Advertisement

ನೌಶೇರಾ ಸೆಕ್ಟರ್‌ನಲ್ಲಿ ಗಡಿ ನುಸುಳುತ್ತಿದ್ದ ಪಾಕ್ ಉಗ್ರನ ಹತ್ಯೆಗೈದ ಸೇನೆ

06:07 PM Apr 04, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯ ನೌಶೇರಾ ಸೆಕ್ಟರ್‌ನಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನದ ಉಗ್ರಗಾಮಿಗಳ ಗುಂಪೊಂದು ಒಳನುಸುಳುವಿಕೆಯ ಪ್ರಯತ್ನದ ವೇಳೆ ಓರ್ವ ಉಗ್ರರನ್ನು ಕೊಂದಿರುವುದಾಗಿ ಸೋಮವಾರ ಸೇನೆ ಹೇಳಿಕೊಂಡಿದೆ.

Advertisement

ಭಾನುವಾರ ರಾತ್ರಿಯ ಬಳಿಕ ನಿಯಂತ್ರಣ ರೇಖೆಯ ಉದ್ದಕ್ಕೂ ನೌಶೇರಾ ಸೆಕ್ಟರ್‌ನ ಜಾಂಗರ್ ಪ್ರದೇಶದಲ್ಲಿ ಒಳನುಸುಳುವಿಕೆ ಯತ್ನ ಮಾಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

“ಇದುವರೆಗೆ ಒಬ್ಬ ಉಗ್ರನನ್ನು ಕೊಲ್ಲಲಾಗಿದ್ದು,ಆತನ ದೇಹವನ್ನು ಮತ್ತು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next