Advertisement

ರೈಲ್ವೇಯನ್ನು ಹಳಿಗೆ ತರುವ ಪ್ರಯತ್ನ

01:36 PM Oct 10, 2017 | |

ಪದೇ ಪದೇ ಸಂಭವಿಸಿದ ಅವಘಡ, ನಿರಂತರವಾಗಿ ಆಗುತ್ತಿರುವ ನಷ್ಟದಿಂದ ಬಹುತೇಕ ಹಳಿ ತಪ್ಪಿರುವ ರೈಲ್ವೇ ಇಲಾಖೆಯನ್ನು ಮರಳಿ ಹಳಿಯ ಮೇಲೆ ತರಲು ನೂತನ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ದೃಢ ಹೆಜ್ಜೆಗಳನ್ನಿಡುತ್ತಿರುವಂತೆ ಕಾಣಿಸುತ್ತಿದೆ. ರೈಲ್ವೇ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಬರುವಾಗ ಅವರನ್ನು ಸ್ವಾಗತಿಸಲು ಉನ್ನತ ಅಧಿಕಾರಿಗಳು ಹೋಗುವುದು, ಅಧಿಕಾರಿಗಳ ಮನೆಯಲ್ಲಿ ರೈಲ್ವೇ ಸಿಬಂದಿ ಆರ್ಡರ್ಲಿ ಸೇವೆಯ ನೆಪದಲ್ಲಿ ಚಾಕರಿ ಮಾಡುವಂತಹ ಸಂಸ್ಕೃತಿಯನ್ನು ರದ್ದುಪಡಿಸಲು ರೈಲ್ವೇ ಮುಂದಾಗಿರುವುದು ರೈಲ್ವೇ ಸೇವೆಯನ್ನು ಸುಸೂತ್ರಗೊಳಿಸಲು ಕೈಗೊಂಡಿರುವ ಕ್ರಮಗಳು.

Advertisement

ರೈಲ್ವೇ ಮಂಡಳಿಯ ಅಧ್ಯಕ್ಷರು ಅಥವಾ ಸದಸ್ಯರು ಬರುವಾಗ ಮತ್ತು ನಿರ್ಗಮಿಸುವಾಗ ಜನರಲ್‌ ಮೆನೇಜರ್‌ ಹಾಜರಿರುವುದು ಕಡ್ಡಾಯವಾಗಿತ್ತು. ಸುಮಾರು ಮೂರೂವರೆ ದಶಕದಿಂದ ಆಚರಣೆಯಲ್ಲಿದ್ದ ಈ ಶಿಷ್ಟಾಚಾರವನ್ನು ರದ್ದುಪಡಿಸಲು ರೈಲ್ವೇ ಸಚಿವಾಲಯ ಆದೇಶಿಸಿದೆ. ಅದೇ ರೀತಿ ದಶಕಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಆರ್ಡರ್ಲಿ ಸೇವೆಯೂ ರದ್ದಾಗಲಿದೆ. ಸಾಮಾನ್ಯವಾಗಿ ಟ್ರ್ಯಾಕ್‌ವೆುನ್‌ಗಳನ್ನೇ ಆರ್ಡರ್ಲಿ ಚಾಕರಿಗೆ ನೇಮಿಸಲಾಗುತ್ತದೆ. ಸದ್ಯ ಸುಮಾರು 30,000 ಟ್ರ್ಯಾಕ್‌ವೆುನ್‌ಗಳು ಆರ್ಡರ್ಲಿ ಸೇವೆಯಲ್ಲಿದ್ದಾರೆ. ಈ ಪೈಕಿ ಆದೇಶ ಹೊರಬಿದ್ದ ಕೂಡಲೇ ಸುಮಾರು 7,000 ಸಿಬ್ಬಂದಿಯನ್ನು ಈ ಚಾಕರಿಯಿಂದ ಬಿಡುಗಡೆಗೊಳಿಸಲಾಗಿದೆ. ಉಳಿದವರು ಸದ್ಯದಲ್ಲೇ ಬಿಡುಗಡೆಗೊಳ್ಳಲಿದ್ದಾರೆ. ಹಳಿ ತಪಾಸಣೆ ಮಾಡುವ ಕೆಲಸಕ್ಕೆ ನೇಮಕಗೊಂಡಿರುವ ಟ್ರ್ಯಾಕ್‌ವೆುನ್‌ಗಳನ್ನು ಮನೆ ಚಾಕರಿಗೆ ಇಟ್ಟುಕೊಳ್ಳುವುದು ಸರಿಯಲ್ಲ ಎನ್ನುವುದು ತಡವಾಗಿಯಾದರೂ ರೈಲ್ವೇ ಇಲಾಖೆಗೆ ಅರಿವಾಗಿರುವುದು ಶುಭಸೂಚಕ. ಇತ್ತೀಚೆಗೆ ನಡೆದಿರುವ ಕೆಲವು ಅವಘಡಗಳಿಗೆ ಹಳಿಗಳ ತಪಾಸಣೆ ಸಮರ್ಪಕವಾಗಿ ಆಗದೇ ಇರುವುದು ಕೂಡ ಕಾರಣವಾಗಿತ್ತು ಎನ್ನುವ ಅಂಶ ಟ್ರ್ಯಾಕ್‌ವೆುನ್‌ಗಳು ರೈಲ್ವೇಗೆ ಎಷ್ಟು ಅಗತ್ಯ ಎನ್ನುವುದನ್ನು ತಿಳಿಸುತ್ತದೆ. ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿದ್ದ ಆರ್ಡರ್ಲಿ ಪದ್ಧತಿ ಕೆಲ ಸಮಯದ ಹಿಂದೆ ರದ್ದಾಗಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಆದರೆ ರಾಜ್ಯ ಸರಕಾರ ಆರ್ಡರ್ಲಿ ಪದ್ಧತಿ ರದ್ದು ಮಾಡಲು ಪೊಲೀಸರು ಮುಷ್ಕರಕ್ಕಿಳಿಯಬೇಕಾಯಿತು. 

ಇಂತಹ ಹಲವು ಅನಗತ್ಯ ಶಿಷ್ಟಾಚಾರಗಳಿಗೆ ರೈಲ್ವೇ ಸಚಿವಾಲಯ ತಿಲಾಂಜಲಿ ನೀಡಲು ಸೆ.28ರಂದು ಆದೇಶ ಹೊರಡಿಸಿದೆ. ಶಿಷ್ಟಾಚಾರಗಳನ್ನು ರದ್ದುಪಡಿಸುವ ಜತೆಗೆ ಅಧಿಕಾರಿಗಳಿಗೆ ಸಿಗುತ್ತಿರುವ ಕೆಲವು ವಿಐಪಿ ಸೌಲಭ್ಯಗಳಿಗೂ ಸಚಿವಾಲಯ ಬ್ರೇಕ್‌ ಹಾಕಲು ಮುಂದಾಗಿದೆ. ಸಾಮಾನ್ಯವಾಗಿ ರೈಲ್ವೇ ಉನ್ನತ ಅಧಿಕಾರಿಗಳಿಗೆ ಮತ್ತು ಕುಟುಂಬದ ಸದಸ್ಯರಿಗೆ ಐಷಾರಾಮಿ ದರ್ಜೆಯ ಬೋಗಿಯಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿರುತ್ತದೆ. ಇನ್ನು ಮುಂದೆ ಅಧಿಕಾರಿಗಳು ಐಷರಾಮಿ ದರ್ಜೆಯನ್ನು ಪ್ರಯಾಣಿಕರಿಗೆ ಬಿಟ್ಟುಕೊಟ್ಟು ಸ್ಲಿàಪರ್‌ ಅಥವಾ ತ್ರಿ ಟಯರ್‌ ಎಸಿ ದರ್ಜೆಯಲ್ಲಿ ಮಾತ್ರ ಪ್ರಯಾಣಿಸಬೇಕೆಂದು ಪಿಯೂಷ್‌ ಗೋಯಲ್‌ ಸೂಚಿಸಿದ್ದಾರೆ. ರೈಲ್ವೇ ಮಂಡಳಿಯ ಸದಸ್ಯರು, ವಲಯ ಮತ್ತು ವಿಭಾಗೀಯ ಮೆನೇಜರ್‌ಗಳು, ಜನರಲ್‌ ಮೆನೇಜರ್‌ಗಳಿಗೆಲ್ಲ ಈ ಸೂಚನೆ ಅನ್ವಯವಾಗುತ್ತದೆ. ಇದರಿಂದ ರೈಲ್ವೇಗೆ ಎರಡು ರೀತಿಯ ಲಾಭವಿದೆ.

ಒಂದು ಐಷರಾಮಿ ದರ್ಜೆಯ ಟಿಕೇಟ್‌ಗಳು ಮಾರಾಟವಾಗಿ ರೈಲ್ವೇಗೆ ಒಂದಷ್ಟು ಲಾಭವಾಗುತ್ತದೆ. ಎರಡನೆಯದಾಗಿ ಉನ್ನತ ಅಧಿಕಾರಿಗಳೇ ಸ್ಲಿàಪರ್‌ ಅಥವಾ ತ್ರಿ ಟಯರ್‌ ದರ್ಜೆಯಲ್ಲಿ ಪ್ರಯಾಣಿಸಿದರೆ ಆ ದರ್ಜೆಯ ಕುಂದುಕೊರತೆಗಳೆಲ್ಲ ಸ್ವತಃ ಅನುಭವಕ್ಕೆ ಬರುತ್ತದೆ. ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಅಗತ್ಯವಿಲ್ಲದಿದ್ದರೂ ವರ್ಷಕ್ಕೊಮ್ಮೆ ಕುಟುಂಬ ಸದಸ್ಯರ ಜತೆಗೆ ಪ್ರವಾಸ ಹೊರಡುವ ಅಧಿಕಾರಿಗಳು ಸಾಕಷ್ಟಿದ್ದಾರೆ.  ಅಧಿಕಾರಿಗಳು ಬರುವಾಗ ಹೂಗುತ್ಛ ನೀಡಿ ಸ್ವಾಗತಿಸುವುದು, ನಿರ್ಗಮಿಸುವಾಗ ಉಡುಗೊರೆ ನೀಡಿ ಬೀಳ್ಕೊಡುವಂತಹ ಸಂಪ್ರದಾಯಗಳು ಕೂಡ ರದ್ದಾಗಿವೆ. ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವನಿ ಲೋಹಾನಿ ಕಳೆದ ಆಗಸ್ಟ್‌ನಲ್ಲಿ ಅಧಿಕಾರ ಸ್ವೀಕರಿಸಿದ ಬೆನ್ನಿಗೆ ಕೈಗೊಂಡ ನಿರ್ಧಾರದ ಪರಿಣಾಮವಿದು. ಇದರಿಂದಾಗಿ ಅನಗತ್ಯ ಖರ್ಚುಗಳು ಉಳಿಯುವುದಲ್ಲದೆ ಉಡುಗೊರೆ ನೀಡಿ ಪೂಸಿ ಹೊಡೆಯುವ ಚಾಳಿಗೂ ತಡೆ ಬೀಳುತ್ತದೆ. ಶಿಷ್ಟಾಚಾರ ಬೇಡ ಎಂದು ಸ್ವತಃ ಸಚಿವಾಲಯವೇ ಹೇಳಿದರೂ ಅಧಿಕಾರಿಗಳಿಗೆ ಮಾತ್ರ ಹಳೆಯ ಅಭ್ಯಾಸ ಬಿಟ್ಟು ಹೋಗುವುದಿಲ್ಲ. ಇತ್ತೀಚೆಗೆ ಮುಂಬಯಿ ರೈಲ್ವೇ ಮೇಲ್ಸೇತುವೆಯಲ್ಲಿ ಕಾಲು¤ಳಿತ ಸಂಭವಿಸಿದ ಸಂದರ್ಭದಲ್ಲಿ ಪರಿಸ್ಥಿತಿಯ ಅವಲೋಕನಕ್ಕಾಗಿ ಲೋಹಾನಿ ಬಂದಾಗ ಸುಮಾರು 20 ಉನ್ನತಾಧಿಕಾರಿಗಳು ದುರಂತವನ್ನು ನಿಭಾಯಿಸುವ ಕೆಲಸ ಬಿಟ್ಟು ಅವರನ್ನು ಸ್ವಾಗತಿಸಲು ತಯಾರಾಗಿ ನಿಂತಿದ್ದರು. ಇಂತಹ ಶಿಷ್ಟಾಚಾರಗಳು ಕೂಡ ರದ್ದಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next