Advertisement
ರೋಗಿಯಿದ್ದ ಆ್ಯಂಬುಲೆನ್ಸ್‌ಗೆ ಕರ್ನಾಟಕ ಆ್ಯಂಬುಲೆನ್ಸ್ ಚಾಲಕ ಸಂಘಟನೆಯ ಸದಸ್ಯರು ವಿಶಿಷ್ಟವಾಗಿ ಸಹಕರಿಸಿದರು. ಆಯಾ ತಾಲೂಕಿನ ವ್ಯಾಪ್ತಿಯಲ್ಲಿ ಈ ಆ್ಯಂಬುಲೆನ್ಸ್‌ಗೆ ಹಿಂದು ಮುಂದು ಒಂದೊಂದು ಆ್ಯಂಬುಲೆನ್ಸ್ ಸಾಗಿತು. ಹೀಗೆ ಒಟ್ಟು ಮೂರು ಆ್ಯಂಬುಲೆನ್ಸ್ ಜೋರಾದ ಸೈರನ್‌ನೊಂದಿಗೆ ಸಾಗುತ್ತಿದ್ದಾಗ ಸಹಜವಾಗಿಯೇ ವಾಹನಗಳು ದಾರಿ ಮಾಡಿಕೊಟ್ಟವು. ಚತುಷ್ಪಥ ಕಾಮಗಾರಿಯ ಐಆರ್‌ಬಿ ಕಂಪೆನಿ ತನ್ನ ಗಡಿಯವರೆಗೆ ಆ್ಯಂಬುಲೆನ್ಸ್‌ಗಳನ್ನು ನೀಡಿತು. ಒಬ್ಬರಿಗೊಬ್ಬರು ಮೊಬೈಲ್‌ನಲ್ಲಿ ಸಂದೇಶ ನೀಡುತ್ತ ಖೋ ಕೊಟ್ಟವರಂತೆ ಮುಂದಿನ ಊರಿಗೆ ತಲುಪಿಸುತ್ತ ಸಂಘಟನೆಯ ಸದಸ್ಯರು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುತ್ತಿದ್ದರು. ಇಲ್ಲಿ ಮಾತ್ರ ಆ್ಯಂಬುಲೆನ್ಸ್ ಸಂಘಟನೆಯ ಸಹಕಾರದೊಂದಿಗೆ ಭಿನ್ನ ವ್ಯವಸ್ಥೆ ಮಾಡಲಾಗಿತ್ತು. ಇದರ ಫಲವಾಗಿ ಸರಾಸರಿ 54 ಕಿ.ಮೀ. ವೇಗದಲ್ಲಿ ಶಿರಸಿಯಿಂದ 275 ಕಿ.ಮೀ. ದೂರದ ಮಂಗಳೂರಿಗೆ ಆ್ಯಂಬುಲೆನ್ಸ್ ಕ್ರಮಿಸಿತ್ತು.