Advertisement

ಪಪಂ ಆಗಿ ವರ್ಷವಾದ್ರೂ ಇನ್ನೂ ನಡೆಯದ ಚುನಾವಣೆ

06:04 PM May 21, 2022 | Team Udayavani |

ಶಿರೂರ: ಶಿರೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ ಒಂದು ವರ್ಷ ಗತಿಸಿದರೂ ಇನ್ನೂ ಚುನಾವಣೆ ನಡೆದಿಲ್ಲ. ಪಪಂ ಸದಸ್ಯರಾಗಬೇಕೆಂಬ ಕನಸು ಕಾಣುತ್ತಿರುವ ಆಕಾಂಕ್ಷಿ ಯುವಕರು ಚುನಾವಣೆ ಯಾವಾಗ ನಡೆಯುತ್ತದೆ ಎಂಬುದನ್ನು ಕಾಯುತ್ತಿದ್ದಾರೆ.

Advertisement

ಶಾಸಕ ಡಾ|ವೀರಣ್ಣ ಚರಂತಿಮಠ ಅವರು ತಮ್ಮ ಕ್ಷೇತ್ರದಲ್ಲಿ ಬರುವ ಶಿರೂರನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸರಕಾರದ ಮೇಲೆ ಒತ್ತಡ ಹಾಕಿದ್ದರು. ಪರಿಣಾಮ 2021 ಏಪ್ರಿಲ್‌ 21ರಂದು ಶಿರೂರ, ನೀಲಾನಗರ, ಗುಂಡನಪಲ್ಲೆ ಗ್ರಾಮಗಳು ಸೇರಿ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಚುನಾವಣೆ ಇಲ್ಲದ ಕಾರಣ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಚರ್ಚೆಗೆ ಕಾರಣವಾಗಿದೆ.

ಅಧಿಕಾರಿಗಳಿಂದ ಆಡಳಿತ: ಜನಪ್ರತಿನಿಧಿಗಳು ಇಲ್ಲದಿದ್ದರೂ ಅಧಿಕಾರಿಗಳ ನೇತೃತ್ವದಲ್ಲಿ ಆಡಳಿತ ನಡೆಯುತ್ತಿದೆ. ಪಟ್ಟಣದಲ್ಲಿ ಯಾವುದೇ ಸಮಸ್ಯೆಗಳು ಬಾರದಂತೆ ಆಡಳಿತ ನಡೆಯುತ್ತಿದೆ.

ವಾರ್ಡ್ವಿಂಗಡನೆ: ಕಳೆದ ನಾಲ್ಕು ತಿಂಗಳಿಂದಲೇ ಪಪಂ ವಾರ್ಡ್‌ ವಿಂಗಡಣೆ ಮಾಡಲಾಗಿದ್ದು, ಶಿರೂರಲ್ಲಿ 12, ನೀಲಾನಗರದಲ್ಲಿ 04, ಗುಂಡನಪಲ್ಲೆ ಗ್ರಾಮದಲ್ಲಿ 01 ಸೇರಿ ಒಟ್ಟು 17 ವಾರ್ಡ್‌ಗಳನ್ನು ವಿಂಗಡಣೆ ಮಾಡಲಾಗಿದೆ. ಈಗಾಗಲೇ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರು ಪಟ್ಟಣದಲ್ಲಿ ಸಂಚರಿಸಿ ನಿಯಮಾನುಸಾರವಾಗಿ ವಾರ್ಡ್‌ಗಳನ್ನು ಪರಿಶೀಲಿಸಿದ್ದಾರೆ.

ತಕರಾರು ಅರ್ಜಿ ಸಲ್ಲಿಕೆ: ಶಿರೂರ ಪಪಂ ವ್ಯಾಪ್ತಿಗೆ ಬರುವ ನೀಲಾನಗರ ಬಂಜಾರಾ ಸಮಾಜದವರು ನೀಲಾನಗರ ಗ್ರಾಮವನ್ನು ಶಿರೂರ ಪಪಂಗೆ ಸೇರಿಸಬಾರದು. ಇದರಿಂದ ಶಾಲಾ ಮಕ್ಕಳಿಗೆ ಗ್ರಾಮೀಣ ಅಂಕ ಇತ್ಯಾದಿ ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಹೀಗಾಗಿ ಗ್ರಾಮ ಪಂಚಾಯಿತಿಯೇ ಇರಲಿ ಎಂದು ಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.

Advertisement

2011ರ ಜನಗಣತಿಯ ಬ್ಲಾಕ್‌ಗಳ ಆಧಾರಿತ ಮೇಲೆ ರಚಿಸಿದ 17 ವಾರ್ಡ್‌ಗಳನ್ನು ಉಪ ವಿಭಾಗಾಧಿಕಾರಿಗಳಿಗೆ ಅಧಿಸೂಚನೆ ಹೊರಡಿಸಲು ಪ್ರಸ್ತಾಪಿಸಿದ್ದೆವು. ಅದರ ಪ್ರಕಾರ ಉಪವಿಭಾಗಾಕಾರಿಗಳಾದ ಶ್ವೇತಾ ಬೀಡಿಕರ್‌ ಅವರು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಯಾವುದೇ ವ್ಯಕ್ತಿಗಳು ಆಕ್ಷೇಪಣೆ- ಸಲಹೆಗಳನ್ನು ಪ್ರಕಟಣೆಗೊಂಡ 15 ದಿನಗಳೊಳಗೆ ಸಲ್ಲಿಸಲು ಸೂಚಿಸಿದ್ದಾರೆ. ಈ ಪ್ರಕ್ರಿಯೆ ಮುಗಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಐ.ಜಿ ಕೊಣ್ಣೂರ, ಪಪಂ ಅಧಿಕಾರಿ, ಶಿರೂರ.

ಪಟ್ಟಣ ಅಭಿವೃದ್ಧಿಗೆ ಜನಪ್ರತಿನಿಧಿಗಳ ಸಹಕಾರ ಅಗತ್ಯವಿದ್ದು, ಸರಕಾರ ಕಾನೂನು ತೊಡಕುಗಳನ್ನು ಸರಿಪಡಿಸಿ ಕೂಡಲೇ ಚುನಾವಣೆ ಘೋಷಿಸಬೇಕು. ಕಲ್ಲಪ್ಪ ಭಗವತಿ, ಶಿರೂರ

Advertisement

Udayavani is now on Telegram. Click here to join our channel and stay updated with the latest news.

Next