Advertisement

Thief: ಶೆಡ್‌ನಿಂದ ವಿದ್ಯುತ್‌ ಚಾಲಿತ ಪಂಪು ಕಳವು

11:28 PM Sep 08, 2023 | Team Udayavani |

ಬೆಳ್ತಂಗಡಿ: ಕುಕ್ಕೇಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸರಕಾರಿ ಕಾಮಗಾರಿಗಾಗಿ ಬೆಳ್ತಂಗಡಿ ತಾಲೂಕು ನಿಟ್ಟಡೆ ಗ್ರಾಮದ ಸತ್ಯರಾಜ್‌ ಅವರ ತೋಟದ ಶೆಡ್‌ನ‌ಲ್ಲಿ ತಂದಿರಿಸಿದ್ದ ಅಂದಾಜು 70,000 ರೂ. ಮೌಲ್ಯದ ಎರಡು ವಿದ್ಯುತ್‌ ಚಾಲಿತ ಪಂಪುಗಳನ್ನು ಹಾಗೂ ಶೆಡ್‌ನ‌ ಹೊರಗಡೆ ಇರಿಸಿದ್ದ ಪೈಪುಗಳನ್ನು, ಯಾರೋ ಕಳ್ಳರು ಕಳವುಗೈದಿದ್ದಾರೆ.

Advertisement

ಆ. 23ರಂದು ಸಂಜೆಯಿಂದ ಸೆ. 7ರಂದು ಮಧ್ಯಾಹ್ನದ ಅವಧಿಯಲ್ಲಿ ಶೆಡ್‌ ಬಾಗಿಲನ್ನು ಮುರಿದು ಕಳವು ಮಾಡಿಕೊಂಡು ಹೋಗಿರುವುದಾಗಿ ಹಿರೆಕೆರೂರು ತಾಲೂಕು ಹಾವೇರಿ ಜಿಲ್ಲಾ ನಿವಾಸಿ ಪವನ್‌ ಎಸ್‌. ಹಿತ್ತಲಮನೆ ಅವರು ನೀಡಿದ ದೂರಿನಂತೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next