿ ಸೇವಾ ಸಮಿತಿ ಗೌರವ ಅಧ್ಯಕ್ಷ ನಾಗರಾಜು, ಅಧ್ಯಕ್ಷ ವೆಂಕಟಾಚಲಯ್ಯ, ಕಾರ್ಯದರ್ಶಿ ಆರ್‌ ಎಸ್‌ ರಾಜು, ಖಜಾಂಚಿ ಬಾಲ ಕೃಷ್ಣಪ್ಪ,ಬಿಜೆಪಿ ಮುಖಂಡರಾದ ಟಿ. ಬಾಬು, ಜೆ.ನಾರಾ ಯಣಪ್ಪ, ಆನೇಕಲ್‌ ಪುರಸಭೆಯ ಉಪಾಧ್ಯಕ್ಷೆ ಲಲಿತಾ ಲಕ್ಷ್ಮೀನಾರಾಯಣ, ಆನೇಕಲ್‌ ಪುರಸಭೆಯ ಸದಸ್ಯರಾದ ಬಿ. ನಾಗರಾಜು, ಶ್ರೀನಿವಾಸ್‌, ಮುನಾವರ್‌, ಶ್ರೀಕಾಂತ್‌,ದೊರೆ,ಕೃಷ್ಣ, ಸುಧಾ ನಿರಂಜನ್‌, ನಾಮ ನಿರ್ದೇಶಿತ ಸದಸ್ಯ ಮಂಜುನಾಥ್‌ ಮತ್ತಿತರರು ಹಾಜರಿದ್ದರು.

ನಾವೆಲ್ಲರೂ ಒಂದೇ ಎನ್ನುವ ಭಾವನೆ ಅಗತ್ಯ-

Advertisement

ವ್ಯಕ್ತಿಪೂಜೆ ಮಾಡುವುದರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ನಾವೆಲ್ಲರೂ ಒಂದೇ ಎನ್ನುವ ಭಾವನೆ ಅಗತ್ಯ. ಕೇವಲ ದೇವರ ಆರಾಧನೆ ಮಾತ್ರ ಮಾಡುವುದಲ್ಲ, ನಮ್ಮಲ್ಲಿರುವ ದುಷ್ಟ ಶಕ್ತಿ ದೂರಾಗಬೇಕು. ನಾವು ಬದಲಾಗಬೇಕು,ದೇಶದಲ್ಲಿ ಶಾಂತಿ ಸ್ಥಾಪನೆ ಆಗಬೇಕು. ನಮ್ಮ ಬದುಕು ಇತರರಿಗೆ ಮಾದರಿಯಾಗಬೇಕು ಎನ್ನುವ ನಿಟ್ಟಿನಲ್ಲಿ ನಾವೆಲ್ಲರೂ ಬದಲಾವಣೆಯತ್ತ ಸಾಗಬೇಕು. ಆನೇಕಲ್‌ ದಸರಾ ಉತ್ಸವ ಮೈಸೂರಿನ ದಸರಾ ಮಾದರಿ ನಡೆಯುತ್ತಿರುವುದು ಆನೇಕಲ್‌ ಮಣ್ಣಿನಲ್ಲಿ ಹುಟ್ಟಿದ ನನಗೆ ಅತೀವ ಹೆಮ್ಮೆ ತರುವ ವಿಚಾರ ಎಂದು ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.

ಅಂಬಾರಿ ಬಳಿ ಭಕ್ತಸಾಗರ-

ಆನ್‌ಕಲ್‌ ದಸರಾಗೆ ಬಿಗಿ ಪೊಲೀಸ್‌ ಭದ್ರತೆ- ಉತ್ಸವದ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಎಲ್ಲಿ ನೋಡಿದರೂ ಭಕ್ತಸಾಗರ- ಅಂಬಾರಿ ಹೊತ್ತ ಆನೆ ದ್ರುವ ಚೌಡೇಶ್ವರಿ ದೇವಿ ದೇವಾಲಯದ ಬಳಿ ಬರುತ್ತಿದ್ದಂತೆ ದೇವಾಲಯದ ಆವರಣ ಹಾಗೂ ಸುತ್ತಮುತ್ತ ಭಕ್ತಸಾಗರವೇ ನೆರೆದಿತ್ತು. ಜೆಡಿಎಸ್‌ ಪಕ್ಷದ ಆಭ್ಯರ್ಥಿ ಕೆ ಪಿ ರಾಜು ದೇವಿಯ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next